ಸಾಯಿ ಬಾಬಾ ಮೂರ್ತಿ ಸ್ಥಾಪನೆಗೆ ಸಿದ್ಧತೆ

ಯಲಬುರ್ಗಾದ ಸಾಯಿ ಧ್ಯಾನ ಮಂದಿರದ 8ನೇ ವಾರ್ಷಿಕೋತ್ಸವ ನಿಮಿತ್ತ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಮಂದಿರದ ಮುಖ್ಯಸ್ಥ ವಿಜಯ ಕುಮಾರ್ ದೇಸಾಯಿ, ವರ್ತಕರಾದ ಮಲ್ಲಿಕಾರ್ಜುನ ಉಳ್ಳಾಗಡ್ಡಿ, ಸಂಗಣ್ಣ ತೆಂಗಿನಕಾಯಿ, ಜಿಪಂ ಮಾಜಿ ಉಪಾಧ್ಯಕ್ಷ ಶಿವಶಂಕರ ದೇಸಾಯಿ, ವಕೀಲ ಬಿ.ಎಂ.ಶಿರೂರು, ಕಸಾಪ ಜಿಲ್ಲಾ ಮಾಜಿ ಅಧ್ಯಕ್ಷ ವೀರಣ್ಣ ನಿಂಗೋಜಿ, ನಿವೃತ್ತ ಶಿಕ್ಷಕ ಅಶೋಕ ಮಾಲಿಪಾಟೀಲ್ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಮೂರ್ತಿ ಸ್ಥಾಪನೆಗೆ ಸಿದ್ಧತೆ

ಸಾಯಿಬಾಬಾ ಮೂರ್ತಿ ಸ್ಥಾಪನೆಗೆ ಸಿದ್ಧತೆ

ಯಲಬುರ್ಗಾ: ಪಟ್ಟಣ ಹೊರ ವಲಯದ ಸಾಯಿ ಮಂದಿರದಲ್ಲಿ ಸಾಯಿಬಾಬಾ ಮೂರ್ತಿ ಸ್ಥಾಪನೆಗೆ ಶೀಘ್ರವೇ ದಿನಾಂಕ ನಿಗದಿಪಡಿಸಲಾಗುವುದು ಎಂದು ಸಾಯಿ ಮಂದಿರ ಮುಖ್ಯಸ್ಥ, ಹೈಕೋರ್ಟ್ ವಕೀಲ ವಿಜಯ ಕುಮಾರ್ ದೇಸಾಯಿ ಹೇಳಿದರು.
ಪಟ್ಟಣ ಹೊರ ವಲಯದ ಸಾಯಿ ಧ್ಯಾನ ಮಂದಿರದ 8ನೇ ವಾರ್ಷಿಕೋತ್ಸವ ನಿಮಿತ್ತ ಗುರುವಾರ ಹಮ್ಮಿಕೊಂಡಿದ್ದ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು. 8 ವರ್ಷದ ಹಿಂದೆ ಸ್ಥಾಪಿಸಿದ ಬಾಬಾ ಧ್ಯಾನ ಮಂದಿರದ ವಾರ್ಷಿಕೋತ್ಸವ ನಿಮಿತ್ತ ಜೈಪುರದಿಂದ ತರಲಾಗುವ ಬಾಬಾ ಮೂರ್ತಿ ಸ್ಥಾಪಿಸಲು ಎಲ್ಲ ಸಿದ್ಧತೆ ಕೈಗೊಳ್ಳಲಾಗಿದೆ.
ಈ ಕಾರ್ಯ ಸಾಧನೆಗೆ ಜೂನ್ ಅಥವಾ ಜುಲೈ ತಿಂಗಳಲ್ಲಿ ದಿನಾಂಕ ನಿಗದಿಪಡಿಸಲಾಗುವುದು ಎಂದು ತಿಳಿಸಿದರು. ನಂತರ ಸಂಗೀತ ಕಾರ್ಯಕ್ರಮ ಹಾಗೂ ಪ್ರಸಾದ ಸೇವೆ ನಡೆಯಿತು.
ವರ್ತಕರಾದ ಮಲ್ಲಿಕಾರ್ಜುನ ಉಳ್ಳಾಗಡ್ಡಿ, ಸಂಗಣ್ಣ ತೆಂಗಿನಕಾಯಿ, ಜಿಪಂ ಮಾಜಿ ಉಪಾಧ್ಯಕ್ಷ ಶಿವಶಂಕರ ದೇಸಾಯಿ, ವಕೀಲ ಬಿ.ಎಂ.ಶಿರೂರು, ಕಸಾಪ ಜಿಲ್ಲಾ ಮಾಜಿ ಅಧ್ಯಕ್ಷ ವೀರಣ್ಣ ನಿಂಗೋಜಿ, ನಿವೃತ್ತ ಶಿಕ್ಷಕ ಅಶೋಕ ಮಾಲಿಪಾಟೀಲ್, ಪ್ರಮುಖರಾದ ಮುದಕಪ್ಪ ಗಾಣಿಗೇರ, ಮಾತೋಶ್ರೀ ಗಿರಿಜಾ ದೇಸಾಯಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net