ಕೊಪ್ಪಳದಲ್ಲಿ ಗುರುವಾರ ಆಯೋಜಿಸಿದ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಉದ್ಘಾಟನೆಯನ್ನು ಡಿವೈಎಸ್ಪಿ ಮುತ್ತಣ್ಣ ಸವರಗೋಳ ಮಾಡಿದರು. ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಅರುಣಾ ನರೇಂದ್ರ, ರಾಜ್ಯ ವಿಕಲಚೇತನ ನೌಕರರ ಸಂಘದ ಅಧ್ಯಕ್ಷ ಬೀರಪ್ಪ ಅಂಡಗಿ ಶಿಕ್ಷಣ ಪ್ರೇಮಿ ಹಜರತ್ ಅಲಿ, ಹಿರಿಯ ಸಾಹಿತಿ ಡಾ. ಮಾಂತೇಶ ಮಲ್ಲನಗೌಡರ, ವಿಜಯನಗರ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೆಂಕಟೇಶ ಬಡಿಗೇರ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಡಿವೈಎಸ್ಪಿ ಮುತ್ತಣ್ಣ ಸವರಗೋಳ ಅಭಿಪ್ರಾಯ
ಕೊಪ್ಪಳ :ಮಗುವಿನಂತಹ ನಿಷ್ಕಲ್ಮಶ ಮನಸ್ಸು ಉಳ್ಳವರು ಮಾತ್ರ ಅರ್ಥಪೂರ್ಣ ಮಕ್ಕಳ ಸಾಹಿತ್ಯವನ್ನು ಸೃಷ್ಟಿಸಲು ಸಾಧ್ಯ ಎಂದು ಕೊಪ್ಪಳ ಜಿಲ್ಲಾ ಪೊಲೀಸ್ ಉಪ ವರಿಷ್ಠಾಧಿಕಾರಿ ಮುತ್ತಣ್ಣ ಸವರಗೋಳ ಅವರು ಅಭಿಪ್ರಾಯಪಟ್ಟರು.
ನಗರದ ಶ್ರೀಶೈಲ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಆಯೋಜಿಸಿದ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಉದ್ಘಾಟನೆಯನ್ನು ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು ಪ್ರತಿಭಾವಂತ ಮಕ್ಕಳಿಗೆ ತಮ್ಮ ಕೌಶಲ ಪ್ರದರ್ಶಿಸಲು ಒಂದು ಉತ್ತಮ ವೇದಿಕೆಯಾಗಲಿ ಎಂದು ಆಶಿಸಿದರು.
ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಅರುಣಾ ನರೇಂದ್ರ ಮಾತನಾಡಿ, ಪರಿಷತ್ತು ನಡೆದು ಬಂದ ದಾರಿ ಹಾಗೂ ಮಕ್ಕಳ ವಿಕಾಸಕ್ಕಾಗಿ ಹಮ್ಮಿಕೊಳ್ಳುತ್ತಿರುವ ವಿವಿಧ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಜ್ಯ ವಿಕಲಚೇತನ ನೌಕರರ ಸಂಘದ ಅಧ್ಯಕ್ಷ ಬೀರಪ್ಪ ಅಂಡಗಿ ಮಾತನಾಡಿ, ಮಕ್ಕಳು ಸಾಹಿತ್ಯ, ಕಲೆ ಮತ್ತು ಸಂಸತಿಯೊಂದಿಗೆ ಮಾನವೀಯ ಪ್ರೀತಿ ಹಾಗೂ ಉತ್ತಮ ಜೀವನ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಶಿಕ್ಷಣ ಪ್ರೇಮಿ ಹಜರತ್ ಅಲಿ, ಹಿರಿಯ ಸಾಹಿತಿ ಡಾ. ಮಾಂತೇಶ ಮಲ್ಲನಗೌಡರ, ವಿಜಯನಗರ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೆಂಕಟೇಶ ಬಡಿಗೇರ, ಗಂಗಾವತಿಯ ಕಲ್ಮಠ ಶಿಕ್ಷಣ ಸಂಸ್ಥೆಯ ಉಪನ್ಯಾಸಕ ಮಂಜುನಾಥ ಎಂ., ಮುಖ್ಯೋಪಾಧ್ಯಾಯಿನಿ ಬಾಲನಾಗಮ್ಮ ಇತರರಿದ್ದರು.
ಪ್ರಶಸ್ತಿ ವಿಜೇತರಿಗೆ ಸನ್ಮಾನ
ಈ ಸಂದರ್ಭದಲ್ಲಿ ಬಾಲವಿಕಾಸ ಅಕಾಡೆಮಿಯ ಬಾಲಗೌರವ ಪ್ರಶಸ್ತಿ ಪುರಸತರಾದ ಮಂಜುನಾಥ ಗೊಂಡಬಾಳ ಹಾಗೂ ಅನಿಕೇತ ರಾಜೇಶ ಬಳ್ಳಾರಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ನಂತರ ಮಕ್ಕಳ ಸಾಹಿತ್ಯ ಪರಿಷತ್ತಿನ ನೂತನ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು.