ಸಮಾನಾಂತರ ಜಲಾಶಯ ನಿರ್ಮಿಸಿ

ಬಿಜೆಪಿ
ಬಿಜೆಪಿ
Published on

ಪ್ರಮುಖ ಮುಖ್ಯಾಂಶಗಳು

  • ಸಿಎಂ ಡಿಕೆಶಿಗೆ ವಿಪಕ್ಷಗಳ ಆಗ್ರಹ
ಕೊಪ್ಪಳ : ತುಂಗಭದ್ರಾ ಜಲಾಶಯದ 33 ಕ್ರಸ್ಟ್​ ಗೇಟ್​ ಬದಲಾಯಿಸಿ ಲೋಕಾರ್ಪಣೆ ಮಾಡುತ್ತಿರುವುದು ಸ್ವಾಗತಾರ್ಹ. ಈ ಭಾಗದ ಜ್ವಲಂತ ಸಮಸ್ಯೆ ಆಗಿರುವ ಹೂಳಿಗೆ ಪರ್ಯಾಯವಾಗಿ ನವಲಿ ಸಮಾನಾಂತರ ಜಲಾಶಯ ನಿರ್ಮಿಸಿ ಬದ್ಧತೆ ಪ್ರದರ್ಶಿಸುವಂತೆ ರಾಜ್ಯ ಸರ್ಕಾರಕ್ಕೆ ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.
ಈ ಬಗ್ಗೆ ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ನಾಯಕರು, ಸಿಎಂ ಡಿ.ಕೆ.ಶಿವಕುಮಾರ್​ ಮೂರು ವರ್ಷ ಜಲಸಂಪನ್ಮೂಲ ಸಚಿವರಾಗಿದ್ದಾಗ ಆಂಧ್ರ&ತೆಲಂಗಾಣ ಸಿಎಂಗಳೊಂದಿಗೆ ಮಾತನಾಡುವ ಭರವಸೆ ನೀಡಿದ್ದರು. ಕಳೆದ ವರ್ಷ ಆಂಧ್ರ ಸಿಎಂ ಸಮಯ ನೀಡುತ್ತಿಲ್ಲವೆಂದು ಹೇಳಿದ್ದರು. ಇಷ್ಟು ವರ್ಷ ಸಭೆಗೆ ಆಹ್ವಾನಿಸುವುದರಲ್ಲೇ ಕಾಲಹರಣವಾಗಿದೆ. ಜೂ.25ರಂದು ಆಂಧ್ರ, ತೆಲಂಗಾಣ ಸಿಎಂಗಳು ಆಗಮಿಸಲಿದ್ದು, ಆಗ ಸಮಾನಾಂತರ ಜಲಾಶಯ ಯೋಜನೆಗೆ ಒಪ್ಪಿಗೆ ಪಡೆವ ಮೂಲಕ ಕೊಟ್ಟ ಮಾತು ಉಳಿಸಿಕೊಂಡು ಬದ್ಧತೆ ಪ್ರದರ್ಶಿಸುವಂತೆ ಸವಾಲು ಹಾಕಿದರು.
ಸದ್ಯ ಗೇಟ್​ ಅಳವಡಿಕೆ ಕ್ರೆಡಿಟ್​ ತೆಗೆದುಕೊಳ್ಳುವ ತವಕದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಹೂಳು ಹಾಗೂ ನವಲಿ ಸಮಾನಾಂತರ ಜಲಾಶಯದ ಬಗ್ಗೆ ಕಾಳಜಿ ಇಲ್ಲ. ಈವರೆಗೂ ಹೂಳು ತಡೆಗೆ ಕ್ರಮ ಕೈಗೊಂಡಿಲ್ಲ. ರೈತರ ಎರಡು ಬೆಳೆ ನೀರು ಹಾನಿಯಾಗಿದೆ. ಕುಡಿವ ನೀರು ಸಮಸ್ಯೆ ಇದೆ. ಕೊಪ್ಪಳದಲ್ಲಿ ಜಲಾಶಯ ಇದ್ದರೂ ಸಮರ್ಪಕವಾಗಿ ಕುಡಿವ ನೀರು ಕಲ್ಪಿಸುತ್ತಿಲ್ಲ.
ಬಹಾದ್ದೂರಬಂಡಿ ಏತ ನೀರಾವರಿ ಯೋಜನೆ ಉದ್ಘಾಟನೆಯಾದರೂ ರೈತರಿಗೆ ನೀರು ಸಿಗುತ್ತಿಲ್ಲ. ಕರೆಂಟ್​ ಬಿಲ್​, ನಿರ್ವಹಣೆ ಹೆಸರಿನಲ್ಲಿ ಗುತ್ತಿಗೆದಾರರಿಗೆ ಕೋಟ್ಯಂತರ ರೂ. ಬಿಲ್​ ಮಾಡಲಾಗುತ್ತಿದೆ. ಹಿರೇಹಳ್ಳ ಜಲಾಶಯ ಯೋಜನೆಯಡಿಯೂ ಉದ್ದೇಶಿತ ಪ್ರದೇಶದಲ್ಲಿ ನೀರಾವರಿ ಆಗಿಲ್ಲ. ಕೊಪ್ಪಳದಲ್ಲಿ 9-&10 ಏತ ನೀರಾವರಿ ಯೋಜನೆಗಳಿವೆ. ಯಾವೂ ಸರಿಯಾಗಿ ಅನುಷ್ಠಾನವಾಗಿಲ್ಲ. ಈ ಬಗ್ಗೆ ಸರ್ಕಾರ ಉತ್ತರ ನೀಡಬೇಕೆಂದು ಒತ್ತಾಯಿಸಿದರು.
ವಿಪ ಸದಸ್ಯೆ ಹೇಮಲತಾ ನಾಯಕ, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್​ ಗುಳಗಣ್ಣವರ, ಗ್ರಾಮೀಣ ಮಂಡಲ ಅಧ್ಯಕ್ಷ ವಿರೇಶ ಸಜ್ಜನ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net