ರಾಸುಗಳ ಕೃತಕ ಗರ್ಭಧಾರಣೆಗೆ ಮುಂಜಾಗ್ರತೆ ಅಗತ್ಯ

ಕುಷ್ಟಗಿಯ ಪಶು ಆಸ್ಪತ್ರೆಯಲ್ಲಿ ಕರ್ನಾಟಕ ಮೈತ್ರಿ ಕಾರ್ಯಕರ್ತರಿಗೆ ಕೃತಕ ಗರ್ಭಧಾರಣೆ ಸಲಕರಣೆ ವಿತರಿಸಲಾಯಿತು. ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಆನಂದ ದೇವರನಾವದಗಿ, ಜಿಲ್ಲಾ ಸಂಯೋಜಕ ಚನ್ನಬಸವ ಹಳೆಮನಿ, ಡಾ.ಡಿ.ಬಿ.ಇಟ್ನಳ್ಳಿ ಇದ್ದರು.
ಕುಷ್ಟಗಿಯ ಪಶು ಆಸ್ಪತ್ರೆಯಲ್ಲಿ ಕರ್ನಾಟಕ ಮೈತ್ರಿ ಕಾರ್ಯಕರ್ತರಿಗೆ ಕೃತಕ ಗರ್ಭಧಾರಣೆ ಸಲಕರಣೆ ವಿತರಿಸಲಾಯಿತು. ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಆನಂದ ದೇವರನಾವದಗಿ, ಜಿಲ್ಲಾ ಸಂಯೋಜಕ ಚನ್ನಬಸವ ಹಳೆಮನಿ, ಡಾ.ಡಿ.ಬಿ.ಇಟ್ನಳ್ಳಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಆನಂದ ದೇವರನಾವದಗಿ ಹೇಳಿಕೆ
  • ಕರ್ನಾಟಕ ಮೈತ್ರಿ ಕಾರ್ಯಕರ್ತರ ಸಭೆ
ಕುಷ್ಟಗಿ: ಜಾನುವಾರುಗಳಿಗೆ ಕೃತಕ ಗರ್ಭಧಾರಣೆ ಮಾಡುವಾಗ ಮುನ್ನೆಚ್ಚರಿಕೆ ಕ್ರಮವಹಿಸಿ ಎಂದು ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಆನಂದ ದೇವರನಾವದಗಿ ಹೇಳಿದರು.
ಪಟ್ಟಣದ ಪಶು ಆಸ್ಪತ್ರೆಯಲ್ಲಿ ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಜಿಲ್ಲಾ ಮೈರಾಡಾ ಸಂಸ್ಥೆ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಭಾರತ ಸಂಜೀವಿನಿ ಕರ್ನಾಟಕ ಮೈತ್ರಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಜಾನುವಾರುಗಳಿಗೆ ಸುರಕ್ಷತೆಯಿಂದ ಕೃತಕ ಗರ್ಭಧಾರಣೆ ಮಾಡಬೇಕು ಎಂದರು. ನಂತರ ಮೈತ್ರಿ ಕಾರ್ಯಕರ್ತರಿಗೆ ಕೃತಕ ಗರ್ಭಧಾರಣೆ ಸಲಕರಣೆ ವಿತರಿಸಲಾಯಿತು.
ಜಿಲ್ಲಾ ಸಂಯೋಜಕ ಚನ್ನಬಸವ ಹಳೆಮನಿ, ವೈದ್ಯಾಧಿಕಾರಿ ಡಿ.ಬಿ.ಇಟ್ನಳ್ಳಿ, ಡಾ.ಮಂಜುನಾಥ ಅಮರಾವತಿ, ನೌಕರ ಮಣಿಕಂಠ ಹಳ್ಳೂರು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net