ಮುನಿರಾಬಾದ್: ಹೈದರಾಬಾದ್‌ನಲ್ಲಿ ನಡೆದ ಪ್ರತಿಷ್ಠಿತ ಸಿಗ್ಮ್ ಅಕಾಡೆಮಿ ಆಫ್ ಫೋಟೋಗ್ರಫಿ ಸಂಸ್ಥೆ ಆಯೋಜಿಸಿದ್ದ ಭಾರತೀಯ ಮದುವೆಫೋಟೋಗ್ರಫಿ ಸ್ಪರ್ಧೆಯಲ್ಲಿ ಮುನಿರಾಬಾದ್ ಸಮೀಪದ ಬಂಡಿಹರ್ಲಾಪುರ ಗ್ರಾಮದ ಖ್ಯಾತ ವನ್ಯಜೀವಿ ಛಾಯಾಗ್ರಾಹಕ ಹನುಮಂತ ಹರ್ಲಾಪುರ ಅವರು ಕಂಚಿನ ಪದಕ ಹಾಗೂ ನಗದು ಬಹುಮಾನ ಪಡೆದುಕೊಂಡಿದ್ದಾರೆ.
ಫೆ.8ರಂದು ಹೈದರಾಬಾದ್ ಎಲ್.ಬಿ. ನಗರದ ಕೆ.ಬಿ.ಆರ್.ಕನ್ವೆಕ್ಷನ್ ಹಾಲ್‌ನಲ್ಲಿ ಪದಕ ಪ್ರದಾನ ಕಾರ್ಯಕ್ರಮ ನಡೆಯಿತು. ಈ ಪ್ರತಿಷ್ಟಿತ ಸ್ಪರ್ಧೆಗೆ ಎಂ.ಸಿ. ಶೇಖರ್, ವೆಂಕಟೇಶ್ವರ ರಾವ್, ಚಂದನ ಸುಂದರ್, ಜಿನೇಶ ಪ್ರಸಾದ್ ನಿರ್ಣಾಯಕರಾಗಿದ್ದರು.