ನಗರ ವ್ಯಾಪ್ತಿಯ ಹಾಸ್ಟೆಲ್‌ಗಳಿಗೆ ಬೇಕಾಗುವ ಅಗತ್ಯ ಸೌಲಭ್ಯಗಳನ್ನು ನಗರಸಭೆಯ ಮೀಸಲು ಅನುದಾನದಲ್ಲಿ ಒದಗಿಸಲು ಅವಕಾಶವಿದ್ದು, ಕೂಡಲೇ ಕ್ರಿಯಾಯೋಜನೆ ರೂಪಿಸುವಂತೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಹುಲುಗಪ್ಪ ನಗರಸಭೆ ಸಮುದಾಯ ಸಂಘಟಕಿ ಲಕ್ಷ್ಮೀದೇವಿಗೆ ಸೂಚಿಸಿದರು. ಸಭೆಯಲ್ಲಿ ಕೃಷಿ, ತೋಟಗಾರಿಕೆ, ಎಪಿಎಂಸಿ, ಸಿಡಿಪಿಒ, ಲೋಕೋಪಯೋಗಿ ಮತ್ತು ಪಶು ಸಂಗೋಪನಾ ಇಲಾಖೆಯಲ್ಲಿನ ಮೀಸಲು ವರ್ಗದ ಯೋಜನೆ ಮತ್ತು ಅನುಷ್ಠಾನ ಪ್ರಮಾಣ ಕುರಿತು ಚರ್ಚಿಸಲಾಯಿತು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಎಂ. ಸರಸ್ವತಿ, ಆರಣ್ಯ ಸಹಾಯಕ ರಾಘವೇಂದ್ರ, ಸಿಡಿಪಿಒ ಶರಣಪ್ಪ ಗದ್ದಿ, ಜೆಸ್ಕಾಂ ಎಇಇ ವಿ.ಮಂಜುನಾಥ ಇದ್ದರು.