ವಿಘ್ನೇಶ್ವರ -ಆಂಜನೇಯ ಮೂರ್ತಿ ಪ್ರತಿಷ್ಠಾಪನೆ

ಶ್ರೀರಾಮನಗರದ ಮುಖ್ಯರಸ್ತೆ ಕಾಲುವೆ ಬಳಿ ಜೀರ್ಣೋದ್ಧಾರಗೊಂಡ ದೇವಾಲಯದಲ್ಲಿ ಶ್ರೀ ವ್ನಿೇಶ್ವರ ಮತ್ತು ಆಂಜನೇಯ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಗುರುವಾರ ಜರುಗಿತು. ವಾಸ್ತು ಸಿದ್ಧಾಂತಿಗಳಾದ ಕನ್ನೆಪಲ್ಲಿ ರಾಮಚಂದ್ರಮೂರ್ತಿ, ತೆಂಪಲ್ಲಿ ರಾಮರಾವ್, ಕೋಣಕಂಚಿ ಶಿವಾಜಿ ಶರ್ಮಾ ಮತ್ತು ಪೋದಿಲ ಭಾನುಪ್ರಕಾಶ ಶರ್ಮಾ ಇತರರಿದ್ದರು.

Published on
ಗಂಗಾವತಿ: ತಾಲೂಕಿನ ಶ್ರೀರಾಮನಗರದ ಮುಖ್ಯರಸ್ತೆ ಕಾಲುವೆ ಬಳಿ ಜೀರ್ಣೋದ್ಧಾರಗೊಂಡ ದೇವಾಲಯದಲ್ಲಿ ಶ್ರೀ ವಿಘ್ನೇಶ್ವರ ಮತ್ತು ಶ್ರೀ ಆಂಜನೇಯ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಗುರುವಾರ ಜರುಗಿತು.
ಪುರಾತನ ದೇವಾಲಯವಾಗಿದ್ದು, ಶಿಥಿಲಗೊಂಡ ಹಿನ್ನೆಲೆಯಲ್ಲಿ ಇತ್ತೀಚಿಗೆ ಜೀರ್ಣೋದ್ಧಾರ ಕೈಗೊಳ್ಳಲಾಗಿತ್ತು. ಮೂರ್ತಿ ಪ್ರತಿಷ್ಠಾಪನೆ ನಿಮಿತ್ತ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಗ್ರಾಮ ಪ್ರದಕ್ಷಿಣೆ, ಪುಣ್ಯಹವಾಚನ, ರಕ್ಷಾ ಬಂಧನ, ದೀಕ್ಷಾಧಾರಣೆ, ಯಾಗಶಾಲೆ ಪ್ರವೇಶ, ಅಖಂಡ ದೀಪಾರಾಧನೆ, ಅಂಕುರಾರ್ಪಣೆ, ಧ್ವಜಾರೋಹಣ, ಹೋಮ, ಗೋಪೂಜೆ, ಕಳಸ, ಧ್ವಜಸ್ತಂಭ, ಮೂರ್ತಿಗಳ ಪ್ರತಿಷ್ಠಾಪನೆ, ಅಭಿಷೇಕ, ಕಮಲದ ಹೂವುಗಳಿಂದ ಅಲಂಕಾರ ಮತ್ತು ಹೋಮದ ಪೂರ್ಣಾಹುತಿ ನೆರವೇರಿಸಲಾಯಿತು.
ವಿವಿಧ ಗ್ರಾಮಗಳಿಂದ ಬಂದಿದ್ದ ಭಜನಾ ಮಂಡಳಿಗಳಿಂದ ನಿರಂತರ ಭಜನೆ ಮತ್ತು ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು. ವಾಸ್ತು ಸಿದ್ಧಾಂತಿಗಳಾದ ಕನ್ನೆಪಲ್ಲಿ ರಾಮಚಂದ್ರಮೂರ್ತಿ, ತೆಂಪಲ್ಲಿ ರಾಮರಾವ್, ಕೋಣಕಂಚಿ ಶಿವಾಜಿ ಶರ್ಮಾ ಮತ್ತು ಪೋದಿಲ ಭಾನುಪ್ರಕಾಶ ಶರ್ಮಾ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು.
ದೇವಾಲಯ ಸಮಿತಿ ಪ್ರಮುಖರಾದ ಅನ್ನೆ ಚಂದ್ರಶೇಖರ್, ಚೆನ್ನುಪಾಟಿ ಪ್ರಭಾಕರ, ದೋನೆಪುಡಿ ಪ್ರಸಾದ, ಕರಟೂರಿ ಶ್ರೀನಿವಾಸ, ಡಿ.ಆರ್. ಸತೀಶ, ಪೋಟ್ಲೂರಿ ಶ್ರೀನಿವಾಸ, ಸಂತೋಷ, ಗೋಪಿನಾಥ, ಅರ್ಚಕ ಗುರುರಾಜ್ ಕುಲ್ಕರ್ಣಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net