ಅರಸುತನ ಮೇಲಲ್ಲ ಅಗಸುತನ ಕೀಳಲ್ಲ

ಬೇವಿನಹಳ್ಳಿಯಲ್ಲಿ ಮಡಿವಾಳ ಮಾಚಿದೇವ ಜಯಂತಿ ಆಚರಿಸಲಾಯಿತು. ಮಡಿವಾಳ ಸಮಾಜ ಅಧ್ಯಕ್ಷ ಯಲ್ಲಪ್ಪ ಮಡಿವಾಳ, ಗ್ರಾಪಂ ಮಾಜಿ ಸದಸ್ಯ ಭೀಮಣ್ಣ ಮೂಲಿಮನಿ, ಪ್ರಮುಖರಾದ ಕೃಷ್ಣಪ್ಪ ಮಡ್ಡಿ, ಶಿವಮೂರ್ತಿ ಮೂಲಿಮನಿ ಇತರಿದ್ದರು.
ಬೇವಿನಹಳ್ಳಿಯಲ್ಲಿ ಮಡಿವಾಳ ಮಾಚಿದೇವ ಜಯಂತಿ ಆಚರಿಸಲಾಯಿತು. ಮಡಿವಾಳ ಸಮಾಜ ಅಧ್ಯಕ್ಷ ಯಲ್ಲಪ್ಪ ಮಡಿವಾಳ, ಗ್ರಾಪಂ ಮಾಜಿ ಸದಸ್ಯ ಭೀಮಣ್ಣ ಮೂಲಿಮನಿ, ಪ್ರಮುಖರಾದ ಕೃಷ್ಣಪ್ಪ ಮಡ್ಡಿ, ಶಿವಮೂರ್ತಿ ಮೂಲಿಮನಿ ಇತರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕನ್ನಡಪರ ಹೋರಾಟಗಾರ ಬೆಳ್ಳಪ್ಪ ಬೂದಗುಂಪಿ ಹೇಳಿಕೆ
  • ಮುನಿರಾಬಾದ್ ಬೇವಿನಹಳ್ಳಿ ಮಡಿವಾಳ ಮಾಚಿದೇವ ಜಯಂತಿ
ಮುನಿರಾಬಾದ್: ಅರಸುತನ ಮೇಲಲ್ಲ-ಆಗಸತನ ಕೀಳಲ್ಲ ಎಂಬ ಸಂದೇಶವನ್ನು ಇಡೀ ಜಗತ್ತಿಗೆ ಸಾರಿದ ಕ್ರಾಂತಿಕಾರಿ ವಚನಕಾರರಲ್ಲಿ ಮಡಿವಾಳ ಮಾಚಿದೇವ ಮೊದಲಿಗರು ಎಂದು ಕನ್ನಡಪರ ಹೋರಾಟಗಾರ ಬೆಳ್ಳಪ್ಪ ಬೂದಗುಂಪಿ ಹೇಳಿದರು.
ಸಮೀಪದ ಬೇವಿನಹಳ್ಳಿ ಗ್ರಾಮದಲ್ಲಿ ಮಡಿವಾಳ ಮಾಚಿದೇವ ಜಯಂತಿ ನಿಮಿತ್ತ ನಾಮಫಲಕಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಮಾತನಾಡಿದರು. ಸಮಾಜದ ಅಂಕು-ಡೊಂಕುಗಳು ಹಾಗೂ ಅಸಮಾನತೆ ವಿರುದ್ಧ ಕತ್ತಿ ಹಿಡಿದ ಮಾಚಿದೇವರು, ವಚನಗಳ ಮೂಲಕ ಲೋಕದ ಲೋಪಗಳನ್ನು ತಿದ್ದಲು ಮುಂದಾದರು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net