ಎಸ್ಪಿ ಡಾ.ರಾಮ್ ಎಲ್.ಅರಸಿದ್ದಿ ಮಾತನಾಡಿ, ಬೆಳಗ್ಗೆ 10.30ರಿಂದ 12ಗಂಟೆವರೆಗೆ ಮಿಕ್ಕುಳಿದ ವೃಂದ, ಸಂಜೆ 4&5.30 ಗಂಟೆವರೆಗೆ ಸ್ಥಳಿಯ ವೃಂದ ಪರೀಕ್ಷೆ ನಡೆಯಲಿವೆ. ಕೊಪ್ಪಳ ನಗರ, ಭಾಗ್ಯನಗರ ಹಾಗೂ ಗಂಗಾವತಿಯಲ್ಲಿ 24 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮಿಕ್ಕುಳಿದ ವೃಂದದಲ್ಲಿ ಕೊಪ್ಪಳದ 16 ಪರೀಕ್ಷಾ ಕೇಂದ್ರಗಳಲ್ಲಿ 5,480, ಗಂಗಾವತಿಯ 8 ಕೇಂದ್ರಗಳಲ್ಲಿ 2,665 ಒಟ್ಟು 8,145 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಸ್ಥಳಿಯ ವೃಂದದಲ್ಲಿ ಕೊಪ್ಪಳದ 16 ಪರೀಕ್ಷಾ ಕೇಂದ್ರಗಳಲ್ಲಿ 4,922, ಗಂಗಾವತಿಯ 4 ಕೇಂದ್ರಗಳಲ್ಲಿ 1,327 ಒಟ್ಟು 6,249 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆಂದು ಮಾಹಿತಿ ನೀಡಿದರು.