ಮಾಲಿನ್ಯ ನಿಯಂತ್ರಣ ಮಂಡಳಿ ಷರತ್ತು ಉಲ್ಲಂಘನೆ

ಗಂಗಾವತಿ ತಾಲೂಕಿನ ಹನುಮನ ಹಳ್ಳಿ ಬಳಿಯ ರೆಸಾರ್ಟ್‌ನಲ್ಲಿ ದಾಖಲೆ ಪರಿಶೀಲಿಸುತ್ತಿರುವ ಎಸಿ ಮಹೆಬೂಬ್ ಜೀಲಾನಿ ನೇತೃತ್ವದ ಅಧಿಕಾರಿಗಳ ತಂಡ. ಪರಿಸರ ನಿಯಂತ್ರಣ ಮಂಡಳಿ ಅಧಿಕಾರಿ ಅನಿಲಕುಮಾರ, ಸಹಾಯಕ ಅಧಿಕಾರಿ ಅಮರ ಇತರರಿದ್ದರು.
ಗಂಗಾವತಿ ತಾಲೂಕಿನ ಹನುಮನ ಹಳ್ಳಿ ಬಳಿಯ ರೆಸಾರ್ಟ್‌ನಲ್ಲಿ ದಾಖಲೆ ಪರಿಶೀಲಿಸುತ್ತಿರುವ ಎಸಿ ಮಹೆಬೂಬ್ ಜೀಲಾನಿ ನೇತೃತ್ವದ ಅಧಿಕಾರಿಗಳ ತಂಡ. ಪರಿಸರ ನಿಯಂತ್ರಣ ಮಂಡಳಿ ಅಧಿಕಾರಿ ಅನಿಲಕುಮಾರ, ಸಹಾಯಕ ಅಧಿಕಾರಿ ಅಮರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗಂಗಾವತಿ ತಾಲೂಕಿನ 8 ರೆಸಾರ್ಟ್‌ಗಳಿಗೆ ನೋಟಿಸ್
  • ನಾನಾ ಇಲಾಖೆ ಅಧಿಕಾರಿಗಳಿಂದ ಪರಿಶೀಲನೆ
ಗಂಗಾವತಿ: ಐತಿಹಾಸಿಕ ಪ್ರದೇಶ ವ್ಯಾಪ್ತಿಯಲ್ಲಿ ಪರಿಸರ ಮಾಲಿನ್ಯದ ಬಗ್ಗೆ ಲೋಕಾಯುಕ್ತ ದೂರಿನ ಹಿನ್ನೆಲೆಯಲ್ಲಿ ತಾಲೂಕಿನ ಆನೆಗೊಂದಿ, ಸಣಾಪುರ ಗ್ರಾಪಂ ವ್ಯಾಪ್ತಿಯ 8 ರೆಸಾರ್ಟ್‌ಗಳ ಮೇಲೆ ಕಂದಾಯ, ಗ್ರಾಪಂ ಮತ್ತು ಪರಿಸರ ನಿಯಂತ್ರಣ ಮಂಡಳಿ ಅಧಿಕಾರಿಗಳ ತಂಡ ಮಂಗಳವಾರ ದಾಳಿ ನಡೆಸಿ ಪರಿಶೀಲನೆ ನಡೆಸಿತು.
ಸ್ಮಾರಕಗಳನ್ನೊಳಗೊಂಡ ಪರಿಸರ ಮತ್ತು ವಿಜಯನಗರ ಕಾಲುವೆ ವ್ಯಾಪ್ತಿಯ ರೆಸಾರ್ಟ್‌ಗಳು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಷರತ್ತುಗಳನ್ನು ಪಾಲಿಸಬೇಕಿದ್ದು, ತ್ಯಾಜ್ಯ ನಿಯಂತ್ರಣ ಘಟಕ ನಿರ್ಮಾಣ ಮಾಡಿಕೊಳ್ಳಬೇಕು. ನಿಯಮ ಉಲ್ಲಂಸಿರುವ ಬಗ್ಗೆ ಲೋಕಾಯುಕ್ತಕ್ಕೆ ದೂರು ಬಂದ ಹಿನ್ನೆಲೆಯಲ್ಲಿ ಎಸಿ ಮಹೆಬೂಬ್ ಜೀಲಾನಿ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ, ವಾಸ್ತವ ಸ್ಥಿತಿ ಪರಿಶೀಲಿಸಿತು.
ಮಂಡಳಿ ಷರತ್ತು ಉಲ್ಲಂಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದರಿಂದ ಹನುಮನಹಳ್ಳಿಯ ಸುಗ್ರೀವಾಸ್ ಕಿಂಗ್‌ಡಮ್, ಹಂಪಿ ಡೆಲ್ಮಾಂಟ್, ಗ್ರೀನ್ ಸ್ಟೋನ್, ಹಂಪಿ ಹಾರ್ಟ್ ಲ್ಯಾಂಡ್ ಹೆರಿಟೇಜ್, ಥ್ರೀ ಸೀಸನ್ಸ್ , ರಂಗಾಪುರದ ವಿಸ್ಪರಿಂಗ್ ರಾಕ್, ಹೊಳೆ ಮುದ್ಲಾಪುರದ ಒಟ್ಟರ್ಸ್‌ ಕೆೆ, ತಿರುಮಲಾಪುರದ ುಲ್‌ಮೂನ್ ರೆಸಾರ್ಟ್‌ಗಳನ್ನು ಜಪ್ತಿ ಮಾಡಲಾಯಿತು. ನಿಯಂತ್ರಣ ಮಂಡಳಿ ಷರತ್ತಿನಂತೆ ರೆಸಾರ್ಟ್‌ಗಳಲ್ಲಿ ತ್ಯಾಜ್ಯ ನೀರು ನಿರ್ವಹಣೆ (ಎಸ್‌ಟಿಪಿ), ಘನತ್ಯಾಜ್ಯ ನಿರ್ವಹಣೆ, ಮಾಲಿನ್ಯ ನಿಯಂತ್ರಣ, ಶಬ್ದಮಿತಿ, ವಾಯುಗುಣಮಟ್ಟದ ಮಾನದಂಡಗಳು ಮತ್ತು ತ್ಯಾಜ್ಯ ನೀರನ್ನು ಪರಿಸರ ಮತ್ತು ವಿಜಯನಗರ ಕಾಲುವೆಗಳಿಗೆ ಹರಿಸುತ್ತಿರುವುದು ಕಂಡು ಬಂದಿದೆ.
ರೆಸಾರ್ಟ್‌ನಲ್ಲಿ ವಿದೇಶ ಮತ್ತು ಹೊರರಾಜ್ಯಗಳಿಂದ ಪ್ರವಾಸಿಗರು ಉಳಿದುಕೊಂಡ ಹಿನ್ನೆಲೆಯಲ್ಲಿ ಎರಡುದಿನಗಳ ಕಾಲಾವಕಾಶ ನೀಡುವಂತೆ ರೆಸಾರ್ಟ್ ಮಾಲೀಕರು ಮನವಿ ಮಾಡಿರುವ ಹಿನ್ನೆಲೆಯಲ್ಲಿ ಅವಕಾಶ ನೀಡಿದ ಅಧಿಕಾರಿಗಳು, ಮಂಡಳಿ ಷರತ್ತುಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ರೆಸಾರ್ಟ್‌ಗಳಿಗೆ ಪರವಾನಗಿ ನೀಡುವ ಮುನ್ನ ಮಂಡಳಿಯಿಂದ ನಿರಪೇಕ್ಷಣಾ ಪತ್ರ ಕಡ್ಡಾಯ ಪಡೆಯಬೇಕಿದೆ. ಆದರೆ ಇದ್ಯಾವದನ್ನೂ ಲೆಕ್ಕಿಸದೇ ಕಂದಾಯ, ಗ್ರಾಪಂ ಮತ್ತು ಹಂಪಿ ಪ್ರಾಧಿಕಾರ ಪರವಾನಗಿ ನೀಡಿರುವುದು ಅನುಮಾನಕ್ಕೆ ಕಾರಣವಾಗಿದ್ದು, ಪ್ರಭಾವಿಗಳ ಒತ್ತಡಕ್ಕೆ ಮಣಿದು ಅವಕಾಸ ನೀಡಿರುವ ಮಾತುಗಳು ಕೇಳಿಬಂದಿವೆ. ಲೋಕಾಯುಕ್ತಕ್ಕೆ ದೂರು ಬಂದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ, ಲೋಕಾಯುಕ್ತಕ್ಕೆ ವರದಿ ಸಲ್ಲಿಸಿದ್ದಾರೆ.
ತಹಸೀಲ್ದಾರ್ ಯು.ವಸಂತಕುಮಾರಿ, ಕಂದಾಯ ನಿರೀಕ್ಷಕ ಮಹೇಶ ದಲಾಲ್, ಪರಿಸರ ನಿಯಂತ್ರಣ ಮಂಡಳಿ ಅಧಿಕಾರಿ ಅನಿಲಕುಮಾರ, ಸಹಾಯಕ ಅಧಿಕಾರಿ ಅಮರ ಮತ್ತು ಗ್ರಾಪಂ ಸಿಬ್ಬಂದಿ ಭಾಗವಹಿಸಿದ್ದರು.
"

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಷರತ್ತು ಉಲ್ಲಂಸಿರುವ ಹಿನ್ನೆಲೆಯಲ್ಲಿ ಗಂಗಾವತಿ ತಾಲೂಕಿನ 8 ರೆಸಾರ್ಟ್‌ಗಳನ್ನು ಪರಿಶೀಲಿಸಲಾಗಿದ್ದು, ಮಾಲೀಕರಿಗೆ ನೋಟಿಸ್ ನೀಡಲಾಗಿದೆ.

— ಯು.ವಸಂತಕುಮಾರಿ ತಹಸೀಲ್ದಾರ್, ಗಂಗಾವತಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net