ಸುದ್ದಿಗೋಷ್ಠಿ ಬಳಿಕ ಎಸ್ಸಿ&ಎಸ್ಟಿ, ಒಬಿಸಿ ಮೀಸಲಾತಿ ಕುರಿತು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಜನರೊಂದಿಗೆ ಸಂವಾದ ನಡೆಸಿ. ಎಸ್ಟಿಗೆ ಶೇ.7ರಷ್ಟು ಹೆಚ್ಚಳ ಮಾಡಿ ಕೇಂದ್ರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ. ಆದರೆ, ಸಂವಿಧಾನದ ಷೆಡ್ಯೂಲ್ 9ಗೆ ತಿದ್ದುಪಡಿ ತಂದು ಸೇರ್ಪಡೆ ಮಾಡಬೇಕು. ಆ ಕೆಲಸ ಆಗುತ್ತಿಲ್ಲ. ಇದರಿಂದ ನಮಗೆ ಶೇ.3ರಷ್ಟು ಮೀಸಲು ದೊರೆಯುತ್ತಿದೆ. ಕೇಂದ್ರ ಸರ್ಕಾರ ಮೀಸಲು ಪ್ರಮಾಣ ಸಂವಿಧಾನ ಬದ್ಧಗೊಳಿಸಬೇಕು. ಬೇರೆ ರಾಜ್ಯಗಳಲ್ಲಿ ಶೇ.50ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಮೀಸಲು ಹಂಚಿಕೆ ಮಾಡಲಾಗಿದೆ. ಕರ್ನಾಟಕದ ವಿಷಯದಲ್ಲಿ ಯಾಕೆ ತಾರತಮ್ಯ ಮಾಡಲಾಗುತ್ತಿದೆ ಎಂದು ಆಗ್ರಹಿಸಿ ನಗರದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಎಸಿ ಕ್ಯಾ. ಮಹೇಶ ಮಾಲಗಿತ್ತಿಗೆ ಮನವಿ ಸಲ್ಲಿಸಲಾಯಿತು. ವಾಲ್ಮೀಕಿ ಮಹಾಸಭಾದ ಜಿಲ್ಲಾಧ್ಯಕ್ಷ ಡಾ.ಕೆ.ಎನ್.ಪಾಟೀಲ್, ಮಾಜಿ ಜಿಲ್ಲಾಧ್ಯಕ್ಷ ಟಿ.ರತ್ನಾಕರ, ಪ್ರಮುಖರಾದ ರಾಮಣ್ಣ ಕಲ್ಲನವರ, ಮಾಲತಿ ನಾಯಕ, ಜ್ಯೋತಿ ಗೊಂಡಬಾಳ, ಮಂಜುನಾಥ ಗೊಂಡಬಾಳ ಇತರರಿದ್ದರು.