ಡೊನೇಷನ್​ ಹಾವಳಿಗೆ ಬಡ ವಿದ್ಯಾರ್ಥಿ ಕಣ್ಣಿರು

ಕೊಪ್ಪಳದಲ್ಲಿ ಡೊನೇಷನ್​ ಹಾವಳಿ ತಡೆಗೆ ಆಗ್ರಹಿಸಿ ಎಸ್​ಎಫ್​ಐ ಸಂಟನೆಯಿಂದ ಡಿಸಿ ಡಾ. ಸುರೇಶ ಬಿ. ಇಟ್ನಾಳಗೆ ಮನವಿ ಸಲ್ಲಿಸಲಾಯಿತು. ರಾಜ್ಯ ಉಪಾಧ್ಯಕ್ಷ ಗ್ಯಾನೇಶ್​ ಕಡಗದ, ಜಿಲ್ಲಾ ಪದಾಧಿಕಾರಿಗಳಾದ ಯಮನೂರ, ಸಮೀರ್​, ನಾಗರಾಜ್​, ಮೌನೇಶ್​, ವೆಂಕಟೇಶ್​, ದೇವರಾಜ್​ ಇದ್ದರು.
ಕೊಪ್ಪಳದಲ್ಲಿ ಡೊನೇಷನ್​ ಹಾವಳಿ ತಡೆಗೆ ಆಗ್ರಹಿಸಿ ಎಸ್​ಎಫ್​ಐ ಸಂಟನೆಯಿಂದ ಡಿಸಿ ಡಾ. ಸುರೇಶ ಬಿ. ಇಟ್ನಾಳಗೆ ಮನವಿ ಸಲ್ಲಿಸಲಾಯಿತು. ರಾಜ್ಯ ಉಪಾಧ್ಯಕ್ಷ ಗ್ಯಾನೇಶ್​ ಕಡಗದ, ಜಿಲ್ಲಾ ಪದಾಧಿಕಾರಿಗಳಾದ ಯಮನೂರ, ಸಮೀರ್​, ನಾಗರಾಜ್​, ಮೌನೇಶ್​, ವೆಂಕಟೇಶ್​, ದೇವರಾಜ್​ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಎಸ್​ಎಫ್​ಐನಿಂದ ಡಿಸಿಗೆ ಮನವಿ
ಕೊಪ್ಪಳ :ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿರುವ ಡೊನೇಷನ್​ ಹಾವಳಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಜಿಲ್ಲಾ ಶಿಕ್ಷಣ ರೆಗ್ಯುಲೆಟಿಂಗ್​ ಪ್ರಾಧಿಕಾರ ರಚಿಸಬೇಕು ಎಂದು ಭಾರತ ವಿದ್ಯಾರ್ಥಿ ಫೆಡರೇಶನ್​ ಜಿಲ್ಲಾ ಸಮಿತಿ ಗುರವಾರ ಡಿಸಿ ಡಾ. ಸುರೇಶ ಬಿ. ಇಟ್ನಾಳಗೆ ಮನವಿ ಸಲ್ಲಿಸಿತು.
ಪ್ರಸ್ತುತ ಶೈಕ್ಷಣಿಕ ವರ್ಷದ ಪ್ರವೇಶಾತಿ ವೇಳೆ ಹಲವು ಖಾಸಗಿ ಶಾಲೆಗಳು ಶಿಕ್ಷಣ ಹಕ್ಕು ಕಾಯ್ದೆ ಹಾಗೂ 1983ರ ಶಿಕ್ಷಣ ಕಾಯ್ದೆಯನ್ನು ಉಲ್ಲಂಘಿಸಿ ಅಕ್ರಮವಾಗಿ ಡೊನೇಷನ್​ ವಸೂಲಿ ಮಾಡುತ್ತಿವೆ. ಬಡ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಇದರಿಂದ ಶಿಕ್ಷಣ ದುಬಾರಿಯಾಗುತ್ತಿದೆ. ಪ್ರವೇಶ ಪರೀಕ್ಷೆ ನಡೆಸುವುದು, ಕಡ್ಡಾಯವಾಗಿ ಶಾಲೆಯಲ್ಲೇ ಬ್ಯಾಗ್​, ಪುಸ್ತಕ, ಬೂಟು ಸೇರಿದಂತೆ ಸಾಮಗ್ರಿಗಳನ್ನು ಖರೀದಿಸಲು ಒತ್ತಾಯಿಸುವುದು, ಅನಧಿಕೃತ ಟ್ಯೂಷನ್​ ಹಾಗೂ ಸಿಇಟಿ, ನೀಟ್​, ಜೆಇಇ ತರಬೇತಿ ಕೇಂದ್ರಗಳನ್ನು ನಡೆಸುವುದು ನಿಯಮ ಉಲ್ಲಂಘನೆಯಾಗಿದೆ ಎಂದು ಎಸ್​ಎಫ್​ಐ ದೂರಿದೆ.
ಡೊನೇಷನ್​ ವಸೂಲಿ ಮಾಡುವ ಸಂಸ್ಥೆಗಳ ವಿರುದ್ಧ ಕ್ರಮ, ಅನಧಿಕೃತ ಟ್ಯೂಷನ್​ ಕೇಂದ್ರಗಳನ್ನು ಮುಚ್ಚುವುದು, ಶುಲ್ಕ ವಿವರಗಳನ್ನು ಸಾರ್ವಜನಿಕವಾಗಿ ಪ್ರಕಟಿಸುವುದು ಹಾಗೂ ಜಿಲ್ಲಾ ಶಿಕ್ಷಣ ಶುಲ್ಕ ನಿಯಂತ್ರಣ ಪ್ರಾಧಿಕಾರ ಸಭೆ ಸೇರಬೇಕು. ಜಿಲ್ಲಾ ಶಿಕ್ಷಣ ರೆಗ್ಯುಲೆಟಿಂಗ್​ ಪ್ರಾಧಿಕಾರ ರಚಿಸುವ ಕುರಿತು 15 ದಿನಗಳಲ್ಲಿ ಪಾಲಕರು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಮತ್ತು ವಿದ್ಯಾರ್ಥಿ ಸಂಟನೆಗಳ ಸಭೆ ಕರೆಯಬೇಕು ಎಂದು ಆಗ್ರಹಿಸಲಾಯಿತು.
ಎಸ್​ಎಫ್​ಐ ರಾಜ್ಯ ಉಪಾಧ್ಯಕ್ಷ ಗ್ಯಾನೇಶ್​ ಕಡಗದ, ಜಿಲ್ಲಾ ಪದಾಧಿಕಾರಿಗಳಾದ ಯಮನೂರ, ಸಮೀರ್​, ನಾಗರಾಜ್​, ಮೌನೇಶ್​, ವೆಂಕಟೇಶ್​, ದೇವರಾಜ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net