ಗಂಗಾವತಿ: ಮಹಿಳಾ ಸ್ವಾವಲಂಭನೆಗೆ ಒತ್ತು ನೀಡಬೇಕು. ಜತೆಗೆ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಸಂಘದ ಜಿಲ್ಲಾಧ್ಯಕ್ಷೆ ಜಯಲಕ್ಷ್ಮೀ ಹೇಳಿದರು.
ನಗರದ ಕರುಣಾ ವೃದ್ಧಾಶ್ರಮದ ಆವರಣದಲ್ಲಿ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದಿಂದ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಮತ್ತು ಶೈಕ್ಷಣಿಕ ಕಾರ್ಯಗಾರದಲ್ಲಿ ಮಾತನಾಡಿದರು.
ಕಸಾಪ ತಾಲೂಕಾಧ್ಯಕ್ಷ ರುದ್ರೇಶ ಎಂ.ಆರಾಳ್ ಮಾತನಾಡಿ, ಸಂಘಟನಾತ್ಮಕ ಯೋಜನೆಗಳನ್ನು ರೂಪಿಸಬೇಕು ಎಂದರು. ವೃದ್ಧರಿಗೆ ಬೆಡ್‌ಶೀಟ್ ವಿತರಿಸಲಾಯಿತು.
ಸಂಘದ ತಾಲೂಕಾಧ್ಯಕ್ಷೆ ಉಮಾದೇವಿ ಪಾಟೀಲ್, ಪ್ರದಾನ ಕಾರ್ಯದರ್ಶಿ ಮಂಜುಳಾ, ಖಜಾಂಚಿ ಸಂಧ್ಯಾ, ಗೌರವಾಧ್ಯಕ್ಷೆ ಮೊನವ್ವ, ವೃದ್ಧಾಶ್ರಮದ ಮುಖ್ಯಸ್ಥೆ ಸಿ.ಮಹಾಲಕ್ಷ್ಮೀ ಇತರರಿದ್ದರು.