

ಪ್ರಮುಖ ಮುಖ್ಯಾಂಶಗಳು
ಗಂಗಾವತಿ: ನಗರದಪ್ರತಿಷ್ಠಿತ ಗಂಗಾವತಿ ತಾಲೂಕುಒಕ್ಕಲುತನ ಹುಟ್ಟುವಳಿ ಮಾರಾಟಸಹಕಾರ ಸಂಘ (ಟಿಎಪಿಎಸಿಎಂಎಸ್)ದಲ್ಲಿನಬಹುಕೋಟಿ ಹಗರಣಕ್ಕೆ ಸಂಬಂಧಿಸಿದ್ದಂತೆಹೊಣೆಗಾರಿಕೆದಾರರಿಂದ ಅಭಿಪ್ರಾಯಸಂಗ್ರಹ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.
ಸಂಘದಲ್ಲಿನೂರಾರು ಕೋಟಿ ರೂ.ಮೌಲ್ಯದಸ್ಥಿರಾಸ್ತಿಯಿದ್ದು,60ವರ್ಷಗಳಇತಿಹಾಸವಿದೆ.ಸಂಘದಲ್ಲಿನಹಣಕಾಸು ಮತ್ತು ಕಾರ್ಯನಿರ್ವಹಣೆಅಧಿಕಾರ ದುರ್ಬಳಕೆ ಹಿನ್ನೆಲೆಯಲ್ಲಿ2024ರಲ್ಲಿದೂರು ದಾಖಲಾಗಿದ್ದು,ವಿಚಾರಣಾಧಿಕಾರಿನೇಮಿಸಲಾಗಿತ್ತು.2006ರಿಂದ2024ರವರೆಗಿನಎಲ್ಲ ಕಡತ ಮತ್ತು ದಾಖಲೆಗಳನ್ನುಪರಿಶೀಲಿಸಿದ್ದು,10 ಅಂಶಗಳಲ್ಲಿಲೋಪ ಕಂಡು ಬಂದಿತ್ತು.ವರ್ಷದನಂತರ ವಿಚಾರಣೆಗಾಗಿ ಆಡಳಿತ ಮಂಡಳಿಸದಸ್ಯರು ಮತ್ತು ಸಿಬ್ಬಂದಿ ಸೇರಿ32ಜನರನ್ನುಹೊಣೆಗಾರರನ್ನಾಗಿ ಮಾಡಿದ್ದು,ಅ.24ರಂದುವಿಚಾರಣೆಗೆ ಸಮನ್ಸ್ ಜಾರಿಗೊಳಿಸಲಾಗಿತ್ತು.ಡಿ.9ರಂದುಹೊಣೆಗಾರರು ಖುದ್ದಾಗಿ ಹಾಜರಾಗಿಲಿಖಿತ ರೂಪದಲ್ಲಿ ಹೇಳಿಕೆ ನೀಡುವಂತೆನೋಟಿಸ್ ಜಾರಿ ಮಾಡಲಾಗಿತ್ತು.
ತನಿಖಾಧಿಕಾರಿಯನ್ನಾಗಿಸಹಕಾರ ಸಂಘದ ಉಪನಿಬಂಧಕ ಮಲ್ಲಯ್ಯಅವರನ್ನು ನಿಯೋಜಿಸಿದ್ದು,ಸಂಘದಕಚೇರಿಯಲ್ಲಿ ಹೊಣೆಗಾರರಿಂದಮಾಹಿತಿ ಪಡೆದುಕೊಂಡರು.ಕೆಲವರುಖುದ್ದಾಗಿ ಬಂದು ಲಿಖಿತ ಮಾಹಿತಿನೀಡಿದರೆ,ಇನ್ನೂಕೆಲವರು ವಕೀಲರ ಮೂಲಕ ಮಾಹಿತಿಒದಗಿಸಿದರು.ಈಬಗ್ಗೆ ಮಲ್ಲಯ್ಯ ಮಾತನಾಡಿ,ಹೊಣೆಗಾರರಿಗೆಅಂತಿಮ ನೋಟಿಸ್ ನೀಡಲಾಗಿತ್ತು.ನೀಡಿದಲಿಖಿತ ವರದಿಯನ್ನು ಮೇಲಧಿಕಾರಿಗಳಗಮನಕ್ಕೆ ತರಲಾಗುವುದು ಎಂದರು.
ರಸಗೊಬ್ಬರ,ಕ್ರಿಮಿನಾಶಕಮಾರಾಟದ ದಾಸ್ತಾನಿನಲ್ಲಿ ವ್ಯತ್ಯಾಸ,ಅವಧಿಮೀರಿದ ರಸಗೊಬ್ಬರ ಮತ್ತು ಕ್ರಿಮಿನಾಶಕಗಳವಿಲೇವಾರಿ,13 ಮಳಿಗೆಮತ್ತು ಖಾಲಿ ಜಾಗದ ಬಾಡಿಗೆವಸೂಲಿಯಲ್ಲಿ ಲೋಪ,ಸಂಘದಆವರಣದ ಅಕ್ಕಿ ಗಿರಣಿ ಬಾಡಿಗೆವಸೂಲಿ ಹಣ ಸಂಘಕ್ಕೆ ಪಾವತಿಯಾಗಿಲ್ಲ.ಸಂಘಕ್ಕೆಸೇರಬೇಕಾದ ಜೆಸ್ಕಾಂ,ಹಿಂದುಸ್ತಾನ್ಸ್ಟೀಲ್ ಕಂಪನಿ,ಎ್ಸಿಐ,ಸಿಬ್ಬಂದಿಗ್ರಾಚ್ಯುಟಿ,ಭವಿಷ್ಯನಿಧಿ,ವತ್ತಿಮಾಲು ಸಾಲ,ಖಾಲಿಚೀಲ,ಲಾರಿಸಾಗಣೆ ವೆಚ್ಚ ಸೇರಿ 58ಖಾತೆಗಳಿಂದಬರಬೇಕಾದ ಹಣ ಸಂಘಕ್ಕೆ ಸೇರಿಲ್ಲ,ದಾಖಲೆಗಳಿಲ್ಲ.ಲೆಕ್ಕಪತ್ರನಿರ್ವಹಣೆಯಲ್ಲೂ ಲೋಪವಾಗಿದ್ದು,ಒಂದಕ್ಕೊಂದುತಾಳೆಯಾಗುತ್ತಿಲ್ಲ.ವಿಚಾರಣಾಧಿಕಾರಿಗಳಿಗೆಸಕಾಲಕ್ಕೆ ಸಿಬ್ಬಂದಿ ದಾಖಲೆನೀಡದಿದ್ದರಿಂದ ಕರ್ತವ್ಯ ಲೋಪಕಂಡು ಬಂದಿದೆ.
ಸಂಘಕ್ಕೆಇತ್ತೀಚಿಗೆ ನಿರ್ದೇಶಕರಆಯ್ಕೆಯಾಗಿದ್ದು,ಅಧ್ಯಕ್ಷಮತ್ತು ಉಪಾಧ್ಯಕ್ಷರ ಚುನಾವಣೆವಿವಿಧ ಕಾರಣಗಳಿಂದ ಎರಡು ಬಾರಿರದ್ದಾಗಿತ್ತು.ಆಯ್ಕೆಗಾಗಿಮೂರನೇ ಬಾರಿ ಚುನಾವಣಾಧಿಕಾರಿನಿರ್ದೇಶಕರಿಗೆ ನೋಟಿಸ್ ನೀಡಿದ್ದು,ಡಿ.15ರಂದುಸಂಘದ ಕಚೇರಿಯಲ್ಲಿ ಅಧ್ಯಕ್ಷ,ಉಪಾಧ್ಯಕ್ಷರಆಯ್ಕೆ ಚುನಾವಣೆ ನಡೆಯಲಿದೆ.ಬೆಳಗ್ಗೆ10ಗಂಟೆಗೆಆಡಳಿತ ಮಂಡಳಿ ಸಭೆ,ನಾಮಪತ್ರಪರಿಶೀಲನೆ,ಕ್ರಮಬದ್ಧನಾಮಪತ್ರಗಳ ಪಟ್ಟಿ ಪ್ರಕಟಣೆ,ನಾಮಪತ್ರವಾಪಸ್ ಪಡೆಯಲು ಅವಕಾಶ,ಮಧ್ಯಾಹ್ನ1ರಿಂದ2ಗಂಟೆವರೆಗೆಮತದಾನ ನಡೆಯಲಿದೆ.ಬಿಜೆಪಿಬೆಂಬಲಿಗರೇ ಹೆಚ್ಚಿದ್ದರೂ,ಇಬ್ಬರುಅಕಾಂಕ್ಷಿಗಳು ಬಿಜೆಪಿಬೆಂಬಲಿತರಾಗಿದ್ದರಿಂದ ಆಯ್ಕೆಗೆಗೊಂದಲ ಸೃಷ್ಟಿಯಾಗಿದೆ.
10 ಅಂಶಗಳ ಲೋಪದ ಹೊಣೆಗಾರರಿಂದ ಲಿಖಿತ ರೂಪದಲ್ಲಿ ಮಾಹಿತಿ ಪಡೆಯುವಂತೆ ಇಲಾಖೆ ಸೂಚಿಸಿದ್ದರಿಂದ ಸಂಘದ ಕಚೇರಿಯಲ್ಲಿ ಹೊಣೆಗಾರರಿಂದ ಮಾಹಿತಿ ಪಡೆದಿದ್ದೇನೆ. ಮಾಹಿತಿಯನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು.