ಗುಣಮಟ್ಟದ ಕಾಮಗಾರಿ ನಿರ್ವಹಿಸಿ

ಗಂಗಾವತಿ- ಕನಕಗಿರಿ ರಸ್ತೆಯಲ್ಲಿ ಕೆಕೆಆರ್‌ಟಿಸಿ ವಿಶೇಷ ಅನುದಾನದಡಿ 18 ಕೋ.ರೂ.ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸ್ಯಾಟಲೈಟ್ ಕೇಂದ್ರೀಯ ಬಸ್ ನಿಲ್ದಾಣದ ಕಾಮಗಾರಿಯನ್ನು ಶಾಸಕ ಗಾಲಿ ಜನಾರ್ದನರೆಡ್ಡಿ ವೀಕ್ಷಿಸಿದರು. ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ, ಪ್ರಮುಖರಾದ ಯಮನೂರ ಚೌಡ್ಕಿ, ವೀರೇಶ ಬಲ್ಕುಂದಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಬಸ್
  • ನಿಲ್ದಾಣ
  • ಕಾಮಗಾರಿ
ಗಂಗಾವತಿ: ಟೆಂಡರ್ ಷರತ್ತಿನಂತೆ ಗುಣಮಟ್ಟದ ಕಾಮಗಾರಿ ನಿರ್ವಹಿಸಬೇಕಿದ್ದು, ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿದರು.
ನಗರದ ಕನಕಗಿರಿ ರಸ್ತೆಯಲ್ಲಿ ಕೆಕೆಆರ್‌ಟಿಸಿ ವಿಶೇಷ ಅನುದಾನದಡಿ 18ಕೋ.ರೂ.ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸ್ಯಾಟಲೈಟ್ ಕೇಂದ್ರೀಯ ಬಸ್ ನಿಲ್ದಾಣ ಕಾಮಗಾರಿಯನ್ನು ಮಂಗಳವಾರ ವೀಕ್ಷಿಸಿ ಮಾತನಾಡಿದರು.
ನಗರದಲ್ಲಿ ಜನಸಂಖ್ಯೆ ಹೆಚ್ಚುತ್ತಿದ್ದು, ಸಂಚಾರ ಪ್ರಮಾಣವೂ ಮಿತಿ ಮೀರಿದೆ. ನಗರದ ಹೃದಯ ಭಾಗದಲ್ಲಿರುವ ಬಸ್ ನಿಲ್ದಾಣದ ಕಿರಿದಾಗಿದ್ದರಿಂದ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಬಸ್ ನಿಲ್ದಾಣ ನಿರ್ಮಿಸಲಾಗುತ್ತಿದೆ. ಗುಣಮಟ್ಟದಲ್ಲಿ ರಾಜೀಯಾಗದಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದ್ದು, ಕೆಕೆಆರ್‌ಟಿಸಿ ನಿರ್ವಹಣೆ ಇಂಜಿನಿಯರ್‌ಗಳಿಗೂ ತಿಳಿಸಿದ್ದೇನೆ. ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆಯಂತೆ ಅಭಿವೃದ್ಧಿ ಕಾಮಗಾರಿಗಳನ್ನು ಹಂತಹಂತವಾಗಿ ಕೈಗೆತ್ತಿಕೊಳ್ಳಲಾಗುತ್ತಿದ್ದು, ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ ಎಂದರು.
ನಿರ್ಮಾಣ ಹಂತದ ಪ್ರತಿಯೊಂದು ಕಾಮಗಾರಿಯನ್ನು ವೀಕ್ಷಿಸಿದರಲ್ಲದೇ, ಕಾಮಗಾರಿಗೆ ಬಳಸುತ್ತಿರುವ ಸಲಕರಣೆಗಳ ಗುಣಮಟ್ಟವನ್ನು ಖಚಿತಪಡಿಸಿಕೊಂಡರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮನೋಹರಗೌಡ ಹೇರೂರು, ಪ್ರಮುಖರಾದ ವೀರೇಶ ಬಲ್ಕುಂದಿ, ವೀರೇಶ ಸುಳೇಕಲ್, ರಮೇಶ ಹೊಸ್ಮಲಿ, ಅರ್ಜುನ ನಾಯಕ, ಶರಣಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net