ಮಹಾತ್ಮ ಗಾಂಧೀಜಿ ಹೆಸರು ಕೈಬಿಡುವ ದುರುದ್ದೇಶ

ಅಖಿಲ ಭಾರತ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ಸದಸ್ಯರು ಗಂಗಾವತಿ ತಾಲೂಕು ವಡ್ಡರಹಟ್ಟಿ ಗ್ರಾಪಂ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿ ಕಾರ್ಯದರ್ಶಿ ಈಶಪ್ಪಗೆ ಮನವಿ ಸಲ್ಲಿಸಿದರು. ಸಂಘದ ಜಿಲ್ಲಾ ಜಂಟಿ ಕಾರ್ಯದರ್ಶಿ ಕೆ.ಹುಸೇನಪ್ಪ, ಮಾಬುಸಾಬ್ ವಡ್ಡರಹಟ್ಟಿ, ರಾಮಣ್ಣ ದೋಟಿಹಾಳ, ಹೊನ್ನಪ್ಪ ಕತ್ತಿ ಆರಾಳ್, ತೋಟಪ್ಪ ಇತರರಿದ್ದರು.
ಅಖಿಲ ಭಾರತ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ಸದಸ್ಯರು ಗಂಗಾವತಿ ತಾಲೂಕು ವಡ್ಡರಹಟ್ಟಿ ಗ್ರಾಪಂ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿ ಕಾರ್ಯದರ್ಶಿ ಈಶಪ್ಪಗೆ ಮನವಿ ಸಲ್ಲಿಸಿದರು. ಸಂಘದ ಜಿಲ್ಲಾ ಜಂಟಿ ಕಾರ್ಯದರ್ಶಿ ಕೆ.ಹುಸೇನಪ್ಪ, ಮಾಬುಸಾಬ್ ವಡ್ಡರಹಟ್ಟಿ, ರಾಮಣ್ಣ ದೋಟಿಹಾಳ, ಹೊನ್ನಪ್ಪ ಕತ್ತಿ ಆರಾಳ್, ತೋಟಪ್ಪ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಖಿಲ ಭಾರತ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘ ಮನವಿ
  • ಗಂಗಾವತಿಯಲ್ಲಿ ಪ್ರತಿಭಟನೆ
ಗಂಗಾವತಿ: ನರೇಗಾ ಯೋಜನೆ ಹೆಸರು ಬದಲಾವಣೆ ಜತೆಗೆ ಕೂಲಿ ಕಾರ್ಮಿಕರನ್ನು ಹತ್ತಿಕ್ಕಲೆತ್ನಿಸುತ್ತಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಅಖಿಲ ಭಾರತ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ಸದಸ್ಯರು ತಾಲೂಕು ವಡ್ಡರಹಟ್ಟಿ ಗ್ರಾಪಂ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು.
ಕರ್ನಾಟಕ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ಸದಸ್ಯರೊಂದಿಗೆ ಪ್ರತಿಭಟಿಸಿದ ನಂತರ ಬೇಡಿಕೆ ಮನವಿಯನ್ನು ಕಾರ್ಯದರ್ಶಿ ಈಶಪ್ಪರಿಗೆ ಸಲ್ಲಿಸಿದರು.
ಸಂಘದ ಜಿಲ್ಲಾ ಜಂಟಿ ಕಾರ್ಯದರ್ಶಿ ಕೆ.ಹುಸೇನಪ್ಪ ಮಾತನಾಡಿ, ಮನೇರಗಾ ಯೋಜನೆ ಹೆಸರನ್ನು ವಿಕಸಿತ ಭಾರತ ಗ್ಯಾರಂಟಿ ಾರ್ ರೋಜ್‌ಗಾರ್ ಎಂದು ಬದಲಾಯಿಸಲು ಸರ್ಕಾರ ಯತ್ನಿಸುತ್ತಿದ್ದು, ಮಹಾತ್ಮ ಗಾಂಧಿ ಹೆಸರನ್ನು ತೆಗೆಯುತ್ತಿದೆ. ರಾಜಕೀಯ ಉದ್ದೇಶಕ್ಕಾಗಿ ಬದಲಾಯಿಸುತ್ತಿದ್ದು, ಅನುದಾನ ನಿಗದಿಯಲ್ಲೂ ಅನ್ಯಾಯ ಎಸಗುತ್ತಿದೆ. ಖಾತ್ರಿ ಯೋಜನೆ ಕೂಲಿಕಾರರ ಉದ್ಯೋಗ ಹಕ್ಕುಗಳನ್ನು ಕಸಿದುಕೊಳ್ಳುವ ನಿಟ್ಟಿನಲ್ಲಿ ಕಾನೂನು ರೂಪಿಸುತ್ತಿರುವುದು ಸರಿಯಲ್ಲ. ಹೊಸ ಕಾಯ್ದೆಯಿಂದ ಗುತ್ತಿಗೆದಾರರಿಗೆ ಅವಕಾಶ ಹೆಚ್ಚಲಿದ್ದು, ಕೂಲಿಕಾರರಿಗೆ ಅನ್ಯಾಯವಾಗಲಿದೆ. ಕೂಲಿ 370ರೂ.ಗಳಿಂದ 240 ರೂ.ರೂಪಾಯಿಗೆ ಇಳಿಸಲು ಸಂಚು ನಡೆಸಿದೆ. ಹೊಸ ಕಾಯ್ದೆ ಕೈಬಿಡದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಪದಾಧಿಕಾರಿಗಳಾದ ರಮೇಶ ಬಡಿಗೇರ, ಎಂ. ಬಸವರಾಜ, ಮರಿನಾಗಪ್ಪ, ಮಾರುತಿ, ಮೌನೇಶ, ತಿಪ್ಪಯ್ಯ, ಮರುಗಮ್ಮ, ಪಂಪಾವತಿ, ಗಾಳೆಪ್ಪ, ವೆಂಕಟೇಶ, ಮಾಬುಸಾಬ್ ವಡ್ಡರಹಟ್ಟಿ, ರಾಮಣ್ಣ ದೋಟಿಹಾಳ, ಹೊನ್ನಪ್ಪ ಕತ್ತಿ ಆರಾಳ್, ತೋಟಪ್ಪ, ಬಸವರಾಜ, ಹೊನ್ನೂರುಸಾಬ್, ಮಂಜುನಾಥ, ಅಮರೇಶ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net