ಗ್ರಾಮಕ್ಕೆ ಕುಡಿವ ನೀರು ಕಲ್ಪಿಸಿ

ಕುಡಿವ ನೀರು ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಶನಿವಾರ ಕೊಪ್ಪಳ ತಾಲೂಕಿನ ನಾಗೇಶನಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಗ್ರಾಮಸ್ಥರಾದ ದ್ಯಾಮವ್ವ ಸಿಂದೋಗಿ, ಕೀರವ್ವ ವಣಗೇರಿ, ಮುದಕವ್ವ ಸುಗ್ಗಿ, ಮುಮ್ತಾಜ್​ ಬೇಗಂ,  ಕೀರವ್ವ ನೆರಬೆಂಚಿ, ಕರಿಯಮ್ಮ ತಳವಾರ, ಕಾಶಿಂ ಕೆ.ಎನ್​. ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ನಾಗೇಶನಹಳ್ಳಿ ಗ್ರಾಮಸ್ಥರಿಂದ ಪ್ರತಿಭಟನೆ
ಕೊಪ್ಪಳ : ಕುಡಿವ ನೀರು ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ತಾಲೂಕಿನ ನಾಗೇಶನಳ್ಳಿ ಗ್ರಾಮಸ್ಥರು ಶನಿವಾರ ಖಾಲಿ ಕೊಡದೊಂದಿಗೆ ಪ್ರತಿಭಟನೆ ನಡೆಸಿದರು.
ಬಹುದಿನದಿಂದ ಸಮಸ್ಯೆ ತಲೆದೂರಿದೆ. ಜನರಿಗೆ ಕುಡಿವ ನೀರಿಲ್ಲ. ಜಾನುವಾರುಗಳ ಪರಿಸ್ಥಿತಿ ಭಿನ್ನವಾಗಿಲ್ಲ. ಅಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ. ಅಧಿಕಾರಿಗಳು ಟ್ಯಾಂಕರ್​ ನೀರು ಒದಗಿಸುತ್ತೇವೆಂದು ಸಭೆಗಳಲ್ಲಿ ಹೇಳುತ್ತಾರೆ. ಆದರೆ, ಒದಗಿಸುತ್ತಿಲ್ಲ. ಜನರಿಗೆ ಸರಿಯಾಗಿ ಸ್ಪಂದಿಸುವುದಿಲ್ಲ. ಸಮಸ್ಯೆ ಬಿಗಡಾಯಿಸಿದ್ದು, ನಮ್ಮ ಗೋಳು ಕೇಳುವವರಿಲ್ಲದಂತಾಗಿದೆ ಎಂದು ಅಳಲು ತೋಡಿಕೊಂಡರು.
ಕುಡಿವ ನೀರು ಮೂಲಭೂತ ಹಕ್ಕು. ತಕ್ಷಣ ನಮ್ಮ ಸಮಸ್ಯೆ ನಿವಾರಿಸಬೇಕು. ಕುಡಿವ ನೀರು ಒದಗಿಸಬೇಕು. ಸಂಬಂಧಿಸಿದ ಅಧಿಕಾರಿಗಳು ನಮ್ಮ ಗೋಳು ಕಣ್ತೆರೆದು ನೋಡಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
ಗ್ರಾಮಸ್ಥರಾದ ದ್ಯಾಮವ್ವ ಸಿಂದೋಗಿ, ಕೀರವ್ವ ವಣಗೇರಿ, ಮುದಕವ್ವ ಸುಗ್ಗಿ, ಮುಮ್ತಾಜ್​ ಬೇಗಂ, ಕೀರವ್ವ ನೆರಬೆಂಚಿ, ಕರಿಯಮ್ಮ ತಳವಾರ, ಕಾಶಿಂ ಕೆ.ಎನ್​. ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net