ವಿಕಸಿತ ಭಾರತ್ ರೋಜ್ಗಾರ್ ಮತ್ತು ಗ್ರಾಮೀಣ ಖಾತರಿ ಯೋಜನೆ ಜಾರಿ ಖಂಡಿಸಿ ಕರ್ನಾಟಕ ಕೃಷಿ ಕೂಲಿಕಾರರ ಹಾಗೂ ಗ್ರಾಮೀಣ ಕಾರ್ಮಿಕರ ಸಂಘದಿಂದ ಕಾತರಕಿ-&ಗುಡ್ಲಾನೂರು ಗ್ರಾಂಪಂ ಪಿಡಿಒಗೆ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಸುಂಕಪ್ಪ ಗದಗ, ಪದಾಧಿಕಾರಿಗಳಾದ ಖಾಲೆಸಾಬ ಕರಡಿ, ಮಮತಾಜ ಬೇಗಂ, ಯಲ್ಲಪ್ಪ ಸಂಗಟಿ, ಫಕೀರಮ್ಮ ಮಿರಗನತಂಡಿ, ರೇಣುಕಮ್ಮ ಇಡಿಗಲ್, ಬಂದಮ್ಮ ಹಕಾರಿ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಕೃಷಿ ಕೂಲಿಕಾರ ಸಂಘದಿಂದ ಮನವಿ ಸಲ್ಲಿಕೆ
ಕೊಪ್ಪಳ : ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯ ಹಕ್ಕುಸ್ವರೂಪವನ್ನು ತೆಗೆದುಹಾಕಿ, ವಿಕಸಿತ ಭಾರತ್ ರೋಜ್ಗಾರ್ ಮತ್ತು ಗ್ರಾಮೀಣ ಖಾತರಿ ಯೋಜನೆ ಜಾರಿಗೊಳಿಸಿರುವುದನ್ನು ಖಂಡಿಸಿ ಕರ್ನಾಟಕ ಕೃಷಿ ಕೂಲಿಕಾರರ ಹಾಗೂ ಗ್ರಾಮೀಣ ಕಾರ್ಮಿಕರ ಸಂಘದಿಂದ ಸೋಮವಾರ ಕಾತರಕಿ-&ಗುಡ್ಲಾನೂರು ಗ್ರಾಂಪಂ ಪಿಡಿಒಗೆ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
2005ರಲ್ಲಿ ಜಾರಿಯಾದ ಉದ್ಯೋಗ ಖಾತ್ರಿ ಕಾಯ್ದೆ ಗ್ರಾಮೀಣ ಭಾಗದ ಕೃಷಿ ಕೂಲಿಕಾರರು, ಬಡ ರೈತರು ಹಾಗೂ ದುಡಿಮೆಗಾರರ ಜೀವನೋಪಾಯಕ್ಕೆ ಆಧಾರವಾಗಿತ್ತು. ಆದರೆ ಹೊಸ ಯೋಜನೆಯಿಂದ ಕೂಲಿಕಾರರ ಹಕ್ಕುಗಳು ಕಸಿದುಕೊಳ್ಳಲಾಗುತ್ತಿದೆ. ಹೊಸ ನಿಯಮಗಳಲ್ಲಿ ಕೃಷಿ ಋತುವಿನ ವೇಳೆಯಲ್ಲಿ 60 ದಿನಗಳ ಕೆಲಸ ನಿರ್ಬಂಧಿಸಿರುವುದು, ಕೇಂದ್ರ-ರಾಜ್ಯ ಸರ್ಕಾರಗಳ ಹಣ ಹಂಚಿಕೆ ವ್ಯವಸ್ಥೆ, ಯಂತ್ರಗಳ ಬಳಕೆಗೆ ಅವಕಾಶ ನೀಡಿರುವುದು ಕೂಲಿಕಾರರಿಗೆ ಉದ್ಯೋಗದ ಅವಕಾಶ ಕಡಿಮೆ ಮಾಡುವ ಹುನ್ನಾರವಾಗಿದೆ ಎಂದು ದೂರಿದರು.
ಕೇಂದ್ರ ಸರ್ಕಾರದ ಅನುಮೋದನೆ ಪಡೆದ ರಾಜ್ಯ ಹಾಗೂ ಜಿಲ್ಲೆಗಳಲ್ಲಿ ಮಾತ್ರ ಯೋಜನೆ ಜಾರಿಗೊಳಿಸುವ ಕ್ರಮವೂ ಕಾರ್ಮಿಕರ ಹಕ್ಕಿಗೆ ಧಕ್ಕೆ ತರುತ್ತದೆ. ಉದ್ಯೋಗ ಖಾತ್ರಿ ಕಾಯ್ದೆಯನ್ನು ಹಿಂದಿನಂತೆಯೇ ಮುಂದುವರಿಸಬೇಕು, 200 ದಿನಗಳ ಕೆಲಸ ಹಾಗೂ ದಿನಕ್ಕೆ 700 ರೂ. ಕೂಲಿ ನೀಡಬೇಕು, ಬೇಸಿಗೆಯಲ್ಲಿ ಬೆಳಗ್ಗೆ 7ರಿಂದ 11 ಗಂಟೆಯವರೆಗೆ ಮಾತ್ರ ಕೆಲಸ ನಿಗದಿಪಡಿಸಬೇಕು ಸೇರಿದಂತೆ ವಿವಿಧ ಬೇಡಿಕೆಗೆ ಒತ್ತಾಯಿಸಿದರು.
ಕರ್ನಾಟಕ ಕೃಷಿ ಕೂಲಿಕಾರರ ತಾಲೂಕ ಸಮಿತಿ ಕಾರ್ಯದರ್ಶಿ ಸುಂಕಪ್ಪ ಗದಗ, ಪದಾಧಿಕಾರಿಗಳಾದ ಖಾಲೆಸಾಬ ಕರಡಿ, ಮಮತಾಜ ಬೇಗಂ, ಯಲ್ಲಪ್ಪ ಸಂಗಟಿ, ಫಕೀರಮ್ಮ ಮಿರಗನತಂಡಿ, ರೇಣುಕಮ್ಮ ಇಡಿಗಲ್, ಬಂದಮ್ಮ ಹಕಾರಿ, ರೇಖಮ್ಮ ಹಕಾರಿ, ನಿಂಗಪ್ಪ ಇತರರಿದ್ದರು.