ದೇಶ ಸೇವೆ ಸಲ್ಲಿಸಲು ಅವಕಾಶ

ಗುಡದೂರು ಗ್ರಾಮದ ಸಂಜೀವ್ ಗೌಡ ಅಗ್ನಿವೀರ್ ತರಬೇತಿ ಮುಗಿಸಿ ಬಂದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸನ್ಮಾನಿಸಿದರು. ಪ್ರಮುಖರಾದ ಕನಕಪ್ಪ ಯಾದವ್, ಹಿರೇ ಹನುಮಂತಪ್ಪ, ಭೀಮನಗೌಡ, ಯಂಕಣ್ಣ ಕನ್ನಾಳ, ಹನುಮೇಶ ಕೋರಿ, ಯಮನಗೌಡ ಇತರರಿದ್ದರು.
ಗುಡದೂರು ಗ್ರಾಮದ ಸಂಜೀವ್ ಗೌಡ ಅಗ್ನಿವೀರ್ ತರಬೇತಿ ಮುಗಿಸಿ ಬಂದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸನ್ಮಾನಿಸಿದರು. ಪ್ರಮುಖರಾದ ಕನಕಪ್ಪ ಯಾದವ್, ಹಿರೇ ಹನುಮಂತಪ್ಪ, ಭೀಮನಗೌಡ, ಯಂಕಣ್ಣ ಕನ್ನಾಳ, ಹನುಮೇಶ ಕೋರಿ, ಯಮನಗೌಡ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ದೇಶ
  • ಸೇವೆ
  • ಸಲ್ಲಿಸಲು
ಕನಕಗಿರಿ: ಅಗ್ನಿವೀರ್‌ಗೆ ಆಯ್ಕೆಯಾಗಿ 7ತಿಂಗಳ ತರಬೇತಿ ಪೂರೈಸಿ ಸ್ವಗ್ರಾಮ ಗುಡದೂರಿಗೆ ಆಗಮಿಸಿದ ಯುವಕನನ್ನು ಪಟ್ಟಣ, ಹಿರೇಖೇಡದ ಗ್ರಾಮಸ್ಥರು ಸೋಮವಾರ ಅದ್ದೂರಿಯಾಗಿ ಸ್ವಾಗತಿಸಿ ಮೆರವಣಿಗೆ ಮಾಡಿ ಸನ್ಮಾನಿಸಿದರು.
ಅಗ್ನಿವೀರ ಸಂಜೀವ್ ಗೌಡ ಬಸನಗೌಡನನ್ನು ಪಟ್ಟಣ ಕನಕಾಚಲ ದೇವಸ್ಥಾನ ಮೂಲಕ ವಾಲ್ಮೀಕಿ ವೃತ್ತದವರೆಗೆ ಕನ್ನಡ ಧ್ವಜ ಹಾಗೂ ರಾಷ್ಟ್ರಧ್ವಜದೊಂದಿಗೆ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು.
ದೇಶ ಸೇವೆ ಸಲ್ಲಿಸಲು ಎಲ್ಲರಿಗೂ ಅವಕಾಶ ದೊರೆಯುವುದಿಲ್ಲ. ನನಗೆ ಅಂಥ ಅವಕಾಶ ದೊರೆತಿದ್ದು ಸದ್ಬಳಕೆ ಮಾಡಿಕೊಳ್ಳುವೆ ಎಂದು ಸಂಜೀವ್ ಹೇಳಿದರು. ಪ್ರಮುಖರಾದ ಕನಕಪ್ಪ ಯಾದವ್, ಹಿರೇಹನುಮಂತಪ್ಪ, ಭೀಮನಗೌಡ, ಯಂಕಣ್ಣ ಕನ್ನಾಳ, ಹನುಮೇಶ ಕೋರಿ, ಯಮನಗೌಡ, ಪಂಪಾಪತಿ, ಮಂಜುನಾಥ ಯತ್ನಟ್ಟಿ, ಸುಂದ್ರೇಶ ಬಡಿಗೇರ, ವೀನೋಧ ಕುಮಾರ, ಪಾಮಣ್ಣ ವಕ್ರಾಣಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net