ಸಂಗೀತಕ್ಕಿದೆ ಮನಸ್ಸು ಹಗುರಗೊಳಿಸುವ ಶಕ್ತಿ

ಕುಷ್ಟಗಿಯಲ್ಲಿ ಸಂಗೀತ, ಸಾಧಕರಿಗೆ ಸನ್ಮಾನ ಹಾಗೂ ಪ್ರಶಸ್ತಿ ನೀಡುವ ಸಮಾರಂಭದಲ್ಲಿ ಕಿರುತೆರೆ ನಟ ಶಶಿಧರ್ ಕೋಟೆ, ಡಾ. ಕಾಡಯ್ಯ ಸ್ವಾಮಿಗಳು, ಬಾಲಚಂದ್ರಪ್ಪಜ್ಜ, ಸಂಸ್ಥೆಯ ಅಧ್ಯಕ್ಷ ರೆಹಮಾನ್ ಸಾಬ್ ಕೋಳೂರು, ಕೆ. ಹುಸೇನ್‌ಸಾಬ್, ಭೀಮಸೇನ ಕುಲಕರ್ಣಿ ಮತ್ತಿತರರು ಉಪಸ್ಥಿತರಿದ್ದರು.
ಕುಷ್ಟಗಿಯಲ್ಲಿ ಸಂಗೀತ, ಸಾಧಕರಿಗೆ ಸನ್ಮಾನ ಹಾಗೂ ಪ್ರಶಸ್ತಿ ನೀಡುವ ಸಮಾರಂಭದಲ್ಲಿ ಕಿರುತೆರೆ ನಟ ಶಶಿಧರ್ ಕೋಟೆ, ಡಾ. ಕಾಡಯ್ಯ ಸ್ವಾಮಿಗಳು, ಬಾಲಚಂದ್ರಪ್ಪಜ್ಜ, ಸಂಸ್ಥೆಯ ಅಧ್ಯಕ್ಷ ರೆಹಮಾನ್ ಸಾಬ್ ಕೋಳೂರು, ಕೆ. ಹುಸೇನ್‌ಸಾಬ್, ಭೀಮಸೇನ ಕುಲಕರ್ಣಿ ಮತ್ತಿತರರು ಉಪಸ್ಥಿತರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕರಿಬಸವ
  • ಶಿವಾಚಾರ್ಯ
  • ಸ್ವಾಮೀಜಿ

ಕುಷ್ಟಗಿ:

ಪ್ರತಿಯೊಬ್ಬರ ಮನಸ್ಸು ಹಗುರ ಮಾಡುವ ಶಕ್ತಿ ಸಂಗೀತಕ್ಕಿದ್ದು, ಆ ಕಲೆಗೆ ತಲೆದೂಗದವರಿಲ್ಲ ಎಂದು ಮದ್ದಾನೇಶ್ವರ ಮಠದ ಕರಿಬಸವ ಶಿವಾಚಾರ್ಯರು ಹೇಳಿದರು.

ಪಟ್ಟಣದ ಮಲ್ಲಿಕಾರ್ಜುನ ಭವನದಲ್ಲಿ ಹಿರೇಮನ್ನಾಪುರದ ಸೌರಭ ಸಾಂಸ್ಕೃತಿಕ ಕಲಾ ಬಳಗ ಸಹಯೋಗದೊಂದಿಗೆ ಆಯೋಜಿಸಿದ್ದ ಗಾಯನ, ನೃತ್ಯ, ಸುಗಮ ಸಂಗೀತ, ಜಾನಪದ ಹಾಗೂ ಕರೊಕೆ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭಾರತೀಯ ಸಂಸ್ಕೃತಿಯನ್ನು ಉಳಿಸಿ-ಬೆಳೆಸುವ ಸಂಸ್ಥೆಗಳ ಶ್ರಮದಿಂದ ಸಮಾಜದಲ್ಲಿ ಉತ್ತಮ ಸಂಸ್ಕಾರ ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು.
ಶಂಕರಲಿಂಗ ಮಠದ ಬಾಲಚಂದ್ರಪ್ಪಜ್ಜ ಮಾತನಾಡಿ, ಧರ್ಮ ರಕ್ಷಣೆ ಬರೀ ಮಠಗಳಿಂದ ಮಾತ್ರ ಸಾಧ್ಯವಿಲ್ಲ. ಹಸಿವು ಮತ್ತು ಬಡತನದಲ್ಲಿರುವವರ ರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಿದಾಗ ಧರ್ಮ ರಕ್ಷಣೆ ಸಾಧ್ಯ. ಮಠಗಳು ಜಾತ್ಯತೀತ ಮನೋಭಾವದಿಂದ ಕಾರ್ಯನಿರ್ವಹಿಸಬೇಕಾದ ಅಗತ್ಯವಿದೆ. ಯುವಜನತೆ ದಾರಿ ತಪ್ಪುತ್ತಿರುವ ಇಂದಿನ ದಿನಮಾನಗಳಲ್ಲಿ ಸಂಗೀತ ಕಾರ್ಯಕ್ರಮ ಶ್ಲಾಘನೀಯ ಎಂದರು.
ಕಿರುತೆರೆ ನಟ ಶಶಿಧರ್ ಕೋಟೆ ಮಾತನಾಡಿದರು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು ಮತ್ತು ವಿವಿಧ ಕ್ಷೇತ್ರಗಳ ಸಾಧಕರಿಗೆ ವೇದಮೂರ್ತಿ ಡಾ. ಕಾಡಯ್ಯ ಶಿವಮೂರ್ತಿ ಸ್ವಾಮಿಗಳು ‘ಕರ್ನಾಟಕ ರತ್ನ ಪ್ರಶಸ್ತಿ’ ನೀಡಿ ಗೌರವಿಸಿದರು.
ಸಾಹಿತಿ ಆರ್.ಕೆ. ಸುಬೇದಾರ್, ಶಿವಾನಂದ ಹಿರೇಮಠ, ಫಕೀರಪ್ಪ ಹೊಸಕಲ್, ರೆಹಮಾನ್ ಸಾಬ್ ಕೋಳೂರು, ಕೆ. ಹುಸೇನ್‌ಸಾಬ್, ಬಷೀರ್ ಅಹಮ್ಮದ್, ಇಮಾಮ್ ಸಾಬ್, ರಾಜಮಹಮ್ಮದ್ ಡಾಲಾಯತ್, ಭೀಮಸೇನ ಕುಲಕರ್ಣಿ, ಸುನಿಲ್ ಕುಮಾರ್, ಶರಣಯ್ಯ, ಮಹೇಶ ಹಡಪದ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net