ಗವಿಮಠ ಜಾತ್ರಾ ಆವರಣದಲ್ಲಿ ಹಗ್ಗ ಕಟ್ಟಿ ಸಾಹಸ ಪ್ರದರ್ಶಿಸಲು ಮಧ್ಯಪ್ರದೇಶ ಮೂಲದ ಕುಟುಂಬವೊಂದು ಬಂದಿದೆ. ಹಗ್ಗದ ಮೇಲೆ ಕಟ್ಟಿಗೆ, ಪಾತ್ರೆ ಬಳಸಿ ಸಾಹಸ ಪ್ರದರ್ಶಿಸಿ ಜನರನ್ನು ರಂಜಿಸುತ್ತಿದೆ. ಆದರೆ, ಸಾಹಸಕ್ಕೆ 10 ವರ್ಷದ ಬಾಲಕಿಯನ್ನು ಬಳಕೆ ಮಾಡಿದ್ದಾರೆ. ಇದನ್ನು ಕಂಡು ಪ್ರಜ್ಞಾವಂತರು ಮಕ್ಕಳ ರಕ್ಷಣಾ ಟಕಕ್ಕೆ ಮಾಹಿತಿ ನೀಡಿದ್ದಾರೆ. ಮಕ್ಕಳ ಸಹಾಯವಾಣಿ 1098 ಜಿಲ್ಲಾ ಸಂಯೋಜಕ ಶರಣಪ್ಪ ಸಿಂಗನಾಳ, ಜಿಲ್ಲಾ ಬಾಲಕಾರ್ಮಿಕ ಯೋಜನಾಧಿಕಾರಿ ಬಸವರಾಜ ಹಿರೇಗೌಡರ್ ತಂಡ ಭೇಟಿ ನೀಡಿ ಬಾಲಕಿಯನ್ನು ವಶಕ್ಕೆ ಪಡೆದಿದ್ದಾರೆ. ಚಿಕ್ಕ ಮಕ್ಕಳನ್ನು ಬಳಕೆ ಮಾಡುವುದು ಕಾನೂನು ಬಾಹಿರವೆಂದು ತಿಳಿವಳಿಕೆ ನೀಡಿದ್ದಾರೆ.