ಕೃಷಿಕರ ಮೇಲಿನ ಹಲ್ಲೆಗೆ ಆಕ್ರೋಶ

ಕುಷ್ಟಗಿಯಲ್ಲಿ ರೈತ ಸಂಘ ಮತ್ತು ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರಮುಖರಾದ ದೊಡ್ಡ ಭರಮಣ್ಣ ಸಿಂಗ್ರಿ, ಮಲ್ಲಿಕಾರ್ಜುನ ದೋಟಿಹಾಳ, ಹನುಮೇಶ ಶಾಖಾಪುರ, ಹೊನ್ನಪ್ಪ ತಳವಾರ, ಆರ್.ಕೆ. ದೇಸಾಯಿ, ಶರಣಪ್ಪ ಮೇಗೂರು ಇತರರಿದ್ದರು.
ಕುಷ್ಟಗಿಯಲ್ಲಿ ರೈತ ಸಂಘ ಮತ್ತು ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರಮುಖರಾದ ದೊಡ್ಡ ಭರಮಣ್ಣ ಸಿಂಗ್ರಿ, ಮಲ್ಲಿಕಾರ್ಜುನ ದೋಟಿಹಾಳ, ಹನುಮೇಶ ಶಾಖಾಪುರ, ಹೊನ್ನಪ್ಪ ತಳವಾರ, ಆರ್.ಕೆ. ದೇಸಾಯಿ, ಶರಣಪ್ಪ ಮೇಗೂರು ಇತರರಿದ್ದರು.
Published on

ಕುಷ್ಟಗಿ: ತಾಲೂಕಿನ ಗುಮಗೇರಾ ಗ್ರಾಮದಲ್ಲಿ ಇತ್ತೀಚೆಗೆ ರೈತರ ಮೇಲೆ ನಡೆದ ಹಲ್ಲೆ ಖಂಡಿಸಿ ರೈತ ಸಂಘ ಮತ್ತು ಪ್ರಗತಿ ಪರ ಸಂಘಟನೆಗಳ ನೇತೃತ್ವದಲ್ಲಿ ಬುಧವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು. 


ಮಲ್ಲಯ್ಯ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಟೋರಂಟೋ ಪವರ್‌ಲೈನ್ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಕಂಪನಿಯ ಪರವಾನಗಿ ರದ್ದುಪಡಿಸಬೇಕು. ಹಲ್ಲೆಗೊಳಗಾದ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು. 
ಕೃಷ್ಣಾ ಬಿ ಸ್ಕೀಮ್ ಏತ ನೀರಾವರಿ ಯೋಜನೆ ಜಾರಿಗೊಳಿಸಬೇಕು. ಕೆರೆಗಳನ್ನು ತುಂಬಿಸಬೇಕು. ಅಂಗನವಾಡಿ ಪೌಷ್ಟಿಕ ಆಹಾರದ ಅಕ್ರಮ ತಡೆಯಬೇಕು. ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ಸರಿಪಡಿಸಬೇಕು. ಮಳೆ ಇಲ್ಲದೆ ನಷ್ಟ ಅನುಭವಿಸಿದ ರೈತರಿಗೆ ಎಕರೆಗೆ 50 ಸಾವಿರ ರೂ. ಪರಿಹಾರ ನೀಡುವುದರ ಜತೆಗೆ ಐದು ಲಕ್ಷ ರೂ.ವರೆಗೆ ಕೃಷಿ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು. ಬಳಿಕ ತಹಸೀಲ್ದಾರ್ ರಜನಿಕಾಂತ್ ಕೆಂಗೇರಿಗೆ ಮನವಿ ಸಲ್ಲಿಸಿದರು. 
ರೈತ ಸಂಘದ ರಾಜ್ಯಾಧ್ಯಕ್ಷ ದೊಡ್ಡ ಭರಮಣ್ಣ ಸಿಂಗ್ರಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ದೋಟಿಹಾಳ, ಪ್ರಧಾನ ಕಾರ್ಯದರ್ಶಿ ಹನುಮೇಶ ಶಾಖಾಪುರ, ಜಿಲ್ಲಾಧ್ಯಕ್ಷ ಹೊನ್ನಪ್ಪ ತಳವಾರ, ರೈತ ಸಂಘದ ಜಿಲ್ಲಾಧ್ಯಕ್ಷ ಆರ್.ಕೆ. ದೇಸಾಯಿ, ತಾಲೂಕು ಅಧ್ಯಕ್ಷ ಶರಣಪ್ಪ ಮೇಗೂರು, ಉಪಾಧ್ಯಕ್ಷ ಶಿವಶರಣಗೌಡ ಪಾಟೀಲ್ ಹಾಗೂ ಪ್ರಮುಖರಾದ ಹುಚ್ಚೇಶ ವೈಜಾಪುರ, ಕಳಕಪ್ಪ ಹಡಪದ, ಮುತ್ತು ಬಿಜಕಲ್ಲ, ಹನುಮಂತ ನರೆಬಿಂಚಿ, ಹನುಮಗೌಡ ಹಿರೇಮನಿ, ಮಾರುತಿ ಜರಗಡ್ಡಿ, ಅಯ್ಯಪ್ಪ ಚೂರಿ, ಚಂದ್ರು ತಳಗೇರಿ, ಬಸವರಾಜ ಬಡಿಗೇರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net