ನವಗ್ರಹ ಪ್ರಾಣ ಪ್ರತಿಷ್ಠಾಪನೆ

ಸಂಗಾಪುರದ ಶ್ರೀ ಶಿವಲಿಂಗೇಶ್ವರ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ನವಗ್ರಹ ಪ್ರಾಣ ಪ್ರತಿಷ್ಠಾಪನೆ ಮತ್ತು ವಿಶೇಷ ಹೋಮ ನಿಮಿತ್ತ ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯರು ವಿಶೇಷ ಪೂಜೆ ನೆರವೇರಿಸಿದರು. ಪ್ರಮುಖರಾದ ವಿರೂಪಾಕ್ಷಯ್ಯ ಸ್ವಾಮಿ, ವೀರಭದ್ರಯ್ಯ ಸ್ವಾಮಿ, ಸಂಜೀವಕುಮಾರ, ದಂಡಿನ್ ಮಠದ ಘನಮಠಸ್ವಾಮಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಸಂಗಾಪುರ ವಿಶೇಷ ಹೋಮ-ಪೂಜೆ
  • ಗಂಗಾವತಿ ಸಂಗಾಪುರ ಶಿವಲಿಂಗೇಶ್ವರ ದೇವಾಲಯ
ಗಂಗಾವತಿ: ಸಂಗಾಪುರದ ಶ್ರೀ ಶಿವಲಿಂಗೇಶ್ವರ ದೇವಾಲಯದಲ್ಲಿ ನವಗ್ರಹ ಪ್ರಾಣ ಪ್ರತಿಷ್ಠಾಪನೆ ಮತ್ತು ವಿಶೇಷ ಹೋಮ ನೆರವೇರಿತು. ದೇವಾಲಯದಲ್ಲಿ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮ, ನಿರಂತರ ಭಜನೆ, ಹೋಮ, ಪೂರ್ಣಾಹುತಿ ಮತ್ತು ಪ್ರಸಾದ ವಿತರಣೆ ಹಮ್ಮಿಕೊಳ್ಳಲಾಗಿತ್ತು.
ಸಾನ್ನಿಧ್ಯವಹಿಸಿದ್ದ ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯರು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು.
ಕಂಪ್ಲಿಯ ಸಾಂಗತ್ರಯ ಪಾಠಶಾಲೆಯ ಶಶಿಧರ ಸ್ವಾಮಿಗಳ ಪೌರೋಹಿತ್ಯದಲ್ಲಿ ಹೋಮ ಹಮ್ಮಿಕೊಂಡಿದ್ದು, ಭಕ್ತರ ಸಮ್ಮುಖದಲ್ಲಿ ಪೂರ್ಣಾಹುತಿ ನೆರವೇರಿಸಲಾಯಿತು. ದೇವಾಲಯ ಸಮಿತಿ ಗೌರವಾಧ್ಯಕ್ಷ ಎಚ್.ಎಂ.ಸಿದ್ರಾಮಯ್ಯಸ್ವಾಮಿ, ಪದಾಧಿಕಾರಿಗಳಾದ ವಿರೂಪಾಕ್ಷಯ್ಯ ಸ್ವಾಮಿ,ವೀರಭದ್ರಯ್ಯ ಸ್ವಾಮಿ, ಸಂಜೀವಕುಮಾರ, ದಂಡಿನ್ ಮಠದ ಘನಮಠ ಸ್ವಾಮಿ, ಪ್ರಭು ಸ್ವಾಮೀಜಿ, ಯಶವಂತ ಸ್ವಾಮೀ, ಪಂಪಾಪತಿ,ದೇವರಾಜ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net