ಅಳವಂಡಿ ಸಮೀಪದ ಬೆಟಗೇರಿ ಗ್ರಾಮದಲ್ಲಿ ಆಯೋಜಿಸಿರುವ ಬೆಟಗೇರಿ ಪ್ರೀಮಿಯರ್ ಲೀಗ್ ಸೀಸನ್-3ಗೆ ಮಾಜಿ ಸೈನಿಕ ಗುರುಬಸಯ್ಯ ಬೃಹನ್ಮಠ ಚಾಲನೆ ನೀಡಿದರು. ಪ್ರಮುಖರಾದ ವೆಂಕಣ್ಣ, ಗುರುಬಸಯ್ಯ, ನಾರಾಯಣಪ್ಪ, ಮುತ್ತಯ್ಯ, ಮಲ್ಲಪ್ಪ, ಬಸವರಾಜ ಇತರರಿದ್ದರು.
ಅಳವಂಡಿ: ಯುವಕರಲ್ಲಿ ಶಿಸ್ತು, ನಾಯಕತ್ವ ಮತ್ತು ಆತ್ಮವಿಶ್ವಾಸ ಹೆಚ್ಚಿಸುವಲ್ಲಿ ಕ್ರೀಡೆ ಪ್ರಮುಖ ಪಾತ್ರವಹಿಸುತ್ತದೆ ಎಂದು ಮಾಜಿ ಸೈನಿಕ ಗುರುಬಸಯ್ಯ ಬೃಹನ್ಮಠ ತಿಳಿಸಿದರು.
ಸಮೀಪದ ಬೆಟಗೇರಿ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಕ್ಷೇಮಾಭಿವೃದ್ಧಿ ಯುವಕ ಸಂಘದಿಂದ ದಿ.ಕಿರಣಕುಮಾರ ಲಕ್ಷಾಣಿ ಸ್ಮರಣಾರ್ಥ ಶನಿವಾರ ಆಯೋಜಿಸಿದ್ದ ಬೆಟಗೇರಿ ಪ್ರೀಮಿಯರ್ ಲೀಗ್ ಸೀಸನ್-3ಗೆ ಚಾಲನೆ ನೀಡಿ ಮಾತನಾಡಿದರು.
ಕ್ರೀಡಾ ಚಟುವಟಿಕೆಗಳು ದೈಹಿಕ ಸದೃಢ, ಮಾನಸಿಕ ಸ್ಥಿರತೆ ಹಾಗೂ ರೋಗ-ನಿರೋಧಕ ಶಕ್ತಿ ಹೆಚ್ಚಿಸುತ್ತವೆ. ಪೌಷ್ಟಿಕ ಆಹಾರ ಸೇವನೆ ಜತೆ ಪ್ರತಿನಿತ್ಯ ವ್ಯಾಯಾಮ ಮಾಡುವುದು ಮುಖ್ಯ. ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸಬೇಕು ಎಂದರು.