ರಾಜಧಾನಿಗೆ ನಾನ್ ಎಸಿ ಸ್ಲೀಪರ್ ಬಸ್ ಸೇವೆ ಆರಂಭ

ಕಾರಟಗಿಯಿಂದ ಬೆಂಗಳೂರಿಗೆ ಕೆಕೆಆರ್‌ಟಿಸಿಯಿಂದ ನಾನ್ ಎಸಿ ಸ್ಲೀಪರ್ ಬಸ್ ಸಂಚಾರ ಸೇವೆಯನ್ನು ಸೋಮವಾರ ಆರಂಭಿಸಲಾಯಿತು. ಪುರಸಭೆ ಅಧ್ಯಕ್ಷೆ ರೇಖಾ ಆನೆಹೊಸೂರು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ್ ಇತರರಿದ್ದರು.
ಕಾರಟಗಿಯಿಂದ ಬೆಂಗಳೂರಿಗೆ ಕೆಕೆಆರ್‌ಟಿಸಿಯಿಂದ ನಾನ್ ಎಸಿ ಸ್ಲೀಪರ್ ಬಸ್ ಸಂಚಾರ ಸೇವೆಯನ್ನು ಸೋಮವಾರ ಆರಂಭಿಸಲಾಯಿತು. ಪುರಸಭೆ ಅಧ್ಯಕ್ಷೆ ರೇಖಾ ಆನೆಹೊಸೂರು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕಾರಟಗಿಯಿಂದ ಬೆಂಗಳೂರಿಗೆ ಸಂಚಾರ
  • ನಿತ್ಯ ಪಟ್ಟಣದಿಂದ ರಾತ್ರಿ 9ಕ್ಕೆ ತೆರಳುವ ಬಸ್
ಕಾರಟಗಿ: ಪಟ್ಟಣದಿಂದ ಬೆಂಗಳೂರು ನಗರಕ್ಕೆ ಕೆಕೆಆರ್‌ಟಿಸಿ ಕೊಪ್ಪಳ ವಿಭಾಗದಿಂದ ನೂತನ ನಾನ್ ಎಸಿ ಸ್ಲೀಪರ್ ಬಸ್ ಸಂಚಾರ ಸೇವೆಯನ್ನು ಸೋಮವಾರ ರಾತ್ರಿ ಆರಂಭಿಸಲಾಯಿತು.
ಇಲ್ಲಿನ ಬಸ್ ನಿಲ್ದಾಣದಲ್ಲಿ ಹೊಸ ಮಾರ್ಗದ ಬಸ್‌ಗೆ ಪುರಸಭೆ ಅಧ್ಯಕ್ಷೆ ರೇಖಾ ಆನೆಹೊಸೂರು ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ್ ಸೇರಿದಂತೆ ಪ್ರಮುಖರು ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.
ಈ ವೇಳೆ ವಿಭಾಗೀಯ ನಿಯಂತ್ರಣಾಧಿಕಾರಿ ಜಿ. ಸೀನಯ್ಯ ಮಾತನಾಡಿ, ಬಹುದಿನಗಳಿಂದ ವಾಣಿಜ್ಯ ಪಟ್ಟಣ ಕಾರಟಗಿಯಿಂದ ರಾಜಧಾನಿ ಬೆಂಗಳೂರಿಗೆ ನಿತ್ಯ ಸ್ಲೀಪರ್ ಬಸ್ ಓಡಿಸುವಂತೆ ಬೇಡಿಕೆಯಿತ್ತು. ಸಾರ್ವಜನಿಕರ ಬೇಡಿಕೆಗೆ ಸ್ಪಂದಿಸಿ ನೂತನ ಸೇವೆ ಆರಂಭಿಸಲಾಗಿ ಪಟ್ಟಣದಿಂದ ಗಂಗಾವತಿ, ಕಂಪ್ಲಿ, ಹೊಸಪೇಟೆ ಮಾರ್ಗವಾಗಿ ಬೆಂಗಳೂರಿಗೆ ಸಂಚರಿಸಲಿದೆ.
ನಿತ್ಯ ಪಟ್ಟಣದಿಂದ ರಾತ್ರಿ 9ಕ್ಕೆ ಬಿಟ್ಟು ಮರುದಿನ ಬೆಳಗ್ಗೆ 6ಕ್ಕೆ ಬೆಂಗಳೂರು ತಲುಪಲಿದೆ. ಬೆಂಗಳೂರಿನ ಕೇಂದ್ರ ಬಸ್ ನಿಲ್ದಾಣದಿಂದ ನಿತ್ಯ ರಾತ್ರಿ 10.30ಕ್ಕೆ ಬಿಟ್ಟು ಮರುದಿನ ಬೆಳಗ್ಗೆ 7ಕ್ಕೆ ಪಟ್ಟಣಕ್ಕೆ ಬರಲಿದೆ ಎಂದು ತಿಳಿಸಿದರು.
ಪುರಸಭೆ ಉಪಾಧ್ಯಕ್ಷ ದೇವಮ್ಮ ಗಂಗಮ್ಮ, ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಜಿಲ್ಲಾ ಉಪಾಧ್ಯಕ್ಷ ನಾಗರಾಜ್ ಅರಳಿ, ಸದಸ್ಯ ಸೋಮನಾಥ ದೊಡ್ಡಮನೆ, ರಸ್ತೆ ಸಾರಿಗೆ ನಿಗಮದ ಡಿಟಿಒ ಪರಮೇಶ್ವರಪ್ಪ, ಡಿಪೋ ಮ್ಯಾನೇಜರ್ ರಾಜಶೇಖರ, ಡಿಎಂಇ ಬಸವರಾಜ ಬಟ್ಟೂರು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net