ಕೊಪ್ಪಳದಲ್ಲಿ ಹೊಸ ವರ್ಷದ ಸಡಗರ

ಕೊಪ್ಪಳದಲ್ಲಿ ಬುಧವಾರ ಯುಗಾದಿ ಹಬ್ಬಕ್ಕೆ ಹೂಗಳ ಖರೀದಿಗೆ ಮುಗಿಬಿದ್ದ ಜನ.
ಕೊಪ್ಪಳದಲ್ಲಿ ಬುಧವಾರ ಯುಗಾದಿ ಹಬ್ಬಕ್ಕೆ ಹೂಗಳ ಖರೀದಿಗೆ ಮುಗಿಬಿದ್ದ ಜನ.
Published on

ಪ್ರಮುಖ ಮುಖ್ಯಾಂಶಗಳು

  • ನಗರದಲ್ಲಿ ಯುಗಾದಿ ಹಬ್ಬದ ಸಿದ್ಧತೆ ಅಬ್ಬರ
ಕೊಪ್ಪಳ: ಹೊಸ ವರ್ಷ ದ ಮೊದಲ ಹಬ್ಬವಾದ ಯುಗಾದಿಯನ್ನು ಬರಮಾಡಿಕೊಳ್ಳಲು ನಗರದಲ್ಲಿ ಸಿದ್ಧತೆಗಳು ಅಬ್ಬರದಿಂದ ಸಾಗಿವೆ. ಗುರುವಾರ ಹಬ್ಬ ಇರುವುದರಿಂದ ಬುಧವಾರ ಸಂಜೆಯೇ ಮಾರುಕಟ್ಟೆಗಳಲ್ಲಿ ಜನಜಂಗುಳಿ ಕಂಡುಬಂದಿತು.
ಹಬ್ಬದ ಪೂಜೆಗಾಗಿ ಅಗತ್ಯವಿರುವ ಹಣ್ಣು, ಹೂವು ಹಾಗೂ ಪೂಜಾ ಸಾಮಗ್ರಿಗಳನ್ನು ಖರೀದಿಸಲು ಮಾರುಕಟ್ಟೆಯಲ್ಲಿ ಜನರು ಮುಗಿಬಿದ್ದರು. ಮಾವಿನ ಎಲೆಯ ತೋರಣಗಳಿಂದ ಮನೆಗಳನ್ನು ಅಲಂಕರಿಸಲು ಹಸಿರು ಮಾವಿನ ಸೊಪ್ಪಿನ ಮಾರಾಟವೂ ಜೋರಾಗಿತ್ತು.
ಜೀವನದ ಏರಿಳಿತಗಳನ್ನು ಸಮಾನವಾಗಿ ಸ್ವೀಕರಿಸುವ ಸಂಕೇತವಾಗಿ ಬೇವು-ಬೆಲ್ಲ ಸೇವಿಸುವುದು ಈ ಹಬ್ಬದ ವಿಶೇಫಿ. ಕಳೆದ ವರ್ಫಿದ ಕಹಿ ನೆನಪುಗಳನ್ನು ಮರೆತು, ಹೊಸ ವರ್ಫಿದಲ್ಲಿ ಸಿಹಿಯಾದ ಸಂತಸದ ಕ್ಷಣಗಳನ್ನು ಆಶಿಸುತ್ತಾ ಈ ಹಬ್ಬವನ್ನು ನಾಡಿನಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ.
ಮನೆಗಳಲ್ಲಿ ಹೋಳಿಗೆ ಸೇರಿದಂತೆ ವಿವಿಧ ಸಿಹಿ ತಿಂಡಿಗಳ ಸಿದ್ಧತೆ ನಡೆದಿದ್ದರೆ, ಇತ್ತ ದೇವಸ್ಥಾನಗಳಲ್ಲೂ ಸಿದ್ಧತೆಗಳು ಪೂರ್ಣಗೊಂಡಿವೆ. ವಿಶೇಫವಾಗಿ ಅಂಜನೇಯ ಸ್ವಾಮಿ ದೇವಸ್ಥಾನಗಳಲ್ಲಿ ವಿಶೇಫಿ ಪೂಜೆ ಹಾಗೂ ಅಲಂಕಾರಗಳಿಗೆ ವ್ಯವಸ್ಥೆ ಮಾಡಲಾಗಿದೆ. ಒಟ್ಟಾರೆಯಾಗಿ ಜಿಲ್ಲೆಯಾದ್ಯಂತ ಈಗಿನಿಂದಲೇ ಹಬ್ಬದ ವಾತಾವರಣ ಮಡುಗಟ್ಟಿದ್ದು, ಹೊಸ ವರ್ಫಿವನ್ನು ಸ್ವಾಗತಿಸಲು ಜಿಲ್ಲೆ ಸಜ್ಜಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net