ಕುಷ್ಟಗಿ ತಾಲೂಕಿನ ರ್ನಿಲಕೊಪ್ಪ ಗ್ರಾಮದ ಅಶೋಕ (25) ಮೃತ. 15 ದಿನದ ಹಿಂದಷ್ಟೇ ಮದುವೆಯಾಗಿದ್ದ ಅಶೋಕ&ಅಂಜಲಿ ಜೋಡಿ, ಮದುವೆಯಾದ ಹೊಸತರಲ್ಲಿ ರಥೋತ್ಸವ ಕಣ್ತುಂಬಿಕೊಳ್ಳಬೇಕೆಂಬ ಹಂಬಲದಿಂದ ಹುಲಿಗೆಮ್ಮ ದೇವಿ ರಥೋತ್ಸವ ನೋಡಲು ಆಗಮಿಸಿದ್ದರು. ದೇವಿ ದರ್ಶನಕ್ಕು ಮುನ್ನ ಪುಣ್ಯ ಸ್ನಾನಕ್ಕೆಂದು ತುಂಗಭದ್ರಾ ನದಿಗೆ ತೆರಳಿದ್ದಾರೆ. ನೀರಿನ ಆಳಕ್ಕೆ ಹೋದ ಅಶೋಕ ಮುಳುಗಿದ್ದಾನೆ. ಸ್ಥಳದಲ್ಲಿದ್ದವರು ನೆರವಿಗೆ ಧಾವಿಸಿ ನೀರಿನಿಂದ ಹೊರ ತೆಗೆದಿದ್ದಾರೆ. ತಕ್ಷಣ ಕೊಪ್ಪಳ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಆಸ್ಪತ್ರೆ ಸೇರುವಷ್ಟರಲ್ಲಿ ಪ್ರಾಣ ಹಾರಿ ಹೋಗಿದೆ. ಮುನಿರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.