ಕೊಪ್ಪಳದಲ್ಲಿ ಸಮಯಕ್ಕೆ ಕಚೇರಿಗೆ ಬಾರದ ಅಧಿಕಾರಿಗಳು

ಖಾಲಿ ಕಾಣುತ್ತಿರುವ ಕೊಪ್ಪಳದ ಡಾ. ಬಿ.ಆರ್​. ಅಂಬೇಡ್ಕರ್​ ಅಭಿವೃದ್ಧಿ ನಿಗಮ ಕಚೇರಿ.
ಖಾಲಿ ಕಾಣುತ್ತಿರುವ ಕೊಪ್ಪಳದ ಡಾ. ಬಿ.ಆರ್​. ಅಂಬೇಡ್ಕರ್​ ಅಭಿವೃದ್ಧಿ ನಿಗಮ ಕಚೇರಿ.
Published on

ಪ್ರಮುಖ ಮುಖ್ಯಾಂಶಗಳು

  • ಬಿಸಿಲ ನಾಡಕಚೇರಿ ಸಮಯ ಬದಲಾವಣೆ
  • ಅವಧಿಗೂ ಮುನ್ನ ಡಿಸಿ ಹಾಜರ್​
ಕೊಪ್ಪಳ: ಬೇಸಿಗೆ ಬಿಸಿಲಿನ ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಕಚೇರಿ ಸಮಯವನ್ನು ಬದಲಸಿ ಆದೇಶ ಹೋರಡಿಸಿದ್ದರು. ಬುಧವಾರ ಮೊದಲ ದಿನ ಜಿಲ್ಲಾಧಿಕಾರಿ ಹಾಗೂ ಕಚೇರಿ ಸಿಬ್ಬಂದಿಗಳನ್ನು ಹೊರತುಪಡಿಸಿ. ಬೇರೆ ಇಲಾಖೆಗಳ ಅಧಿಕಾರಿಗಳು ಕಚೇರಿ ಸಮಯಕ್ಕೆ ಗೈರಾಗಿರುವುದು ಕಂಡುಬಂತು.
ಸರ್ಕಾರವು ಕಲಬುರಗಿ ಮತ್ತು ಬೆಳಗಾವಿ ವಿಭಾಗದ ಜಿಲ್ಲೆಗಳಲ್ಲಿ ಏಪ್ರಿಲ್​ ಮತ್ತು ಮೇ ತಿಂಗಳ ಅವಧಿಯಲ್ಲಿ ನೌಕರರನ್ನು ಬಿಸಿಲಿನಿಂದ ರಕ್ಷಿಸಲು ಕಚೇರಿ ಸಮಯವನ್ನು ಬೆಳಗ್ಗೆ 8 ರಿಂದ ಮಧ್ಯಾಹ್ನ 1.30 ರವರೆಗೆ ಬದಲಾಯಿಸಿ ಆದೇಶ ಹೊರಡಿಸಿದೆ. ಆದರೆ, ಕೊಪ್ಪಳದ ಡಾ. ಬಿ.ಆರ್​. ಅಂಬೇಡ್ಕರ್​ ಅಭಿವೃದ್ಧಿ ನಿಗಮದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಚೇರಿಗೆ ಬಂದಿಲ್ಲ.
ಸರ್ಕಾರದ ಆದೇಶದಂತೆ ಬೆಳಗ್ಗೆ 8 ಗಂಟೆಗೆ ಕಚೇರಿಯಲ್ಲಿ ಇರಬೇಕಾದ ಸಿಬ್ಬಂದಿಗಳು, 10 ಗಂಟೆಯಾದರೂ ಕಚೇರಿ ಮುಖ ನೋಡಿಲ್ಲ. ಕಚೇರಿಯ ಜಿಲ್ಲಾ ವ್ಯವಸ್ಥಾಪಕಿ ಪುಷ್ಪಲತಾ ಸೇರಿದಂತೆ ಒಬ್ಬನೇ ಒಬ್ಬ ಸಿಬ್ಬಂದಿ ಕಚೇರಿಯಲ್ಲಿ ಇಲ್ಲದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರದ ಸೌಲಭ್ಯಗಳಿಗಾಗಿ ಹತ್ತಾರು ಕಿಲೋಮೀಟರ್​ ದೂರದಿಂದ ಬರುವ ಬಡ ಜನರು ಅಧಿಕಾರಿಗಳಿಲ್ಲದೆ ಕಚೇರಿ ಆವರಣದಲ್ಲಿ ಕಾದು ನಿಲ್ಲುವಂತಾಗಬಾರದು.
ಅಂಬೇಡ್ಕರ್​ ಅಭಿವೃದ್ಧಿ ನಿಗಮವು ದಲಿತ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಇರುವ ಪ್ರಮುಖ ಇಲಾಖೆ. ಇಲ್ಲಿನ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಫಲಾನುಭವಿಗಳು ಅಲೆದಾಡುವಂತಾಗಬಾರದು. ಬಿಸಿಲಿನಲ್ಲಿ ಕೆಲಸ ಮಾಡುವುದು ಕಷ್ಟ ಎಂದು ಸರ್ಕಾರ ಸಮಯ ಬದಲಾವಣೆ ಮಾಡಿದರೆ, ಅದನ್ನು ರಜೆ ಎಂದು ಪರಿಗಣಿಸಿದಂತೆ ಈ ಅಧಿಕಾರಿಗಳು ವರ್ತಿಸುತ್ತಿದ್ದಾರೆ. ಸರ್ಕಾರದ ಆದೇಶವನ್ನು ಬಹಿರಂಗವಾಗಿ ಉಲ್ಲಂಘಿಸಿರುವ ಅಧಿಕಾರಿ ಮತ್ತು ಸಿಬ್ಬಂದಿಗಳ ವಿರುದ್ಧ ಜಿಲ್ಲಾಧಿಕಾರಿಗಳು ಶಿಸ್ತು ಕ್ರಮ ಜರುಗಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net