ಬಡ-ಮಧ್ಯಮ ವರ್ಗದ ಮಕ್ಕಳ ಕಲಿಕೆ ಕುಂಠಿತ

ಶಿಕ್ಷಕರನ್ನು ಬೋಧನೆ ಹೊರತುಪಡಿಸಿ ಅನ್ಯ ಕಾರ್ಯಗಳಿಗೆ ನಿಯೋಜನೆ ಮಾಡದಂತೆ ಒತ್ತಾಯಿಸಿ  ಗಂಗಾವತಿ ತಾಲೂಕಾಡಳಿತ ಸೌಧದ ಕಚೇರಿ ಮುಂದೆ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿ ಸದಸ್ಯರು ಪ್ರತಿಭಟಿಸಿ, ಬೇಡಿಕೆ ಮನವಿಯನ್ನು ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡಗೌಡರ್‌ಗೆ ಸಲ್ಲಿಸಿದರು. ಅಧ್ಯಕ್ಷ ಬಸವರಾಜ ಮ್ಯಾಗಳಮನಿ, ಪದಾಧಿಕಾರಿಗಳಾದ  ಚಂದ್ರು ನಿಸರ್ಗ, ಜಡಿಯಪ್ಪ ಹಂಚಿನಾಳ, ರಾಘವೇಂದ್ರ ಕಡೇಬಾಗಿಲು, ರಾಮಣ್ಣ ರುದ್ರಾಕ್ಷಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಒತ್ತಾಯ
  • ತಹಸಿಲ್
  • ಕಚೇರಿ
ಗಂಗಾವತಿ: ಶಿಕ್ಷಕರನ್ನು ಬೋಧನೆ ಹೊರತುಪಡಿಸಿ ಅನ್ಯ ಕಾರ್ಯಗಳಿಗೆ ನಿಯೋಜನೆ ಮಾಡದಂತೆ ಒತ್ತಾಯಿಸಿ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿ ಸದಸ್ಯರು ನಗರದ ತಾಲೂಕು ಆಡಳಿತ ಸೌಧದ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.
ಪಾಲಕರೊಂದಿಗೆ ಪ್ರತಿಭಟಿಸಿದ ಸಮಿತಿ ಸದಸ್ಯರು, ಬೇಡಿಕೆ ಮನವಿಯನ್ನು ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡ ಗೌಡರ್‌ಗೆ ಸಲ್ಲಿಸಿದರು. ಸಮಿತಿ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಮಾತನಾಡಿ, ಶಿಕ್ಷಕರಿಗೆ ಇತ್ತೀಚೆಗೆ ಕಾರ್ಯಭಾರ ಹೆಚ್ಚುತ್ತಿದ್ದು, ಸರ್ವೇ ಸೇರಿ ಇತರೆ ಕಾರ್ಯಗಳಿಗೆ ನಿಯೋಜಿಸುತ್ತಿರುವುದು ಬೋಧನೆ ಕ್ರಮಕ್ಕೆ ಹಿನ್ನೆಡೆಯಾಗುತ್ತಿದೆ.
ಸರ್ಕಾರಿ ಶಾಲೆ ಶಿಕ್ಷಕರನ್ನೇ ಬಳಸಿಕೊಳ್ಳುತ್ತಿದ್ದು, ಬಡ ಮತ್ತು ಮಧ್ಯಮ ವರ್ಗದ ಮಕ್ಕಳ ಕಲಿಕೆ ಕುಂಠಿತವಾಗುತ್ತಿದೆ. ಇದೇ ಕಾರಣಕ್ಕೆ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವುದನ್ನು ಪಾಲಕರು ನಿರಾಕರಿಸುತ್ತಿದ್ದಾರೆ. ಶಿಕ್ಷಕರನ್ನು ಬೋಧನೆಗೆ ಸೀಮಿತಗೊಳಿಸಿ, ನಿರುದ್ಯೋಗಿ ಪದವೀಧರರನ್ನು ಅನ್ಯ ಕಾರ್ಯಕ್ಕೆ ಬಳಸಿಕೊಳ್ಳುವುದು ಉತ್ತಮ.
ಅದರಂತೆ ಎಲ್ಲ ಸರ್ಕಾರಿ ಶಾಲೆಗಳಲ್ಲೂ ಪೂರ್ವ ಪ್ರಾಥಮಿಕ ಆರಂಭಿಸಬೇಕಿದ್ದು, ಬಡ ಮಕ್ಕಳಿಗೆ ಅನುಕೂಲವಾಗಲಿದೆ. ಗೌರವಧನ ಮತ್ತು ಇತರೆ ಸೌಲಭ್ಯಕ್ಕೆ ಸರ್ಕಾರಿ ಅನುದಾನ ಬಳಸಿಕೊಳ್ಳುತ್ತಿರುವ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದರು.
ಪದಾಧಿಕಾರಿಗಳಾದ ಕೆ.ಎಂ.ಅರವಿಂದ ಯೋಗಿ, ಮಂಜುನಾಥ ಚನ್ನದಾಸರ್, ಬೋಗೇಶ ಆನೆಗೊಂದಿ, ಮೇಘರಾಜ್, ರಗಡಪ್ಪ ಹೊಸಳ್ಳಿ, ಬಿ.ಕೆ.ಗಣೇಶ್, ಮಂಜುನಾಥ ಹಿರೇಮಠ, ರೆಹಮಾನ, ಹರೀಶ, ಮಹೇಬೂಬ, ಹನುಮೇಶ, ಸೋಮಶೇಖರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net