ದಾಖಲಾತಿ ಹೆಚ್ಚಳಕ್ಕೆ ಶಿಕ್ಷಕನ ವಿಶೇಷ ಆಫರ್

ಮೈಲಾರಪ್ಪ ಬೂದಿಹಾಳ
ಮೈಲಾರಪ್ಪ ಬೂದಿಹಾಳ
Published on

ಪ್ರಮುಖ ಮುಖ್ಯಾಂಶಗಳು

  • 1ನೇ ತರಗತಿಗೆ ಸೇರಿಕೊಳ್ಳುವ ಮಕ್ಕಳಿಗೆ ಸಾವಿರ ರೂ. ಠೇವಣಿ
  • ಕಲಿಕಾ ಸಾಮಗ್ರಿ ಉಚಿತ ಕೊಡುಗೆ ಘೋಷಣೆ
ಗಂಗಾವತಿ: ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ಪ್ರಮಾಣ ಹೆಚ್ಚಳಕ್ಕೆ ತಾಲೂಕಿನ ಹಣವಾಳದ ಸ.ಹಿ.ಪ್ರಾ.ಶಾಲೆ ಶಿಕ್ಷಕ ಮೈಲಾರಪ್ಪ ಬೂದಿಹಾಳ ವೈಯಕ್ತಿಕ ಖರ್ಚಿನಲ್ಲಿ ಆರ್ ನೀಡಿದ್ದು, ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿದ್ದಾರೆ.
ಸರ್ಕಾರಿ ಶಾಲೆಗಳನ್ನು ತಿರಸ್ಕರಿಸುವ ಪಾಲಕರಿಗೆ ಸರ್ಕಾರಿ ಶಾಲೆಗಳಲ್ಲಿನ ಯೋಜನೆ ಮತ್ತು ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ದಾಖಲಾತಿ ಪ್ರಮಾಣ ನಿಯಂತ್ರಣಕ್ಕೆ ಗುಣಾತ್ಮಕ ಶಿಕ್ಷಣದ ಭರವಸೆ ಜತೆಗೆ ಸ್ವಂತ ಖರ್ಚಿನಲ್ಲಿ ಯೋಜನೆ ರೂಪಿಸಿದ್ದಾರೆ. ಒಂದನೇ ತರಗತಿಗೆ ದಾಖಲಾಗುವ ವಿದ್ಯಾರ್ಥಿಗೆ ಒಂದು ಸಾವಿರ ರೂ. ಠೇವಣಿ ಇಡುವುದರ ಜತೆಗೆ ವರ್ಷಕ್ಕೆ ವಿದ್ಯಾರ್ಥಿಗೆ ಬೇಕಾಗುವ ನೋಟ್‌ಬುಕ್, ಪೆನ್, ಪೆನ್ಸಿಲ್, ರಬ್ಬರ್ ಇತರ ಕಲಿಕಾ ಸಾಮಗ್ರಿಗಳ ಕಿಟ್ ಉಚಿತ ವಿತರಣೆ ಆರ್ ನೀಡಿದ್ದಾರೆ.
ಶಿಕ್ಷಣ, ಸಾಹಿತ್ಯ, ಪರಿಸರ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಮೈಲಾರಪ್ಪ ಬೂದಿಹಾಳ, ಸರ್ಕಾರಿ ಶಾಲೆಗಳ ಉಳಿವಿಗೆ ಶ್ರಮಿಸುತ್ತಿದ್ದಾರೆ. ಶಾಲೆ ಮುಖ್ಯಶಿಕ್ಷಕ ಕೆ.ಎಂ.ಚಂದ್ರಶೇಖರ್ ಪ್ರತಿಕ್ರಿಯಿಸಿ, ಶಿಕ್ಷಕ ಮೈಲಾರಪ್ಪ ಬೂದಿಹಾಳ ಅವರ ಆಫರ್‌ಗಳು ದಾಖಲಾತಿಗೆ ಪ್ರೇರಣೆಯಾಗಿದ್ದು, ಪಾಲಕರಿಗೂ ಅನುಕೂಲವಾಗಲಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net