ಸಂಶೋಧನೆಯಿಂದ ಹೊಸ ಉದ್ಯಮಗಳು ಸೃಷ್ಟಿ

ಕನಕಗಿರಿಯ ಶ್ರೀ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಂಶೋಧನಾ ವಿಧಾನದಲ್ಲಿ ಹೊಸ ಪ್ರವೃತ್ತಿಗಳು ವಿಷಯದ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಭೂ ದಾನಿ ಬಸವರಾಜ ಗುಗ್ಗಳಶೆಟ್ರ ಉದ್ಘಾಟಿಸಿದರು. ಕೊಪ್ಪಳ ವಿವಿ ಸಿಂಡಿಕೇಟ್ ಸದಸ್ಯ ಡಾ.ಕೆ.ಸಿ.ಕುಲಕರ್ಣಿ, ಸಾಂಸ್ಕೃತಿಕ ಘಟಕದ ಸಂಯೋಜಕಿ ಎನ್.ಕೆ.ಲಲಿತಾ, ಹಿರಿಯ ಉಪನ್ಯಾಸಕ ವಿ.ಅಮರೇಶ್ ಇತರರಿದ್ದರು.
ಕನಕಗಿರಿಯ ಶ್ರೀ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಂಶೋಧನಾ ವಿಧಾನದಲ್ಲಿ ಹೊಸ ಪ್ರವೃತ್ತಿಗಳು ವಿಷಯದ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಭೂ ದಾನಿ ಬಸವರಾಜ ಗುಗ್ಗಳಶೆಟ್ರ ಉದ್ಘಾಟಿಸಿದರು. ಕೊಪ್ಪಳ ವಿವಿ ಸಿಂಡಿಕೇಟ್ ಸದಸ್ಯ ಡಾ.ಕೆ.ಸಿ.ಕುಲಕರ್ಣಿ, ಸಾಂಸ್ಕೃತಿಕ ಘಟಕದ ಸಂಯೋಜಕಿ ಎನ್.ಕೆ.ಲಲಿತಾ, ಹಿರಿಯ ಉಪನ್ಯಾಸಕ ವಿ.ಅಮರೇಶ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕಿ ಪ್ರೊ.ಜಿ.ಶೋಭಾ ಹೇಳಿಕೆ
  • ರಾಷ್ಟ್ರೀಯ ವಿಚಾರ ಸಂಕಿರಣ
ಕನಕಗಿರಿ: ಸಂಶೋಧನೆ ಎನ್ನುವುದು ಕತ್ತಲೆಯಿಂದ ಬೆಳಕಿನೆಡೆಗಿನ ಪ್ರಯಾಣವಾಗಿದ್ದು, ಯಾವುದೇ ದೇಶ ಅಥವಾ ಸಮಾಜದ ಪ್ರಗತಿ ಅಲ್ಲಿ ನಡೆಯುವ ಸಂಶೋಧನೆಗಳ ಗುಣಮಟ್ಟದ ಮೇಲೆ ಆಧಾರವಾಗಿರುತ್ತದೆ ಎಂದು ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕಿ ಪ್ರೊ.ಜಿ. ಶೋಭಾ ಹೇಳಿದರು.
ಪಟ್ಟಣದ ಶ್ರೀ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ ಹಾಗೂ ಸಂಶೋಧನಾ ಘಟಕದಿಂದ ಗುರುವಾರ ಹಮ್ಮಿಕೊಂಡಿದ್ದ ಸಂಶೋಧನಾ ವಿಧಾನದಲ್ಲಿ ಹೊಸ ಪ್ರವೃತ್ತಿಗಳು ವಿಷಯ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಹೂಡಿಕೆ ಮಾಡುವ ದೇಶಗಳು ಆರ್ಥಿಕವಾಗಿ ಹೆಚ್ಚು ಬಲಿಷ್ಟ ವಾಗಿರುತ್ತವೆ. ಸಂಶೋಧನೆಯಿಂದ ಹೊಸ ಉದ್ಯಮಗಳು ಸೃಷ್ಟಿಯಾಗುತ್ತವೆ. ಉದ್ಯೋಗಾವಕಾಶ, ಉತ್ಪಾದನಾ ಸಾಮರ್ಥ್ಯ ವೃದ್ಧಿಯಾಗುತ್ತದೆ. ಪದವಿ ಹಂತದಲ್ಲೇ ವಿದ್ಯಾರ್ಥಿಗಳು ಸಂಶೋಧನೆ ಬಗ್ಗೆ ಆಸಕ್ತಿ ಬೆಳೆಸಿಕೊಂಡರೆ ಸಂಪನ್ಮೂಲ ವ್ಯಕ್ತಿ ಹಾಗೂ ಮೌಲ್ಯಯುತ ಆಸ್ತಿಯನ್ನಾಗಿ ರೂಪಿಸಬಲ್ಲದು ಎಂದರು.
ಕೊಪ್ಪಳ ವಿವಿ ಸಿಂಡಿಕೇಟ್ ಸದಸ್ಯ ಡಾ.ಕೆ.ಸಿ.ಕುಲಕರ್ಣಿ ಮಾತನಾಡಿ, ಸಂಶೋಧನೆ ನಮ್ಮ ಜ್ಞಾನವನ್ನು ಹೆಚ್ಚಿಸಲು ಮತ್ತು ಹೊಸ ವಿಷಯ ಕಂಡುಹಿಡಿಯುವ ವ್ಯವಸ್ಥಿತ ಪ್ರಯತ್ನವಾಗಿದ್ದು, ಮಾನವನ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮುಂದೆ ಎದುರಾಗುವ ಆಹಾರ, ಜನಸಂಖ್ಯೆ ಸ್ಫೋಟ, ಸಾಂಕ್ರಾಮಿಕ ರೋಗಗಳನ್ನು ಎದುರಿಸಲು ಸಂಶೋಧನೆಗಳು ಸಹಕಾರಿಯಾಗಲಿವೆ ಎಂದರು.
ಪ್ರಾಚಾರ್ಯ ಡಾ.ಬಜರಂಗಬಲಿ, ಐಕ್ಯೂಎಸಿ ಘಟಕದ ಸಂಯೋಜಕ ಎ.ರಕ್ಷಿತ್, ಕಾಲೇಜಿನ ಭೂದಾನಿ ಬಸವರಾಜ್ ಗುಗ್ಗಳಶೆಟ್ರ, ನೆಲ್ಲೂರಿನ (ಆಂದ್ರಪ್ರದೇಶ) ಎನ್‌ಸಿಆರ್‌ಟಿ ಸ್ಥಾನಿಕ ಸಂಸ್ಥೆಯ ಸಹ ಪ್ರಾಧ್ಯಾಪಕ ಪ್ರಕಾಶ್ ಕೆ.ಬಡಿಗೇರ್, ಸಹಾಯಕ ಪ್ರಾಧ್ಯಾಪಕಿ ನಫೀಸ್ ಬಾನು, ಎನ್ನೆಸ್ಸ್‌ಸ್ಸ್ ಸಂಯೋಜಕ ಡಾ.ವೀರೇಶ ಕೆಂಗಲ್, ಸಾಂಸ್ಕೃತಿಕ ಘಟಕದ ಸಂಯೋಜಕಿ ಎನ್.ಕೆ.ಲಲಿತಾ, ಹಿರಿಯ ಉಪನ್ಯಾಸಕ ವಿ.ಅಮರೇಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net