ನಿಜಾಮರ ಕಾಲದ ಬಾವಿ ರಕ್ಷಣೆಗೆ ಒತ್ತಾಯ

ವಡ್ಡರಹಟ್ಟಿಯಲ್ಲಿ ನಿಜಾಮರ ಕಾಲದಲ್ಲಿ ನಿರ್ಮಿಸಿದ ಅಪರೂಪದ ಬಾವಿ ಹಾಳಾಗಿರುವುದು.
ವಡ್ಡರಹಟ್ಟಿಯಲ್ಲಿ ನಿಜಾಮರ ಕಾಲದಲ್ಲಿ ನಿರ್ಮಿಸಿದ ಅಪರೂಪದ ಬಾವಿ ಹಾಳಾಗಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಅಪರೂಪದ ಬಾವಿ ಪರಿಶೀಲನೆ
  • ಗಂಗಾವತಿ ವಡ್ಡರಹಟ್ಟಿ ಸಂಶೋಧಕರ ತಂಡ ಪರಿಶೀಲನೆ
ಗಂಗಾವತಿ: ವಡ್ಡರಹಟ್ಟಿ ಗ್ರಾಮದಲ್ಲಿ ನಿಜಾಮರ ಕಾಲದ ಅಪರೂಪದ ಬಾವಿಯನ್ನು ಸಂಶೋಧಕರ ತಂಡ, ಯುವಕರು ಪರಿಶೀಲಿಸಿದ್ದು, ರಕ್ಷಣೆಗೆ ಒತ್ತಾಯಿಸಿದ್ದಾರೆ.
ಗ್ರಾಮದ ರಾಜ್ಯಹೆದ್ದಾರಿ ಪಕ್ಕದಲ್ಲಿ ಬಾವಿಯಿದ್ದು, ಖಾಸಗಿ ವ್ಯಕ್ತಿಯೊಬ್ಬರ ಒಡೆತನದಲ್ಲಿದೆ. ಸಂಶೋಧಕರಾದ ಡಾ.ಶರಣಬಸಪ್ಪ ಕೋಲ್ಕಾರ್, ಡಾ.ಎನ್.ರವಿ ಚವ್ಹಾಣ ನೇತೃತ್ವದ ತಂಡ ಪರಿಶೀಲಿಸಿತು. ಬಾವಿ ಶಿಥಿಲಾವಸ್ಥೆಗೆ ತಲುಪಿದ್ದು, ಮುಚ್ಚಿಹೋಗಿದೆ. ನಿಜಾಮರ ಕಾಲದಲ್ಲಿ ಸಂಚಾರಿಗಳ ಅನುಕೂಲಕ್ಕಾಗಿ ರಸ್ತೆ ಬದಿ ಲಿಂಗಸುಗೂರಿನ ಸರ್ಕಾರಿ ಅಧಿಕಾರಿ, ಸಾವಿರ ಬಾವಿಗಳ ಸರದಾರ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ಲಿಯೋನಾರ್ಡ್ ಎಂಬಾತ ಬಾವಿ ನಿರ್ಮಿಸಿರುವ ಬಗ್ಗೆ ದಾಖಲೆಗಳಿವೆ.
ಅಷ್ಟಕೋನಾಕಾರದ ಬಾವಿ ಮೇಲೆ ಎಚ್‌ಇಎಚ್:ನಿಜಾಮ, ಡಬ್ಲುೃಎಸ್‌ಡಿ ಜಿಎನ್ 35 ಎಂಬ ಬರಹವಿದೆ. ಜಿಎನ್ ಎಂದರೆ ಗಂಗಾವತಿ ಬಾವಿ ಸಂಖ್ಯೆ 35ಅನ್ನು ಸೂಚಿಸುತ್ತದೆ. ಪ್ರಸ್ತುತ ಬಾವಿಯ ನೆಲಮಟ್ಟದ ಮೇಲಿನ ಭಾಗವನ್ನು ಅದರಲ್ಲಿದ್ದ ಕಬ್ಬಿಣದ ರಾಟೆಯನ್ನು ಕಿತ್ತುಹಾಕಲಾಗಿದೆ. ಬಾವಿಯ ಬಳಿಯಲ್ಲಿದ್ದ ನಾಗಶಿಲ್ಪ ಹೊತ್ತೊಯ್ಯಲಾಗಿದೆ. ಬಾವಿಯನ್ನು ನಾಶ ಮಾಡುತ್ತಿದ್ದನ್ನು ಕಂಡ ಸ್ಥಳೀಯರು ಆಕ್ಷೇಪಿಸಿ ನಿಲ್ಲಿಸಿದ್ದಾರೆ ಎಂದು ಸಂಶೋಧಕರ ತಂಡ ತಿಳಿಸಿದೆ. ಮುಂದಿನ ಪೀಳಿಗೆಗೆ ಇತಿಹಾಸ ತಿಳಿಸುವ ಉದ್ದೇಶದಿಂದ ಬಾವಿಯನ್ನು ರಕ್ಷಿಸುವಂತೆ ಸ್ಥಳೀಯರಾದ ಮಹೆಬೂಬ್ ದಮ್ಮೂರು, ದಾವಲ್‌ಸಾಬ್, ಸೋಮನಾಥ ಕುಂಬಾರ, ನೀಲಪ್ಪ ದೋಟಿಹಾಳ್ ಇತರರು ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net