ಹೈಕೋರ್ಟ್ ಆದೇಶವಿದ್ದರೂ ಮುಚ್ಚದ ಕಾರ್ಖಾನೆ

ನ್ಯಾಯಾಲಯ ಆದೇಶದಂತೆ ಮುನಿರಾಬಾದ್ ರೈಲು ನಿಲ್ದಾಣ ಬಳಿಯ ಕಾರ್ಖಾನೆ ಸ್ಥಳಂತರಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಡಿಸಿ ಸುರೇಶ ಬಿ. ಇಟ್ನಾಳ್‌ಗೆ ಸೋಮವಾರ ದೂರು ನೀಡಿದರು. ರೈತ ಸಂಘ ಜಿಲ್ಲಾಧ್ಯಕ್ಷ ಹುಲುಗಪ್ಪ ಬಾಳಿಕಾಯಿ, ಮಾಜಿ ಸೈನಿಕರಾದ ಸಂಜೀವ ತೋಟಗಂಟಿ, ಟಿ. ಕಿಶೋರ್ ಇತರರಿದ್ದರು.
ನ್ಯಾಯಾಲಯ ಆದೇಶದಂತೆ ಮುನಿರಾಬಾದ್ ರೈಲು ನಿಲ್ದಾಣ ಬಳಿಯ ಕಾರ್ಖಾನೆ ಸ್ಥಳಂತರಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಡಿಸಿ ಸುರೇಶ ಬಿ. ಇಟ್ನಾಳ್‌ಗೆ ಸೋಮವಾರ ದೂರು ನೀಡಿದರು. ರೈತ ಸಂಘ ಜಿಲ್ಲಾಧ್ಯಕ್ಷ ಹುಲುಗಪ್ಪ ಬಾಳಿಕಾಯಿ, ಮಾಜಿ ಸೈನಿಕರಾದ ಸಂಜೀವ ತೋಟಗಂಟಿ, ಟಿ. ಕಿಶೋರ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹುಲಿಗಿ ಗ್ರಾಮಸ್ಥರಿಂದ ಜಿಲ್ಲಾಡಳಿತಕ್ಕೆ ದೂರು ಸಲ್ಲಿಕೆ
ಮುನಿರಾಬಾದ್: ಸಮೀಪದ ಹುಲಿಗಿ ಗ್ರಾಮದ ಮುನಿರಾಬಾದ್ ರೈಲು ನಿಲ್ದಾಣ ಬಳಿಯ ಕೊರಮಂಡಲ್ ಇಂಟರ್‌ನ್ಯಾಷನಲ್ ಫ್ಯಾಕ್ಟರಿ ಹೊರಸೂಸುವ ವಿಷಕಾರಿ ಅನಿಲದಿಂದ ಸಾರ್ವಜನಿಕರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಿದ್ದು, ನ್ಯಾಯಾಲಯದ ಆದೇಶವಿದ್ದರೂ ಕಾರ್ಖಾನೆ ಮುಚ್ಚದ ಬಗ್ಗೆ ಗ್ರಾಮಸ್ಥರು ಡಿಸಿ ಸುರೇಶ ಬಿ. ಇಟ್ನಾಳ್‌ಗೆ ಸೋಮವಾರ ದೂರು ನೀಡಿದರು.
ಕಾರ್ಖಾನೆಯು ರಸಗೊಬ್ಬರ ತಯಾರಿಕೆ ಸಂದರ್ಭದಲ್ಲಿ ಹೈಡ್ರೋಜನ್ ಫ್ಲೋರೈಡ್ ಎಂಬ ವಿಷಕಾರಿ ಅನಿಲ ಹೊರಸೂಸುತ್ತಿದೆ. ಇದು ಗ್ರಾಮದ ಜನರ ಉಸಿರಾಟದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದ್ದು, ಪರಿಸರ ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವು ವರದಿಗಳು ಸಲ್ಲಿಕೆಯಾಗಿದ್ದು, ಅವುಗಳಲ್ಲಿ ಕಾರ್ಖಾನೆಯನ್ನು ಸ್ಥಳಾಂತರಿಸಲು ಅಥವಾ ಮುಚ್ಚಲು ಶಿಫಾರಸು ಮಾಡಲಾಗಿದೆ. 2017 ಮತ್ತು 2018ರಲ್ಲಿ ತಜ್ಞರ ಸಮಿತಿ ಮತ್ತು ಜಿಲ್ಲಾಧಿಕಾರಿಯಿಂದ ಸ್ಥಳಾಂತರ ವರದಿ ಸಲ್ಲಿಕೆಯಾಗಿದೆ. 2019ರಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಬೆಂಗಳೂರು ಇವರಿಂದ ಸ್ಥಳಾಂತರಕ್ಕೆ ಆದೇಶ ಮಾಡಲಾಗಿದೆ.
2021ರಲ್ಲಿ ಮಾನ್ಯ ಉಚ್ಚ ನ್ಯಾಯಾಲಯದ ಅಂತಿಮ ಆದೇಶದಲ್ಲಿ ಕಾರ್ಖಾನೆಯನ್ನು ಮುಚ್ಚಲು ಅಥವಾ ಸ್ಥಳಾಂತರಿಸಲು ನಿರ್ದೇಶನವಿದೆ. ಇಷ್ಟೆಲ್ಲ ಕಾನೂನಾತ್ಮಕ ಆದೇಶಗಳಿದ್ದರೂ, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಯಾವುದೇ ಕಠಿಣ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಹೀಗಾಗಿ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದರು.
ರೈತ ಸಂಘ ಜಿಲ್ಲಾಧ್ಯಕ್ಷ ಹುಲುಗಪ್ಪ ಬಾಳಿಕಾಯಿ, ಮಾಜಿ ಸೈನಿಕರಾದ ಸಂಜೀವ ತೋಟಗಂಟಿ, ಟಿ. ಕಿಶೋರ್, ಮಂಜುನಾಥ ಬೆಣಕಲ್ಲ, ಪಂಪಾಪತಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net