ಸಿಎಂ ಭೇಟಿಗೆ ಸಮುದಾಯದ ಸಚಿವರಿಂದಲೇ ಅಡ್ಡಿ

ಗಂಗಾವತಿಯಲ್ಲಿ ಹಮ್ಮಿಕೊಂಡ ತಾಲೂಕು ಮಟ್ಟದ ಸಮಾಜದ ಪೂರ್ವಭಾವಿ ಸಭೆಯಲ್ಲಿ ಆರ್ಯ ಈಡಿಗ ಸಮಾಜದ ಪೀಠಾಧಿಪತಿ ಡಾ.ಶ್ರೀ ಪ್ರಣವಾನಂದ ಸ್ವಾಮೀಜಿ ಸೋಮವಾರ ಮಾತನಾಡಿದರು. ಸಮಾಜದ ಜಿಲ್ಲಾಧ್ಯಕ್ಷ ಕಾಶಿ ವಿಶ್ವನಾಥ ಬಿಚ್ಚಾಲಿ, ನಗರಸಭೆ ಮಾಜಿ ಸದಸ್ಯ ಈ.ಪರಮೇಶ, ಪ್ರಮುಖರಾದ ಯರಡೋಣಿ ನಾಗಪ್ಪ, ವೀರೇಶ ಇತರರಿದ್ದರು.
ಗಂಗಾವತಿಯಲ್ಲಿ ಹಮ್ಮಿಕೊಂಡ ತಾಲೂಕು ಮಟ್ಟದ ಸಮಾಜದ ಪೂರ್ವಭಾವಿ ಸಭೆಯಲ್ಲಿ ಆರ್ಯ ಈಡಿಗ ಸಮಾಜದ ಪೀಠಾಧಿಪತಿ ಡಾ.ಶ್ರೀ ಪ್ರಣವಾನಂದ ಸ್ವಾಮೀಜಿ ಸೋಮವಾರ ಮಾತನಾಡಿದರು. ಸಮಾಜದ ಜಿಲ್ಲಾಧ್ಯಕ್ಷ ಕಾಶಿ ವಿಶ್ವನಾಥ ಬಿಚ್ಚಾಲಿ, ನಗರಸಭೆ ಮಾಜಿ ಸದಸ್ಯ ಈ.ಪರಮೇಶ, ಪ್ರಮುಖರಾದ ಯರಡೋಣಿ ನಾಗಪ್ಪ, ವೀರೇಶ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ.ಶ್ರೀ ಪ್ರಣವಾನಂದ ಸ್ವಾಮೀಜಿ ಟೀಕೆ
  • ಆರ್ಯ ಈಡಿಗ ಸಮಾಜದ ಪೂರ್ವಭಾವಿ ಸಭೆ
ಗಂಗಾವತಿ: ಆರ್ಯ ಈಡಿಗ ಸಮುದಾಯದ ಬೇಡಿಕೆಗೆ ಸ್ಪಂದಿಸುವಲ್ಲಿ ಸರ್ಕಾರ ನಿರ್ಲಕ್ಷಿಸುತ್ತಿದ್ದು, ಸಿಎಂ ಭೇಟಿ ಮಾಡಿಸುವಲ್ಲಿ ಸಮುದಾಯದ ಸಚಿವರೇ ಅಡ್ಡಿಯಾಗಿದ್ದಾರೆ ಎಂದು ಆರ್ಯ ಈಡಿಗ ಸಮಾಜದ ಪೀಠಾಧಿಪತಿ ಮತ್ತು ಕರದಾಳ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಪೀಠಾಧಿಪತಿ ಡಾ.ಶ್ರೀ ಪ್ರಣವಾನಂದ ಸ್ವಾಮೀಜಿ ಹೇಳಿದರು.
ನಗರದ ಸರ್ವೇಶ ಸಭಾಂಗಣದಲ್ಲಿ ಆರ್ಯ ಈಡಿಗ ಸಮಾಜ ತಾಲೂಕು ಘಟಕದಿಂದ ಸೋಮವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಸಮಾಜದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಒಂದು ಕಾಲದಲ್ಲಿ ಸರ್ಕಾರವನ್ನೇ ನಿಭಾಯಿಸುತ್ತಿದ್ದ ಆರ್ಯ ಈಡಿಗ ಸಮಾಜ, ಇಂದು ಆರ್ಥಿಕ, ರಾಜಕೀಯ ಸೇರಿ ಎಲ್ಲ ಕ್ಷೇತ್ರದಲ್ಲೂ ಹಿಂದುಳಿದಿದೆ. ಸಮುದಾಯದ ಅಭಿವೃದ್ಧಿ ಮತ್ತು 18 ಬೇಡಿಕೆಗಳಿಗಾಗಿ ಕಲಬುರಗಿಯಿಂದ ಬೆಂಗಳೂರುವರೆಗೆ ಪಾದಯಾತ್ರೆ ಹಮ್ಮಿಕೊಂಡರೂ, ಸರ್ಕಾರಕ್ಕೆ ಬೇಡಿಕೆಗಳನ್ನು ಆಲಿಸಲು ಸಮಯವಿಲ್ಲವಾಗಿದೆ. ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿಸುವ ಭರವಸೆ ನೀಡಿದ್ದ ಸಚಿವ ಶಿವರಾಜ ತಂಗಡಗಿ, ಕೊನೇ ಗಳಿಗೆಯಲ್ಲಿ ಕೈ ಕೊಟ್ಟರು. ಇದಕ್ಕೆ ಸಮುದಾಯದ ಸಚಿವರಾದ ಮಧು ಬಂಗಾರಪ್ಪ ಕಾರಣವಾಗಿದ್ದು, ಮುಂದಿನಗಳಲ್ಲಿ ಕಾಲವೇ ಉತ್ತರ ನೀಡಲಿದೆ ಎಂದರು.

ಶಕ್ತಿ ಪ್ರದರ್ಶನ ಸಮಾವೇಶ ಶೀಘ್ರ

ಪ್ರಸಕ್ತ ಸಾಲಿನ ಬಜೆಟ್‌ನಲ್ಲೂ ಸಮುದಾಯದ ಅಭಿವೃದ್ಧಿಗೆ ನಯಾಪೈಸೆ ೋಷಿಸಿಲ್ಲ. ಸಮುದಾಯವನ್ನು ನಿರ್ಲಕ್ಷಿಸಿದ ಸಚಿವ ಶಿವರಾಜ ತಂಗಡಗಿಯವರ ಕಾರಟಗಿ ಮನೆಗೆ ಮುತ್ತಿಗೆ ಹಾಕಲು ನಿರ್ಧರಿಸಿದ್ದು, ಅವರ ಅನಾರೋಗ್ಯ ಕಾರಣ ಮಾನವೀಯತೆ ದೃಷ್ಟಿಯಿಂದ ಮುತ್ತಿಗೆ ಕೈಬಿಟ್ಟು, ಶೀಘ್ರವೇ ಕಾರಟಗಿಯಲ್ಲಿ ಶಕ್ತಿ ಪ್ರದರ್ಶನ ಸಮಾವೇಶ ಹಮ್ಮಿಕೊಳ್ಳಲಾಗುವುದು. ಕ್ಷೇತ್ರದ ಪ್ರತಿ ಹಳ್ಳಿಗೂ ಭೇಟಿ ನೀಡಿ, ಸಮುದಾಯಕ್ಕೆ ಸರ್ಕಾರ ಮಾಡುತ್ತಿರುವ ಅನ್ಯಾಯದ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿಸುವ ಭರವಸೆ ನೀಡಿದ್ದ ತಂಗಡಗಿ, ನಿರ್ಲಕ್ಷ್ಯದಿಂದ ವರ್ತಿಸಿದ್ದಾರೆ. ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ ತಂಗಡಗಿ ಪರ ಮಾತನಾಡಿದ್ದು, ಸಮುದಾಯಕ್ಕೆ ಮಾಡಿದ ದ್ರೋಹ ಎಂದರು.
ಈಡಿಗರ ಸಮಾಜದ ಜಿಲ್ಲಾಧ್ಯಕ್ಷ ಕಾಶಿ ವಿಶ್ವನಾಥ ಬಿಚ್ಚಾಲಿ, ತಾಲೂಕಾಧ್ಯಕ್ಷ ಈ.ನಾಗರಾಜ್, ನಗರಸಭೆ ಮಾಜಿ ಸದಸ್ಯ ಈ.ಪರಮೇಶ, ಪ್ರಮುಖರಾದ ಯರಡೋಣಿ ನಾಗಪ್ಪ, ವೀರೇಶ, ಶಾಮಣ್ಣ, ಅಂಬುಜಮ್ಮ, ಸುಭಾಷ್, ಆನಂದಬಾಬು, ಶ್ರವಣಕುಮಾರ ಇತರರಿದ್ದರು.
"

ಡಿಸಿಎಂ ಡಿ.ಕೆ. ಶಿವಕುಮಾರ ಸಿಎಂ ಆಗಲಿ ಎಂದು ಹಿಂದುಳಿದ ಮಠಾಧೀಶರ ವೇದಿಕೆ ಮನವಿಗೆ ಬೆಂಬಲ ನೀಡಿದ್ದೇ ಸಿಎಂ ಸಿದ್ದರಾಮಯ್ಯ ಸಮುದಾಯವನ್ನು ವಿರೋಧಿಸಲು ಪ್ರಮುಖ ಕಾರಣವಾಗಿದೆ. ನಮ್ಮ ಸಮುದಾಯದ ಸಚಿವರು ಮತ್ತು ಸರ್ಕಾರದ ಪ್ರತಿನಿಧಿಗಳು ಸಿಎಂ ಭೇಟಿ ಮಾಡಿಸದೇ ಸಮಾಜಕ್ಕೆ ಅನ್ಯಾಯ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net