ಮೌಢ್ಯಮುಕ್ತ ರಾಜ್ಯ ವೇದಿಕೆ ಉದ್ದೇಶ

ಯಲಬುರ್ಗಾದ ಪ್ರವಾಸಿ ಮಂದಿರದಲ್ಲಿ ಮಾನವ ಬಂಧುತ್ವ ವೇದಿಕೆಯ ಗ್ರಾಮ ಘಟಕಗಳ ಸಂಚಾಲಕರ ಒಂದು ದಿನದ ಕಾರ್ಯಾಗಾರವ್ನ ವೇದಿಕೆಯ ನಿಕಟಪೂರ್ವ ಪೂರ್ವ ಅಧ್ಯಕ್ಷ ಟಿ ರತ್ನಾಕರ ಉದ್ಘಾಟಿದರು. ಸಾಹಿತಿ ವೀರಣ್ಣ ನಿಂಗೋಜಿ, ತಾಲೂಕು ಸಂಚಾಲಕ ರಾದ ಹನುಮಂತಪ್ಪ ಭಜಂತ್ರಿ,  ಈಶಪ್ಪ ಶಿರೂರು ಇತರಿದ್ದರು.
ಯಲಬುರ್ಗಾದ ಪ್ರವಾಸಿ ಮಂದಿರದಲ್ಲಿ ಮಾನವ ಬಂಧುತ್ವ ವೇದಿಕೆಯ ಗ್ರಾಮ ಘಟಕಗಳ ಸಂಚಾಲಕರ ಒಂದು ದಿನದ ಕಾರ್ಯಾಗಾರವ್ನ ವೇದಿಕೆಯ ನಿಕಟಪೂರ್ವ ಪೂರ್ವ ಅಧ್ಯಕ್ಷ ಟಿ ರತ್ನಾಕರ ಉದ್ಘಾಟಿದರು. ಸಾಹಿತಿ ವೀರಣ್ಣ ನಿಂಗೋಜಿ, ತಾಲೂಕು ಸಂಚಾಲಕ ರಾದ ಹನುಮಂತಪ್ಪ ಭಜಂತ್ರಿ, ಈಶಪ್ಪ ಶಿರೂರು ಇತರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಿಕಟಪೂರ್ವ ಪೂರ್ವ ಅಧ್ಯಕ್ಷ ಟಿ.ರತ್ನಾಕರ ಹೇಳಿಕೆ
  • ಯಲಬುರ್ಗಾ ಮಾನವ ಬಂಧುತ್ವ ವೇದಿಕೆ ಕಾರ್ಯಾಗಾರ
ಯಲಬುರ್ಗಾ: ಮಾನವ ಬಂಧುತ್ವ ವೇದಿಕೆ ಮೂರು ವರ್ಷಗಳಿಂದ ಒಂದು ಮಹತ್ವದ ಜನಾಂದೋಲನವಾಗಿ ರಾಜ್ಯದಲ್ಲಿ ರೂಪುಗೊಳ್ಳುತ್ತಿದೆ ಜಿಲ್ಲಾ ಮಾನವ ಬಂಧುತ್ವ ವೇದಿಕೆಯ ನಿಕಟಪೂರ್ವ ಪೂರ್ವ ಅಧ್ಯಕ್ಷ ಟಿ.ರತ್ನಾಕರ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾನವ ಬಂಧುತ್ವ ವೇದಿಕೆಯ ಗ್ರಾಮ ಘಟಕಗಳ ಸಂಚಾಲಕರ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಕರ್ನಾಟಕವನ್ನು ಮೌಢ್ಯಮುಕ್ತ ರಾಜ್ಯವನ್ನಾಗಿಸುವುದು ವೇದಿಕೆ ಗಂಭೀರ ಪ್ರಯತ್ನವಾಗಿದ್ದು, ಆ ನಿಟ್ಟಿನಲ್ಲಿ ಈ ರಾಜ್ಯದ ಆಧುನಿಕ ವಿಚಾರ ಕ್ರಾಂತಿಯ ಹರಿಕಾರ ಸತೀಶ್ ಜಾರಕಿಹೊಳಿ ಅವರ ಉದ್ದೇಶವಾಗಿದೆ ಎಂದು ಹೇಳಿದರು.
ನಿವೃತ್ತ ಮುಖ್ಯೋಪಾಧ್ಯಾಯ ವೈ.ಬಿ.ಮೇಟಿ ಮಾತನಾಡಿ, ಮಾನವ ಬಂಧುತ್ವ ವೇದಿಕೆಯ ಆಶಯಗಳು ಸಮಾಜದಲ್ಲಿ ಸಮಾನತೆ ಮತ್ತು ಸಹಬಾಳ್ವೆಯನ್ನು ಬಲಪಡಿಸುವಲ್ಲಿ ಪ್ರಮುಖವಾಗಿವೆ ಸಂವಿಧಾನ ಉಳಿಯ ಬೇಕಾದರೆ ನಮಗೆ ಹಿಂದುತ್ವ ಬೇಕಾಗಿಲ್ಲ. ಹಿಂದುತ್ವ ಅನ್ನುವುದು ಬ್ರಾಹ್ಮಣ್ಯರು ಚುನಾವಣೆಯ ಗಿಮಿಕ್‌ಗೋಸ್ಕರ ಮಾಡಿದ ತಂತ್ರವಾಗಿದೆ. ಹಿಂದುತ್ವ ನಮಗೆ ಬೇಕಾಗಿಲ್ಲ ಮಾನವರು ನಾವೆಲ್ಲ ಒಂದೇ ಎಂದು ಸಾರಿ ಹೇಳುವ ಮಾನವ ಬಂಧುತ್ವ ಕಟ್ಟಬೇಕಾಗಿದೆ ಎಂದು ತಿಳಿಸಿದರು.
ಮಾನವ ಬಂಧುತ್ವ ವೇದಿಕೆಯ ಕೊಪ್ಪಳ ಜಿಲ್ಲಾ ಸಂಚಾಲಕ ಭೀಮಪ್ಪ ಹಾವಳಿ ಮಾತನಾಡಿದರು.
ಸಾಹಿತಿ ವೀರಣ್ಣ ನಿಂಗೋಜಿ. ತಾಲೂಕ ಸಂಚಾಲಕರಾದ ಹನುಮಂತಪ್ಪ ಭಜಂತ್ರಿ, ಈಶಪ್ಪ ಶಿರೂರು, ಪ್ರಮುಖರಾದ ಯಲ್ಲಪ್ಪ ಹಡಗಲಿ. ಫಕೀರಪ್ಪ ತಳವಾರ.ರಾಶೀದ್ ಖಾಜಿ, ಶ್ರೀಕಾಂತಗೌಡ ಮಾಲಿಪಾಟೀಲ್, ಮಂಜುನಾಥ ಕುರಿ, ಈರಪ್ಪ ಕರೆಕುರಿ, ಅಮೇಶ ಭಜಂತ್ರಿ, ಬಲವಂತ ಕಲ್ಲೂರು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net