ಜೀವನ ಭದ್ರತೆಗೆ ಪಿಎಂಜೆಜೆಬಿವೈ ಸಹಕಾರಿ

ಹಿರೇಗೊಣ್ಣಾಗರ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕಿನಲ್ಲಿ ಗುರುವಾರ ಪಿಎಂಜೆಜೆಬಿವೈ ವಿಮಾ ಗ್ರಾಹಕ ಮೃತ ಮರಿಯಪ್ಪ ಕಪಲೆಪ್ಪ ಕಂಬಳಿ ಅವರ ಪತ್ನಿ ನಿಂಗಮ್ಮಗೆ ಪರಿಹಾರದ ಚೆಕ್ ವಿತರಿಸಲಾಯಿತು. ಬ್ಯಾಂಕ್ ವ್ಯವಸ್ಥಾಪಕ ಕೆ. ಮನೋಜ್, ಸಿಬ್ಬಂದಿ ಪ್ರತಾಪರೆಡ್ಡಿ, ಶಿವಕಾಂತ ಅಲ್ಲೂರ, ಬ್ಯಾಂಕ್ ಮಿತ್ರರಾದ ಶರಣಪ್ಪ ಕಮತಗಿ, ಹನಮಂತ ಮುರಡಿ, ಭೀಮವ್ವ ಗುರಿಕಾರ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಕೆ. ಮನೋಜ್ ಹೇಳಿಕೆ
  • ಹನುಮಸಾಗರ ಹಿರೇಗೊಣ್ಣಾಗರ ಪರಿಹಾರದ ಚೆಕ್
ಹನುಮಸಾಗರ: ಮರಣ ನಂತರ ನಿಮ್ಮ ಕುಟುಂಬದವರ ಭದ್ರತೆಗಾಗಿ ಬ್ಯಾಂಕ್ ಖಾತೆ ಹೊಂದಿರುವ ಪ್ರತಿಯೊಬ್ಬ ಗ್ರಾಹಕರು ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯಡಿ (ಪಿಎಂಜೆಜೆಬಿವೈ) ವಿಮೆ ಮಾಡಿಸಬೇಕು ಎಂದು ಕರ್ನಾಟಕ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಕೆ. ಮನೋಜ್ ಹೇಳಿದರು.
ಸಮೀಪದ ಹಿರೇಗೊಣ್ಣಾಗರ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಪಿಎಂಜೆಜೆಬಿವೈ ಗ್ರಾಹಕ ನರಸಾಪೂರ ನಿವಾಸಿ ಮರಿಯಪ್ಪ ಕಪಲೆಪ್ಪ ಕಂಬಳಿ ಮೃತಪಟ್ಟ ಹಿನ್ನೆಲೆಯಲ್ಲಿ ಅವರ ಪತ್ನಿ ನಿಂಗಮ್ಮಗೆ ಗುರುವಾರ 2 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿ ಮಾತನಾಡಿದರು. ಮರಿಯಪ್ಪ ಅವರು ಶಾಖೆಯಲ್ಲಿ ಪಿಎಂಜೆಜೆಬಿವೈ ಯೋಜನೆಯಡಿ ಪ್ರತಿ ವರ್ಷ 436 ರೂ. ಪಾವತಿಸಿದ್ದರು. ಅವರು ಅಕಾಲಿಕ ಮರಣ ಹೊಂದಿದ್ದರಿಂದ ಅವರ ಖಾತೆಗೆ ನಾಮನಿರ್ದೇಶಿತರಿದ್ದ ಅವರ ಪತ್ನಿಗೆ ಪರಿಹಾರ ಮೊತ್ತ ಹಣ ನೀಡಲಾಗುತ್ತಿದೆ. ಪಿಎಂಜೆಜೆಬಿವೈ ಸರ್ಕಾರ ಆರಂಭಿಸಿದ ಸಾಮಾಜಿಕ ಭದ್ರತಾ ಯೋಜನೆಯಾಗಿದೆ ಎಂದರು.
ಬ್ಯಾಂಕ್ ಸಿಬ್ಬಂದಿ ಪ್ರತಾಪರೆಡ್ಡಿ, ಶಿವಕಾಂತ ಅಲ್ಲೂರ, ಬ್ಯಾಂಕ್ ಮಿತ್ರರಾದ ಶರಣಪ್ಪ ಕಮತಗಿ, ಹನಮಂತ ಮುರಡಿ, ಭೀಮವ್ವ ಗುರಿಕಾರ, ಸ್ವಸಹಾಯ ಸಂಘದ ಪ್ರತಿನಿಧಿಗಳಾದ ಹನುಮವ್ವ ಗುಜ್ಜಲ್, ಯಮನವ್ವ ಇಲಕಲ್, ಮಂಜುಳಾ ಕಾಡದ, ಕವಿತಾ ಹಿರೇಗೌಡ್ರ, ಗ್ರಾಹಕರಾದ ಹನುಮಂತ ಹೊಸಮನಿ, ಹೊನ್ನಪ್ಪ ನಾಗರಾಳ, ಮೌಲಾಸಾಬ್ ಗೊರೇಬಾಳ, ಬಸವರಾಜ ಬಾದಿಮನಾಳ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net