ಈ ಬಾರಿ ನಿರೀಕ್ಷೆಯಂತೆ ಮಳೆಯಾಗಿಲ್ಲ. ಇದು ಸಹಜವಾಗಿಯೇ ರೈತಾಪಿ ವರ್ಗದಲ್ಲಿ ದಿಗಿಲು ಮೂಡಿಸಿದೆ. ಕಳೆದ ಬಾರಿ ತುಂಗಭದ್ರಾ ಜಲಾಶಯ ಕ್ರಸ್ಟ್‌ಗೇಟ್ ಅಳವಡಿಸುವ ಸಂಬಂಧ ಕಾಲುವೆಗೆ ನೀರು ಹರಿಸಿರಲಿಲ್ಲ. ಈ ಬಾರಿ ಭತ್ತ ನಾಟಿಗೆ ರೈತರು ಉತ್ಸುಕರಾಗಿದ್ದು, ಕೃಷಿ ಚಟುವಟಿಕೆಗಳನ್ನು ಆರಂಭಿಸಿದ್ದಾರೆ. ಆದರೆ, ರೈತರ ನಿರೀಕ್ಷೆಯಂತೆ ಮಳೆಯಾಗುತ್ತಿಲ್ಲ.