ಬಿರುಗಾಳಿಗೆ ಬಾಳೆ-ಪಪ್ಪಾಯ ಬೆಳೆ ಹಾನಿ

ಕನಕಗಿರಿ ಬಂಕಾಪುರದಲ್ಲಿ ಪಪ್ಪಾಯ ಬೆಳೆ ನೆಲಕಚ್ಚಿರುವುದು.
ಕನಕಗಿರಿ ಬಂಕಾಪುರದಲ್ಲಿ ಪಪ್ಪಾಯ ಬೆಳೆ ನೆಲಕಚ್ಚಿರುವುದು.
Published on
ಕನಕಗಿರಿ: ಪಟ್ಟಣ ಸೇರಿ ತಾಲೂಕಿನ ಹಲವು ಗ್ರಾಮಗಳಲ್ಲಿ ಮಂಗಳವಾರ ರಾತ್ರಿ ಗುಡುಗು, ಸಿಡಿಲು, ಬಿರುಗಾಳಿ ಸಹಿತ ಮಳೆ ಸುರಿದಿದೆ. ಇದರಿಂದ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ.
ಗುಡುಗು ಸಿಡಿಲಿನೊಂದಿಗೆ ಮಳೆ ಅರ್ಧ ಗಂಟೆ ಎಡಬಿಡದೆ ಸುರಿಯಿತು. ರಾತ್ರಿಯಿಂದ ಬುಧವಾರ ಬೆಳಗಿನ ಜಾವದವರೆಗೆ ಜಿಟಿ ಜಿಟಿ ಮಳೆಯಾಗಿದೆ. ಸಿಡಿಲು, ಬಿರುಗಾಳಿಗೆ ವಿದ್ಯುತ್ ಪರಿವರ್ತಕಗಳು ಸುಟ್ಟಿದ್ದು, ಅಲ್ಲಲ್ಲಿ ವಿದ್ಯುತ್ ತಂತಿಗಳು ತುಂಡಾಗಿವೆ. ಮಂಗಳವಾರ ರಾತ್ರಿ ಸ್ಥಗಿತಗೊಂಡ ವಿದ್ಯುತ್ ಬುಧವಾರ ಮಧ್ಯಾಹ್ನದವರೆಗೂ ಪೂರೈಕೆಯಾಗಲಿಲ್ಲ. ಇದರಿಂದ ಕುಡಿವ ನೀರಿನ ಅಭಾವದ ಜತೆಗೆ ಜನರು ರಾತ್ರಿಯಿಡಿ ಜಾಗರಣೆ ಮಾಡುವಂತಾಯಿತು.
ಕನಕಗಿರಿ ಹೋಬಳಿಯ ಬಂಕಾಪುರದಲ್ಲಿ ಸರ್ವೇ ನಂ.54ರಲ್ಲಿನ ವೆಂಕಟರಾವ್, ಸುಧಾಕರ ಸೇರಿ ಇತರರಿಗೆ ಸೇರಿದ ಅಂದಾಜು 10ಎಕರೆ ಬಾಳೆ ಬೆಳೆ ಹಾಳಾಗಿದೆ. ನಬೀಸಾಬ್ ಅವರ 5ಎಕರೆ ಪಪ್ಪಾಯ ಬೆಳೆ ನೆಲಕಚ್ಚಿದೆ. ಸ್ಥಳಕ್ಕೆ ಗ್ರಾಮ ಆಡಳಿತ ಅಧಿಕಾರಿಗಳು, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net