ಕಾವ್ಯದಿಂದ ಸಾಮಾಜಿಕ ಜಾಗೃತಿ ಸಾಧ್ಯ

ಕೊಪ್ಪಳ ಪ್ರವಾಸಿ ಮಂದಿರದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಯುಗಾದಿ-ರಂಜಾನ್​ ವಿಶೇಷ ಕವಿಗೋಷ್ಠಿ ಮತ್ತು ಕವಿ ಸಮಯ ಕಾರ್ಯಕ್ರಮದಲ್ಲಿ ಹಿರಿಯ ಕವಿ ಡಾ. ಮಹಾಂತೇಶ್​ ಮಲ್ಲನಗೌಡರ ಮಾತನಾಡಿದರು.
ಕೊಪ್ಪಳ ಪ್ರವಾಸಿ ಮಂದಿರದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಯುಗಾದಿ-ರಂಜಾನ್​ ವಿಶೇಷ ಕವಿಗೋಷ್ಠಿ ಮತ್ತು ಕವಿ ಸಮಯ ಕಾರ್ಯಕ್ರಮದಲ್ಲಿ ಹಿರಿಯ ಕವಿ ಡಾ. ಮಹಾಂತೇಶ್​ ಮಲ್ಲನಗೌಡರ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ. ಮಹಾಂತೇಶ್​ ಮಲ್ಲನಗೌಡರ ಅಭಿಪ್ರಾಯ
ಕೊಪ್ಪಳ: ಸಾಮಾಜಿಕ ಆರೋಗ್ಯ ಮತ್ತು ಸಾಮರಸ್ಯ ಕದಡುತ್ತಿರುವ ಇಂದಿನ ದಿನಗಳಲ್ಲಿ, ಕವಿಗಳು ತಮ್ಮ ಕಾವ್ಯದ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ ಎಂದು ಹಿರಿಯ ಕವಿ ಡಾ. ಮಹಾಂತೇಶ್​ ಮಲ್ಲನಗೌಡರ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಯುಗಾದಿ-&ರಂಜಾನ್​ ವಿಶೇಷ ಕವಿಗೋಷ್ಠಿ ಮತ್ತು ಕವಿ ಸಮಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಗತ್ತಿನಾದ್ಯಂತ ಯುದ್ಧದ ಕಾಮೋರ್ಡ ಕವಿದಿದ್ದು, ದೇಶಗಳು ಉರಿದು ಹೋಗುತ್ತಿವೆ. ಇದು ಮುಂದುವರಿದರೆ ಇಡೀ ಜಗತ್ತೇ ಬರಡಾಗಲಿದೆ. ಕೇವಲ ಕಾವ್ಯದಲ್ಲಿ ಮಾತ್ರವಲ್ಲದೆ, ಸಾಮಾಜಿಕವಾಗಿಯೂ ಸಹೃದಯತೆ ಬೆಳೆಯಬೇಕು. ಕಾವ್ಯದ ಮೂಲಕ ಸಮಾಜವನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಪ್ರಯತ್ನ ನಡೆಯಲಿ ಎಂದರು.
ಅರುಣ ನರೇಂದ್ರ ಇಶ್ಕ್​ ಗೆ ಹಕಿಕಾ (ಗಜಲ್​). ಸಾವಿತ್ರಿ ಮುಜುಂದರ್​ ಕಪ್ಪು, ಅವರು. ಶ್ರೀನಿವಾಸ್​ ಚಿತ್ರಗಾರ್​ ಬುದ್ಧಿ ಕಲಿಸೋಣ. ಅಮರ್​ ದೀಪ್​ ಎದೆ ಹಾಡಿಗೆ ಧ್ವನಿಯಾಗೋಣ, ಮರೆಯಾಗುವ ಮುನ್ನ. ಶಿವಪ್ರಸಾದ ಹಾದಿಮನಿ ಬಜೆಟ್​, ಬಲ್ಡೋಟ. ಸಿರಾಜ್​ ಬಿಸರಳ್ಳಿ ನೆಪ, ನಾನು ದೇವರಿಗೆ ಎಲ್ಲಾ ಹೇಳುತ್ತೇನೆ. ಮಹಾಂತೇಶ್​ ಮಲ್ಲನಗೌಡ ಪ್ರಕೃತಿ ಕವಿತೆ ಪರಿಸರ ಸಂರಕ್ಷಣೆಗೆ ಕಾವ್ಯದ ಸಾಥ್​ ಹೀಗೆ ಕವಿಗೋಷ್ಠಿಯಲ್ಲಿ ವೈವಿಧ್ಯಮಯ ವಿಫಿಯಗಳ ಕುರಿತು ಕವನಗಳು ವಾಚನವಾದವು.
ಇದೇ ಸಂದರ್ಭದಲ್ಲಿ ಪರಿಸರ ಉಳಿವಿಗಾಗಿ ನಡೆಯುತ್ತಿರುವ ಹೋರಾಟಗಳ ಬಗ್ಗೆ ಚರ್ಚಿಸಲಾಯಿತು. ಪರಿಸರ ಮತ್ತು ಹೋರಾಟದ ಕವಿತೆಗಳನ್ನು ಒಟ್ಟುಗೂಡಿಸಿ ಒಂದು ವಿಶೇಫಿ ಕವನ ಸಂಕಲನ ಹೊರತರುವ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net