ಹೂಳು ತೆರವಿಗೆ ಯೋಜನೆ

C.R.Patil
C.R.Patil
Published on

ಪ್ರಮುಖ ಮುಖ್ಯಾಂಶಗಳು

  • ಕೇಂದ್ರ ಜಲಶಕ್ತಿ ಸಚಿವ ಸಿ.ಆರ್​.ಪಾಟೀಲ್​ ಭರವಸೆ
ಕೊಪ್ಪಳ: ದೇಶದ ಬಹುತೇಕ ಜಲಾಶಯಗಳಲ್ಲಿ ಶೇ.15ರಫಿ್ಟು ಹೂಳು ತುಂಬಿದ್ದು, ತೆರವಿಗೆ ಯೋಜನೆ ರೂಪಿಸಲಾಗುತ್ತಿದೆ. ಅದರಲ್ಲಿ ಟಿಬಿ ಡ್ಯಾಂ ಸೇರಿಸಲು ಮೂರು ರಾಜ್ಯಗಳ ಒಪ್ಪಿಗೆ ಅವಶ್ಯ. ನೀರು ಉಳಿಸಿ ಅಭಿವೃದ್ಧಿಯತ್ತ ಸಾಗಲು ಎಲ್ಲ ಸಹಕಾರ ಅವಶ್ಯ ಎಂದರು.
ತಾಲೂಕಿನ ಮುನಿರಾಬಾದ್​ ಟಿಬಿ ಡ್ಯಾಂ ಕ್ರಸ್ಟ್​ಗೇಟ್​ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗೇಟ್​ ಕೊಚ್ಚಿ ಹೋದಾಗ ಮೂರು ರಾಜ್ಯಗಳು ಒಂದಾಗಿ ಟಿಬಿ ಬೋರ್ಡ್​ ನೇತೃತ್ವದಲ್ಲಿ ಹೊಸದಾಗಿ ಗೇಟ್​ ಅಳವಡಿಸಿವೆ. ಪ್ರಧಾನಿ ಮೋದಿ ಎಲ್ಲರಿಗೂ ಶುದ್ಧ ಕುಡಿವ ನೀರು ನೀರಲು ಜಲಜೀವನ್​ ಮಿಫಿನ್​ ಜಾರಿಗೊಳಿಸಿದರು. ಮೊದಲು ನರ್ಮದಾ ನದಿ ಜೋಡಣೆ ಅನುಫಿ್ಠಾನಗೊಳಿಸಲಾಯಿತು. ಇಂದು ಆ ಭಾಗ ನೀರಾವರಿಯಿಂದ ಸಮೃದ್ಧಿಯಾಗಿದೆ. ನಮ್ಮ ದೇಶದಲ್ಲಿ ಮಳೆ ಕೊರತೆ ಅಫಿ್ಟಾಗಿ ಇಲ್ಲ. ಆದರೆ ನಾವು ಹಿಡಿದಿಡಲು ಉತ್ತಮ ಯೋಜನೆ ರೂಪಿಸಿಲ್ಲ. 44 ಸಾವಿರ ಕೋಟಿ ರೂ. ರಾಜಸ್ಥಾನ, ಮಧ್ಯ ಪ್ರದೇಶದಲ್ಲಿ ನದಿ ಜೋಡಿಸಿ 10 ಲಕ್ಷ ಹೆಕ್ಟೇರ್​ ಪ್ರದೇಶ ನೀರಾವರಿ, ಕುಡಿವ ನೀರು ಸಿಗುವಂತೆ ಮಾಡಲಾಗಿದೆ.
ಆಂಧ್ರ, ತೆಲಂಗಾಣ, ಕರ್ನಾಟಕ ರಾಜ್ಯಗಳಿಗೆ ಉತ್ತಮ ದಿನ ಆರಂಭವಾಗಿದೆ. ಮೂವರು ಸಿಎಂಗಳು ಜಗಳ ಮಾಡುವುದಿಲ್ಲವೆಂದು ವಾಗ್ದಾನ ಮಾಡಿದ್ದಾರೆ. ನಮ್ಮ ಪಾಲಿನ ನೀರು ನಮಗೆ ದೊರೆತರೆ ಸಹಮತವಿದೆ ಎಂದಿದ್ದಾರೆ. ಕೇಂದ್ರ ನದಿ ಜೋಡಣೆ ಯೋಜನೆ ರೂಪಿಸುತ್ತಿದೆ. ಅದರಲ್ಲಿ ನೀವು ಕೈ ಜೋಡಿಸಿ.
ಹೂಳು ತುಂಬಿದೆ. ದೇಶದ ಎಲ್ಲ ಡ್ಯಾಂ ಗಳಲ್ಲಿ ಶೇ.15ರಫಿ್ಟು ಹೂಳು ತುಂಬಿದೆ. ಡಿ ಸಿಲ್ಟಿಂಗ್​ ಮಾಡಲು ಯೋಜನೆ ರೂಪಿಸುತ್ತಿದ್ದೇವೆ. ಅದಕ್ಕೆ ನಿಮ್ಮ ಸಹಕಾರ ಇರಲಿ. ಒಗ್ಗಟ್ಡಾಗಿದ್ದಕ್ಕೆ ಗೇಟ್​ ಅಳವಡಿಕೆಯಾಗಿದೆ. 5 ಸಾವಿರ ಎಕರೆಯಲ್ಲಿ ಪೈಲಟ್​ ಆಗಿ ಯೋಜನೆ ಜಾರಿ ಮಾಡಲಾಗುತ್ತಿದೆ. ಕಾಲುವೆ ಮೂಲಕ ನೀಡುವ ಬದಲು ಪೈಪ್​ ಮೂಲಕ, ಸ್ಪ್ರಿಂಕಲರ್​ ಮೂಲಕ ನೀರು ನೀಡಿದರೆ ರೈತರು ಅಫಿ್ಟೇ ನೀರಿನಲ್ಲಿ ಎರಡು ಬೆಳೆಯ ಬಹುದು. ಮೂರನೇ ವಿಶ್ವಯುದ್ಧ ನಡೆದರೆ ಅದು ನೀರಿಗಾಗಿ ನಡೆಯಲಿದೆ. ಹೀಗಾಗಿ ನೀರು ಉಳಿಸಿ, ಸದ್ಬಳಕೆ ಮಾಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಜ್ಜೆ ಇಡುತ್ತಿದ್ದಾರೆ. ಭಾರತ ಸದೃಢವಾಗಿರಲಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net