ಸೈಬರ್​ ವಂಚನೆಯಿಂದ ಜನ ಜಾಗೃತರಾಗಿ

ಕೊಪ್ಪಳದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸೈಬರ್​ ಕೆಂ ಜಾಗೃತಿ ಕಾರ್ಯಾಗಾರದಲ್ಲಿ ಡಿವೈಎಸ್ಪಿ ಸಿದ್ದಲಿಂಗನಗೌಡ ಮಾಹಿತಿ ನೀಡಿದರು. ಜಿಲ್ಲಾ ಎನ್​ಐಸಿ ಅಧಿಕಾರಿ ಬಸವರಾಜ, ಅಂಗವಿಕಲರ ಕಲ್ಯಾಣಾಧಿಕಾರಿ ವೆಂಕಟೇಶ ದೇಶಪಾಂಡೆ, ಸಲೀಂ ಹಾಗೂ ವಿವಿಧ ಇಲಾಖೆ ಅಧಿಕಾರಿಗಳಿದ್ದರು.
ಕೊಪ್ಪಳದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸೈಬರ್​ ಕೆಂ ಜಾಗೃತಿ ಕಾರ್ಯಾಗಾರದಲ್ಲಿ ಡಿವೈಎಸ್ಪಿ ಸಿದ್ದಲಿಂಗನಗೌಡ ಮಾಹಿತಿ ನೀಡಿದರು. ಜಿಲ್ಲಾ ಎನ್​ಐಸಿ ಅಧಿಕಾರಿ ಬಸವರಾಜ, ಅಂಗವಿಕಲರ ಕಲ್ಯಾಣಾಧಿಕಾರಿ ವೆಂಕಟೇಶ ದೇಶಪಾಂಡೆ, ಸಲೀಂ ಹಾಗೂ ವಿವಿಧ ಇಲಾಖೆ ಅಧಿಕಾರಿಗಳಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಿವೈಎಸ್ಪಿ ಸಿದ್ದಲಿಂಗನಗೌಡ ಪಾಟೀಲ್​ ಸೂಚನೆ
  • ಸುರಕ್ಷಿತ ಅಂತರ್ಜಾಲ ಅರಿವು ಕಾರ್ಯಾಗಾರ
ಕೊಪ್ಪಳ : ಸೈಬರ್​ ಸುರಕ್ಷತೆ ಪೊಲೀಸರ ಜವಾಬ್ದಾರಿ ಮಾತ್ರವಲ್ಲ. ಪ್ರತಿಯೊಬ್ಬ ನಾಗರಿಕ ಮತ್ತು ಅಧಿಕಾರಿ, ಸಿಬ್ಬಂದಿ ಜಾಗೃತರಾಗಬೆಕು. ಡಿಜಿಟಲ್​ ಜಗತ್ತಿನಲ್ಲಿ "ತಡೆ, ಯೋಚನೆ, ನಂತರ ಕ್ರಮ' ಎಂಬ ನೀತಿ ಅನುಸರಿಸಿದರೆ ಮೋಸದಿಂದ ತಪ್ಪಿಸಿಕೊಳ್ಳಬಹುದು ಎಂದು ಜಿಲ್ಲಾ ಸೈಬರ್​ ಕೆಂ ಡಿವೈಎಸ್ಪಿ ಸಿದ್ದಲಿಂಗನಗೌಡ ಪಾಟೀಲ್​ ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಮಂಗಳವಾರ ಸುರಕ್ಷಿತ ಅಂತರ್ಜಾಲ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಆನ್​ಲೈನ್​ ಬ್ಯಾಂಕಿಂಗ್​, ಸಾಮಾಜಿಕ ಜಾಲತಾಣ ಮತ್ತು ಇ-ಕಾಮರ್ಸ್​ ಬಳಕೆ ಹೆಚ್ಚಿದಂತೆ ಮೋಸಗಾರರು ಹೆಚ್ಚುತ್ತಿದ್ದಾರೆ. ನಮ್ಮ ಕೊಪ್ಪಳ ಸುತ್ತಮುತ್ತ ಸೈಬರ್​ ಪ್ರಕರಣಗಳು ಹೆಚ್ಚುತ್ತಿವೆ. ಅವುಗಳಿಂದ ಜಾಗೃತರಾಗಿ. ಸೈಬರ್​ ಕೆಂನಿಂದ ತಪ್ಪಿಸಿಕೊಳ್ಳಲು ಬಲವಾದ ಪಾಸ್​ವರ್ಡ್​ ಬಳಸಿ. ಅನಾಮಧೇಯ ಲಿಂಕ್​ ಅಥವಾ ಆ್ಯಪ್​ ಡೌನ್​ಲೋಡ್​ ಮಾಡಬೇಡಿ. ವೈಯಕ್ತಿಕ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹಂಚಬೇಡಿ. ಹಣ ವರ್ಗಾವಣೆಗೂ ಮೊದಲು ಖಚಿತಪಡಿಸಿಕೊಂಡು ವರ್ಗಾಯಿಸಿ ಎಂದರು.
ಮೊಬೈಲ್​, ಇಂರ್ಟನೆಟ್​ನಿಂದ ನಮಗೆ ಲಾಭ-ನಷ್ಟ ಎರಡು ಇದೆ. ಅವುಗಳನ್ನು ಯಾವ ರೀತಿ ಸದ್ಬಳಕೆ ಮಾಡಿಕೊಳ್ಳುತ್ತೇವೆ ಎಂಬುವುದು ಮುಖ್ಯ. ಪ್ರತಿಯೊಬ್ಬರೂ ಸೈಬರ್​ ಅಪರಾಧಗಳ ಕುರಿತು ತಿಳಿಯಬೇಕು. ಮನುಷ್ಯನಿಗೆ ಅತಿ ಆಸೆ ಮತ್ತು ಭಯ ಸೈಬರ್​ ಕೆಂಗೆ ದಾರಿಯಾಗುತ್ತದೆ. ಮೊಬೈಲ್​ ಕರೆಗಳ ಮೂಲಕ ಸೂಕ್ಷ$್ಮ ವಿವರಗಳಾದ ಒಟಿಪಿ, ಆಧಾರ್​, ಪ್ಯಾನ್​ ಅಥವಾ ಬ್ಯಾಂಕ್​ ಮಾಹಿತಿಯನ್ನು ಎಂದಿಗೂ ಬಹಿರಂಗಪಡಿಸಬಾರದು. ಅನಧಿಕೃತ ಆಧಾರ್​ ಪಾವತಿ ಅಧಿಸೂಚನೆಗಳ ಬಗ್ಗೆ ಜಾಗರೂಕರಾಗಿರಿ. ವೈಯಕ್ತಿಕ ಮಾಹಿತಿ ಅಥವಾ ಹಣಕ್ಕಾಗಿ ವಿನಂತಿಸುವ ಅಪರಿಚಿತ ದೂರವಾಣಿ ಸಂಖ್ಯೆಗಳಿಂದ ಬರುವ ಕರೆಗಳಿಗೆ ಎಂದಿಗೂ ಪ್ರತಿಕ್ರಿಯಿಸಬಾರದು ಎಂದು ಮಾಹಿತಿ ನೀಡಿದರು.
ಜಿಲ್ಲಾ ಎನ್​ಐಸಿ ಅಧಿಕಾರಿ ಬಸವರಾಜ, ಅಂಗವಿಕಲರ ಕಲ್ಯಾಣಾಧಿಕಾರಿ ವೆಂಕಟೇಶ ದೇಶಪಾಂಡೆ, ಸಲೀಂ ಹಾಗೂ ವಿವಿಧ ಇಲಾಖೆ ಅಧಿಕಾರಿಗಳಿದ್ದರು.
ಸೈಬರ್​ ಮೋಸವಾದರೆ ತಕ್ಷಣ 1930 ಸಹಾಯವಾಣಿಗೆ ಕರೆ ಮಾಡಿ ಅಥವಾ ಮೋಸ ಹೋದ ಒಂದು ಗಂಟೆಯೊಳಗಾಗಿ ಹತ್ತಿರದ ಪೊಲೀಸ್​ ಠಾಣೆಗೆ ಭೇಟಿ ನೀಡಿ ದೂರು ದಾಖಲಿಸಬೇಕು. ಇದರಿಂದ ಹಣ ವಾಪಸ್​ ಪಡೆಯುವ ಸಾಧ್ಯತೆ ಹೆಚ್ಚು. ಆದಷ್ಟು ಜಾಗೃತರಾಗಿ ವ್ಯವಹರಿಸುವುದು ಒಳಿತು. ಅಪರಿಚಿತ ಕರೆ, ಚಾಟಿಂಗ್​ಗೆ ಸ್ಪಂದಿಸಬೇಡಿ.
&ಸಿದ್ದಲಿಂಗನಗೌಡ ಪಾಟೀಲ್​. ಸೈಬರ್​ ಕೆಂ ಡಿವೈಎಸ್ಪಿ ಕೊಪ್ಪಳ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net