ಪ್ರಮುಖ ಮುಖ್ಯಾಂಶಗಳು.ಸಮೃದ್ಧ ಪರಿಸರ .ಗಿಡ ನೆಟ್ಟು ಪರಿಸರದ ಸಂರಕ್ಷಣೆ ಮಾಡಿ.ತಾವರಗೇರಾ: ಆರೋಗ್ಯಕರ ಜೀವನಕ್ಕಾಗಿ ಸಮೃದ್ಧ ಪರಿಸರ ಅಗತ್ಯ. ಆದ್ದರಿಂದ ಪ್ರತಿಯೊಬ್ಬರು ಗಿಡ ನೆಟ್ಟು ಪರಿಸರದ ಸಂರಕ್ಷಣೆ ಮಾಡಬೇಕು ಎಂದು ವಿಜ್ಞಾನ ಶಿಕ್ಷಕ ರಾಜೆಸಾಬ್ ಕೊಳೂರ ಹೇಳಿದರು..ಸಮೀಪದ ನೀರಲೂಟಿ ಗ್ರಾಮದ ಸಹಿಪ್ರಾ ಶಾಲೆಯಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಇಕೋ ಕ್ಲಬ್‌ನಿಂದ ಬುಧವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು..ಜಾಗತಿಕ ತಾಪಮಾನ ತಗ್ಗಿಸುವುದು, ತ್ಯಾಜ್ಯ ನಿರ್ವಹಣೆ, ಪ್ಲಾಸ್ಟಿಕ್ ಮುಕ್ತ ಪರಿಸರಕ್ಕೆ ಆದ್ಯತೆ, ಹವಾಮಾನ ಬದಲಾವಣೆ ಕುರಿತು ಪಠ್ಯದಲ್ಲಿ ಸೇರಿಸಬೇಕು ಎಂದರು..ಮುಖ್ಯಶಿಕ್ಷಕ ಯಲ್ಲಪ್ಪ ಜರಕುಂಟಿ, ಶಿಕ್ಷಕರಾದ ಸಂಗೀತಾ, ರೇಣುಕಾ, ಶಿವಲೀಲಾ, ಸಂಗಪ್ಪ, ಎಸ್ಡಿಎಂಸಿ ಅಧ್ಯಕ್ಷ ಶಿವನಗೌಡ, ಸದಸ್ಯ ಬಸವರಾಜ ಬೆಣಕಲ್ ಇತರರಿದ್ದರು.