ರಾಜಕಾರಣಿಗಳಿಂದ ಲಿಂಗಾಯತರ ನಿರ್ಲಕ್ಷೃ

ಗಂಗಾವತಿಯಲ್ಲಿ ರಾಷ್ಟ್ರೀಯ ಬಸವ ದಳ ಹಮ್ಮಿಕೊಂಡಿದ್ದ .ಗು.ಹಳಕಟ್ಟಿ ಮತ್ತು ಲಿಂಗಾನಂದ ಶರಣರ ಸ್ಮರಣೋತ್ಸವದಲ್ಲಿ ಶರಣ ಚಿಂತಕಿ ಡಾ.ಗಂಗಮ್ಮ ಸತ್ಯಂಪೇಟೆ ಮಾತನಾಡಿದರು. ಉಪನ್ಯಾಸಕ ಬಸವ ಪ್ರಸಾದ ಕಟಗಿಹಳ್ಳಿ, ಪ್ರಮುಖರಾದ ಸಿದ್ದರಾಮಪ್ಪ ಪಾಟೀಲ, ಸರಿಗಮ ಹನುಮಂತಪ್ಪ, ಬಿ.ಲಲಿತಮ್ಮ ಬನ್ನಿಕೊಪ್ಪ ಇತರರಿದ್ದರು.
ಗಂಗಾವತಿಯಲ್ಲಿ ರಾಷ್ಟ್ರೀಯ ಬಸವ ದಳ ಹಮ್ಮಿಕೊಂಡಿದ್ದ .ಗು.ಹಳಕಟ್ಟಿ ಮತ್ತು ಲಿಂಗಾನಂದ ಶರಣರ ಸ್ಮರಣೋತ್ಸವದಲ್ಲಿ ಶರಣ ಚಿಂತಕಿ ಡಾ.ಗಂಗಮ್ಮ ಸತ್ಯಂಪೇಟೆ ಮಾತನಾಡಿದರು. ಉಪನ್ಯಾಸಕ ಬಸವ ಪ್ರಸಾದ ಕಟಗಿಹಳ್ಳಿ, ಪ್ರಮುಖರಾದ ಸಿದ್ದರಾಮಪ್ಪ ಪಾಟೀಲ, ಸರಿಗಮ ಹನುಮಂತಪ್ಪ, ಬಿ.ಲಲಿತಮ್ಮ ಬನ್ನಿಕೊಪ್ಪ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಾಹಿತಿ ಡಾ.ಗಂಗಮ್ಮ ಸತ್ಯಂಪೇಟೆ ಟೀಕೆ
ಗಂಗಾವತಿ: ಚುನಾವಣೆ ಸಂದರ್ಭದಲ್ಲಿ ಮಾತ್ರ ಲಿಂಗಾಯತರನ್ನು ನೆನಪಿಸಿಕೊಳ್ಳುವ ರಾಜಕಾರಣಿಗಳು ನಂತರ ನಿರ್ಲಕ್ಷಿಸುತ್ತಿದ್ದಾರೆ ಎಂದು ಸಾಹಿತಿ ಹಾಗೂ ಶರಣ ಚಿಂತಕಿ ಡಾ.ಗಂಗಮ್ಮ ಸತ್ಯಂಪೇಟೆ ಹೇಳಿದರು.
ಸರೋಜಾ ನಗರದ ಬಸವ ಮಂಟಪದಲ್ಲಿ ರಾಷ್ಟ್ರೀಯ ಬಸವ ದಳದಿಂದ ಭಾನುವಾರ ಹಮ್ಮಿಕೊಂಡಿದ್ದ .ಗು.ಹಳಕಟ್ಟಿ ಮತ್ತು ಲಿಂಗಾನಂದ ಶರಣರ ಸ್ಮರಣೋತ್ಸವದಲ್ಲಿ ಮಾತನಾಡಿದರು.
ಸಚಿವ ಸಂಪುಟ ವಿಸ್ತರಣೆ ವಿಚಾರ ಬಂದಾಗ ಲಿಂಗಾಯತರನ್ನು ಬಹುಸಂಖ್ಯಾತರೆಂದು ಪರಿಗಣಿಸಲಾಗುತ್ತಿದ್ದು, ನಂತರ ದಿನಗಳಲ್ಲಿ ಅಲ್ಪಸಂಖ್ಯಾತರಂತೆ ಬಿಂಬಲಿಸಲಾಗುತ್ತಿದೆ. ಪುರಾಣಗಳಲ್ಲಿ ವೈಭವೀಕರಣವಿದ್ದು, ಉಪನ್ಯಾಸಗಳಲ್ಲಿ ವೈಚಾರಿಕತೆಯಿದೆ. ಪ್ರವಚನದಲ್ಲಿ ಹೇಗೆ ಬದುಕಬೇಕು ಎಂಬ ಸಂದೇಶವಿದೆ. .ಗು.ಹಳಕಟ್ಟಿ ವಚನ ಪಿತಾಮಹಾ ಮತ್ತು ಲಿಂಗಾನಂದ ಸ್ವಾಮೀಜಿ ಪ್ರವಚನ ಪಿತಾಮಹಾ ಎಂದರು.
ರಾಯಚೂರಲ್ಲಿ ನಡೆಯುವ 3ನೇ ಬಸವ ಉತ್ಸವದ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಲಾಯಿತು. ಉಪನ್ಯಾಸಕ ಬಸವ ಪ್ರಸಾದ ಕಟಗಿಹಳ್ಳಿ, ಪ್ರಮುಖರಾದ ರಾಯಚೂರಿನ ಸಿದ್ದರಾಮಪ್ಪ ಪಾಟೀಲ ಸರಿಗಮ ಹನುಮಂತಪ್ಪ , ಬಿ.ಲಲಿತಮ್ಮ ಬನ್ನಿಕೊಪ್ಪ, ಕಂಪ್ಲಿಯ ಹೇಮಯ್ಯಸ್ವಾಮಿ ರುದ್ರಯ್ಯನವರ್, ಅಶೋಕ ಕುಕನೂರು, ಸೋ.ದಾ.ವಿರೂಪಾಕ್ಷಗೌಡ, ಕೆ ವೀರೇಶಪ್ಪ, ಪಂಪಾಪತಿ ಚವಡಿ, ಅಮರೇಗೌಡ ಜಾನೂರು, ಕೆ.ಬಸಮ್ಮ, ಸಂಗಪ್ಪ ಗಾಜಿ, ರಾಜಾಸಾಬ್, ನೂರ್ ಮಹ್ಮದ್ ಇಟಗಿ, ದಿಲೀಪ್ ಕುಮಾರ ವಂದಾಲ, ಬಿ.ಕೆ.ಚನ್ನಬಸವ, ವೀರೇಶಪ್ಪ ಕುಂಬಾರ ಚನ್ನಬಸಮ್ಮ ಕಂಪ್ಲಿ, ವೀರೇಶರಡ್ಡಿ, ಬಸವಜ್ಯೋತಿ, ವಿನಯಕುಮಾರ ಅಂಗಡಿ, ಸುಳೇಕಲ್ ಬಸವರಾಜ ಮಾಲಿಪಾಟೀಲ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net