ಪಕ್ಷದ ಚಟುವಟಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ

ಕುಷ್ಟಗಿಯ ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಪೂರು ನಿವಾಸದಲ್ಲಿ ಬಿಎಲ್‌ಒ-2 ಪಟ್ಟಣದ ಹಾಗೂ ತಾಲೂಕಿನ ಮುಖಂಡರ ಸಭೆಯಲ್ಲಿ ದಿಶಾ ಸಮಿತಿ ಸದಸ್ಯ ದೊಡ್ಡಬಸನಗೌಡ ಪಾಟೀಲ್ ಬಯ್ಯಪೂರು ಮಾತನಾಡಿದರು. ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ್, ಪ್ರಮುಖರಾದ ಶೇಖರಗೌಡ ಮಾಲಿಪಾಟೀಲ್, ಲಾಡ್ಲೇಮಶಾಕ್ ದೋಟಿಹಾಳ್ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ದಿಶಾ ಸಮಿತಿ ಸದಸ್ಯ ದೊಡ್ಡಬಸನಗೌಡ ಪಾಟೀಲ್ ಹೇಳಿಕೆ
  • ಮುಖಂಡರ ಸಭೆ
ಕುಷ್ಟಗಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸಮರ್ಪಕವಾಗಿ ಅನುಷ್ಠಾನಗೊಳಿಸಿದ ಪಂಚ ಗ್ಯಾರಂಟಿ ಯೋಜನೆಗಳು ಅನುಕೂಲವಾಗಿದೆ ಎಂದು ದಿಶಾ ಸಮಿತಿ ಸದಸ್ಯ ದೊಡ್ಡಬಸನಗೌಡ ಪಾಟೀಲ್ ಹೇಳಿದರು.
ಪಟ್ಟಣದ ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಪೂರು ನಿವಾಸದಲ್ಲಿ ಬಿಎಲ್‌ಒ-2 ಪಟ್ಟಣದ ಹಾಗೂ ತಾಲೂಕಿನ ಮುಖಂಡರ ಸಭೆಯಲ್ಲಿ ಭಾನುವಾರ ಮಾತನಾಡಿದರು. ಕಾರ್ಯಕರ್ತರು ಬೂತ್ ಮಟ್ಟದ ಕೆಲಸ ಮಾಡಬೇಕಿದೆ. ಪಂಚಾಯತ್ ಹಂತದಲ್ಲಿ ಯುವಕರನ್ನು ನೇಮಕ ಮಾಡಿ ಪಕ್ಷದ ಚಟುವಟಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ತಿಳಿಸಬೇಕು ಎಂದರು.
ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ್ ಮಾತನಾಡಿ, ಪಕ್ಷದ ತಳಹಂತದಲ್ಲಿ ಕಾರ್ಯಕರ್ತರು ಶ್ರಮಿಸಬೇಕಿದೆ. ಆಯಾ ವಾರ್ಡ್‌ಗಳಲ್ಲಿ ಮತದಾರರನ್ನು ಪಟ್ಟಿಯಲ್ಲಿ ಸೇರ್ಪಡೆ ಮಾಡಬೇಕಿದೆ ಎಂದು ತಿಳಿಸಿದರು.
ಪ್ರಮುಖರಾದ ಶೇಖರಗೌಡ ಮಾಲಿಪಾಟೀಲ್, ಲಾಡ್ಲೇಮಶಾಕ್ ದೋಟಿಹಾಳ್, ಮಾಲತಿ ನಾಯಕ್, ಮೈನುದ್ದೀನ್ ಮುಲ್ಲಾ, ಶಕುಂತಲಾ ಹಿರೇಮಠ, ಶಾರದಾ ಕಟ್ಟಿಮನಿ, ವೀರೇಶ್ ಗುರಿಕಾರ್, ಯಲ್ಲಪ್ಪ ಬಾಗಲಿ, ಮೆಹೆಬೂಬ್ ಬೀ, ಕೇದರನಾಥ ಕುಲಕರ್ಣಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net