ಕೊಪ್ಪಳದ ಫಿದೋರ್ಸ್ ಮಸೀದಿಗೆ ಅನುದಾಮ ಬಿಡುಗಡೆ ಪ್ರಮಾಣ ಪತ್ರವನ್ನು ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಶುಕ್ರವಾರ ನೀಡಿದರು. ಇಮಾಮ್ ಮೌಲಾನ ಸಿರಾಜುದ್ದೀನ್ ರಶಾದಿ, ಆಡಳಿತ ಮಂಡಳಿ ಸಂಚಾಲಕ ಬಹದ್ದೂರ್ ಖಾನ್ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಹೇಳಿಕೆ
ಕೊಪ್ಪಳ: ನಗರದ ಫಿದೋರ್ಸ್ ನಗರದ ಮಸೀದಿ ಹಾಗೂ ಅರಬ್ಬಿ ಶಾಲೆಗಳ ಮೂಲಸೌಕರ್ಯಕ್ಕೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಒಂದು ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು ಶುಕ್ರವಾರ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಆದೇಶ ಪ್ರತಿ ನೀಡಿದರು.
ನಂತರ ಮಾತನಾಡಿ, ಮಸೀದಿ ಹಾಗೂ ಅರಬ್ಬಿ ಶಾಲೆಗೆ ಮೂಲ ಸೌಕರ್ಯಗಳಿರಲಿಲ್ಲ. ಈ ಬಗ್ಗೆ ಮಸೀದಿ ಕಮಿಟಿ ನನಗೆ ಮನವಿ ಸಲ್ಲಿಸಿತ್ತು. ಈ ಬಗ್ಗೆ ದೂರವಾಣಿ ಕರೆ ಮಾಡಿ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ಗೆ ಅನುದಾನ ಕೇಳಿ ಮನವಿ ಮಾಡಿದ್ದೆ. ಅದಕ್ಕೆ ಸ್ಪಂದಿಸಿದ ಸಚಿವರು ತಕ್ಷಣ ಉಮ್ಮಿದ್ ಯೋಜನೆಯಡಿ ಒಂದು ಕೋಟಿ ರೂ. ಕೊಡುವುದಾಗಿ ಭರವಸೆ ನೀಡಿದರು. ಅದರಂತೆ ಇಲಾಖೆಯಿಂದ ಅನುದಾನ ಬಿಡುಗಡೆಯಾಗಿ ಆದೇಶ ಬಂದಿರುವುದು ಸಂತಸ ತಂದಿದೆ. ಮಸೀದಿ ಹಾಗೂ ಅರಬ್ಬಿ ಶಾಲೆಯ ಎಲ್ಲಾ ದಾಖಲೆಗಳನ್ನು ಸರಕಾರದ ಉಮ್ಮಿದ್ ಯೋಜನೆಯಡಿ ದಾಖಲಿಕರಣ ಮಾಡಿಸಲಾಗಿದೆ ಎಂದರು.
ಮಸೀದಿ ಕಮಿಟಿಯಿಂದ ಅಮ್ಜದ್ ಪಟೇಲ್ ಅವರನ್ನು ಸನ್ಮಾನಿಸಲಾಯಿತು. ಮಸೀದಿಯ ಪೇಶ್ ಇಮಾಮ್ ಮೌಲಾನ ಸಿರಾಜುದ್ದೀನ್ ರಶಾದಿ, ಆಡಳಿತ ಮಂಡಳಿ ಸಂಚಾಲಕ ಬಹದ್ದೂರ್ ಖಾನ್, ಶಫೀಕ್ ಖಾನ್, ಫಾರೂಕ್ ಅಹಮದ್ ಖಾನ್, ತೌಸ್ೀ ಖಾನ್, ಗೌಸಸಾಬ್ ಸರ್ದಾರ, ಬಶೀರ್ ಅಹಮದ್ ಇತರರಿದ್ದರು.