ಇತ್ತ ಮಾರಾಟ ಮಾಡಲಾಗದೆ, ಬರ ಪರಿಸ್ಥಿತಿಯಲ್ಲಿ ಜೊತೆಗಿಟ್ಟುಕೊಂಡು ಸಾಕಲಾಗದೆ ಇಬ್ಬಂದಿ ಸ್ಥಿತಿಗೆ ಜಾನುವಾರು ಮಾಲೀಕರು ಸಿಲುಕುವಂತಾಗಿದೆ. ಬೆಳಗಿನಿಂದ ಸಂಜೆವರೆಗೂ ಕಾದರೂ ಬೆಲೆ ಸಿಗದ ಕಾರಣ ಮತ್ತೆ ರಾಸುಗಳನ್ನು ತಮ್ಮೊಡನೆ ಕರೆದುಕೊಂಡು ಹೋದ ದೃಶ್ಯಗಳು ಕಂಡುಬಂದವು. ಕೊಪ್ಪಳ, ವಿಜಯನರಗ, ಬಳ್ಳಾರಿ, ಗದಗ ಸೇರಿ ವಿವಿಧ ಜಿಲ್ಲೆಗಳಿಂದ ರೈತರು ಮಾರುಕಟ್ಟೆಗೆ ಆಗಮಿಸಿದ್ದರು.