ಯೋಗೀಶ್ವರ ಯಾಜ್ಞವಲ್ಕೃ ಭಾವಚಿತ್ರ ಮೆರವಣಿಗೆ

ಗಂಗಾವತಿ ಜವಾಹರ ನಗರದ ಹನುಮಂತ ದೇವರ ದೇವಾಲಯದಲ್ಲಿ ಶ್ರೀ ಯೋಗೀಶ್ವರ ಯಾಜ್ಞವಲ್ಕೃ ಜಯಂತಿ ನಿಮಿತ್ತ ಭಾವಚಿತ್ರ ಮೆರವಣಿಗೆ ಮಂಗಳವಾರ ಜರುಗಿತು. ನಗರಸಭೆ ಮಾಜಿ ಸದಸ್ಯ ವಾಸುದೇವ ನವಲಿ, ದೇವಾಲಯ ಸಮಿತಿ ಅಧ್ಯಕ್ಷ ಗಂಗನಾಳ ಮುರಳೀಧರ ಕುಲಕರ್ಣಿ, ಪ್ರಮುಖರಾದ ರಾಘವೇಂದ್ರ ಮೇಗೂರು, ಗುರುರಾಜ್ ಚಿರ್ಚನಗುಡ್ಡ ಇತರರಿದ್ದರು.

Published on
ಗಂಗಾವತಿ: ಇಲ್ಲಿನ ಜವಾಹರ ನಗರದ ಹನುಮಂತ ದೇವರ ದೇವಾಲಯದಲ್ಲಿ ಶ್ರೀ ಯೋಗೀಶ್ವರ ಯಾಜ್ಞವಲ್ಕೃ ಜಯಂತಿ ನಿಮಿತ್ತ ಭಾವಚಿತ್ರ ಮೆರವಣಿಗೆ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.
ನಗರದ ಶ್ರೀ ಪ್ರಸನ್ನ ವೆಂಕಟರಮಣ ದೇವಾಲಯದಿಂದ ಆರಂಭವಾದ ಮೆರವಣಿಗೆಯಲ್ಲಿ ವಾದ್ಯ, ವೇದ ಮೇಳಗಳು ಭಾಗವಹಿಸಿದ್ದವು. ವಿವಿಧ ಭಜನಾ ಮಂಡಳಿಗಳು ಸಾಥ್ ನೀಡಿದ್ದು, ಹನುಮಂತ ದೇವರ ದೇವಾಲಯದಲ್ಲಿ ಸಮಾರೋಪಗೊಂಡಿತು.
ದೇವಾಲಯ ಸಮಿತಿ ಅಧ್ಯಕ್ಷ ಗಂಗನಾಳ ಮುರಳೀಧರ ಕುಲಕರ್ಣಿ ಮಾತನಾಡಿ, ಜೂ.24ರಂದು ದೇವಾಲಯದಲ್ಲಿ ಜಯಂತ್ಯುತ್ಸವ ಹಮ್ಮಿಕೊಂಡಿದ್ದು, ಪರಿವಾರದ ಮೂರ್ತಿಗಳಿಗೆ ವಿಶೇಷ ಪೂಜೆ, ಅಭಿಷೇಕ, ಸಾಮೂಹಿಕ ಪಾರಾಯಣ, ಭಜನೆ ಮತ್ತು ಪ್ರಸಾದ ವಿತರಣೆ ಜರುಗಲಿದೆ. ಸಂಜೆ ತೊಟ್ಟಿಲು ಸೇವೆ ಮತ್ತು ನಿರಂತರ ಭಜನೆ ಹಮ್ಮಿಕೊಳ್ಳಲಾಗಿದೆ ಎಂದರು.
ನಗರಸಭೆ ಮಾಜಿ ಸದಸ್ಯ ವಾಸುದೇವ ನವಲಿ, ಪ್ರಮುಖರಾದ ರಾಘವೇಂದ್ರ ಮೇಗೂರು, ರಾಘವೇಂದ್ರ ಲೆಖ್ಖಿಹಾಳ್, ರಾಮಕೃಷ್ಣ ಕನಸಾವಿ, ಗುರುರಾಜ್ ಚಿರ್ಚನಗುಡ್ಡ, ಚಂದ್ರಕಾಂತ ಆಲ್ಲಂಪಲ್ಲಿ, ರಾಘವೇಂದ್ರ ಭಯ್ಯಪುರ, ಸತೀಶ ಕುಲ್ಕರ್ಣಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net