ಸಂಗೀತದಿಂದ ಮನಸ್ಸಿಗೆ ನೆಮ್ಮದಿ

ಬೇವೂರಿನಲ್ಲಿ ಸಪ್ತಸ್ವರಗಳ ಸಂಗೀತೋತ್ಸವ ಕಾರ್ಯಕ್ರಮವನ್ನು ಉದ್ಘಾಟನೆ ಸಂದರ್ಭ ಕನ್ನಡ-ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ, ಪ್ರಮುಖರಾದ ಮಂಜುನಾಥ ಕಟ್ಟಿಮನಿ, ಗಣ್ಯರಾದ ಶಿವಾನಂದ ಹಿರೇಮನಿ, ದ್ಯಾಮಣ್ಣ ಪೂಜಾರ, ಮರಿಸ್ವಾಮಿ ಕೆ.ಮಣ್ಣಿನವರ, ಹನುಮೇಶಪ್ಪ ಕೋನನಗೌಡ್ರ, ವೀರೇಶ ದೊಡ್ಮನಿ, ಬಸಪ್ಪ ಈಳಿಗೇರ್ ಇತರರು ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಹೇಳಿಕೆ
  • ಸಪ್ತಸ್ವರಗಳ ಸಂಗೀತೋತ್ಸವ
ಯಲಬುರ್ಗಾ: ಸಂಗೀತ ಕೇಳುವುದರಿಂದ ನೆಮ್ಮದಿ ಲಭಿಸುತ್ತದೆ. ಪ್ರತಿಯೊಬ್ಬರೂ ಕಲೆ, ಜನಪದ ಸಾಹಿತ್ಯ ಮತ್ತು ಸಂಗೀತವನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕು. ಗ್ರಾಮೀಣ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಕನ್ನಡ-ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಹೇಳಿದರು.
ಬೇವೂರು ಅಂಬೇಡ್ಕರ್ ಕಾಲನಿಯಲ್ಲಿ ಸೋಮವಾರ ಕುಷ್ಟಗಿಯ ಸ್ವರಸಾಮ್ರಾಟ ಸಂಗೀತ ಹಾಗೂ ಸಾಂಸ್ಕೃತಿಕ ಕಲಾ ಸಂಸ್ಥೆ ಮತ್ತು ಕನ್ನಡ-ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ 2025-26ನೇ ಸಾಲಿನ ಸಂಘ ಸಂಸ್ಥೆಗಳ ಧನಸಹಾಯ ಸಾಮಾನ್ಯ ವರ್ಗದ ಯೋಜನೆಯಡಿ ಆಯೋಜಿಸಿದ್ದ ಸಪ್ತಸ್ವರಗಳ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಿಜೆಪಿ ಯುವ ಮುಖಂಡ ಸಿದ್ದು ಕೆ.ಮಣ್ಣಿನವರ ಅಧ್ಯಕ್ಷತೆ ವಹಿಸಿದ್ದರು. ಜನಪದ ಸಂಗೀತ ದೇವೇಂದ್ರಗೌಡ ಪೂಜಾರ, ತತ್ವಪದ ಶೇಖರಗೌಡ ಪೂಜಾರ, ವಚನ ಸಂಗೀತ ಬಸವರಾಜ ಮಹಾಂತ, ಸುಗಮ ಸಂಗೀತ ವೀರೇಶ ಬೇವೂರ, ತಬಲಾ ಶಿವಮೂರ್ತಿ ದೊಡ್ಮನಿ, ಹಾರ್ಮೋನಿಯಂ ಮೌನೇಶ ಚನದನದಾಸರ ಸಂಗೀತ ಪ್ರಸ್ತುತಪಡಿಸಿದರು.
ಪ್ರಮುಖರಾದ ಮಂಜುನಾಥ ಕಟ್ಟಿಮನಿ, ಶಿವಾನಂದ ಹಿರೇಮನಿ, ದ್ಯಾಮಣ್ಣ ಪೂಜಾರ, ಮರಿಸ್ವಾಮಿ ಕೆ.ಮಣ್ಣಿನವರ, ಹನುಮೇಶಪ್ಪ ಕೋನನಗೌಡ್ರ, ವೀರೇಶ ದೊಡ್ಮನಿ, ಬಸಪ್ಪ ಈಳಿಗೇರ್, ಹುಲಗಪ್ಪ ಹಿರೇಮನಿ, ಮಾನಪ್ಪ ಭಂಡಾರಿ ಸೇರಿದಂತೆ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net