45 ಲಕ್ಷ ರೂ. ಅಧಿಕ ವಹಿವಾಟು

ಮೇಳದಲ್ಲಿ ಬಗೆ ಬಗೆಯ ದ್ರಾಕ್ಷಿ ವಿಕ್ಷೀಸಿದ ಮಹಿಳೆಯರು.
ಮೇಳದಲ್ಲಿ ಬಗೆ ಬಗೆಯ ದ್ರಾಕ್ಷಿ ವಿಕ್ಷೀಸಿದ ಮಹಿಳೆಯರು.
Published on

ಪ್ರಮುಖ ಮುಖ್ಯಾಂಶಗಳು

  • ಯರ್ಸಗುಂಬ ನೋಡಲು ಜನವೋ ಜನ
  • ಹಣ್ಣು ಪ್ರದರ್ಶನ-ವಾರಟ ಮೇಳಕ್ಕೆ ಅದ್ದೂರಿ ತೆರೆ
ಕೊಪ್ಪಳ: ಮಹಾ ಶಿವರಾತ್ರಿ ನಿಮಿತ್ತ ತೋಟಗಾರಿಕೆ ಇಲಾಖೆ ಆವರಣದಲ್ಲಿ ಆಯೋಜಿಸಲಾಗಿದ್ದ 9ನೇ ವರ್ಷದ ಹಣ್ಣು, ಜೇನು ಮತ್ತು ಅಣಬೆ ಪ್ರದರ್ಶನ ಹಾಗೂ ಮಾರಾಟ ಮೇಳ ಉತ್ತಮ ಯಶಸ್ಸಿನೊಂದಿಗೆ ಸೋಮವಾರ ಸವಾರೋಪಗೊಂಡಿತು. ಐದು ದಿನಗಳಲ್ಲಿ ಬರೋಬ್ಬರಿ 45 ಲಕ್ಷ ರೂ. ಅಧಿಕ ವಹಿವಾಟು ನಡೆಸುವ ಮೂಲಕ ರೈತರು ಮತ್ತು ಗ್ರಾಹಕರ ನಡುವೆ ಭರವಸೆಯ ಸೇತುವೆಯಾಗಿದೆ.
ರೈತರಿಗಾಗಿ 25ಕ್ಕೂ ಹೆಚ್ಚು ಉಚಿತ ಮಳಿಗೆಗಳನ್ನು ಏರ್ಪಡಿಸಲಾಗಿತ್ತು. ದೇಶ ವಿದೇಶಗಳಲ್ಲಿನ 50ಕ್ಕೂ ಹೆಚ್ಚು ತಳಿಗಳ ಹಣ್ಣು ಮತ್ತು ಅಣಬೆಗಳನ್ನು ಪ್ರದರ್ಶಿಸಲಾಯಿತು. 30ಸಾವಿರಕ್ಕೂ ಅಧಿಕ ಗ್ರಾಹಕರು, ರೈತರು ಭೇಟಿ ನೀಡಿ ಮೇಳದಲ್ಲಿನ ವಿಶೇಷತೆಗಳನ್ನು ಕಣ್ತುಂಬಿಕೊಂಡರು.
ಈ ಬಾರಿಯ ಮೇಳದಲ್ಲಿ ಜಗತ್ತಿನ ಅತ್ಯಂತ ದುಬಾರಿ ಅಣಬೆ ಖ್ಯಾತಿಯ ಯರ್ಸಗುಂಬ ಕೇಂದ್ರ ಬಿಂದುವಾಗಿತ್ತು. ಇದು ಒಂದು ಕೆ.ಜಿ.ಗೆ 15 ಲಕ್ಷ ರೂ. ಬೆಲೆ ಬಾಳುವ, ಹಿವಾಲಯ ಪ್ರದೇಶದಲ್ಲಿ ಬೆಳೆಯುವ ಈ ವಿಶೇಷ ಅಣಬೆ ನೋಡಲು ಜನಸ್ತೋಮವೇ ಹರಿದು ಬಂದಿತ್ತು. ಕ್ಯಾನ್ಸರ್ ವಿರೋಧಿ ಗುಣ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಈ ಅಣಬೆ ಬಗ್ಗೆ ರೈತರು ಮತ್ತು ಸಾರ್ವಜನಿಕರು ಕುತೂಹಲದಿಂದ ವಾಹಿತಿ ಪಡೆದರು. ಇದರೊಂದಿಗೆ 10ಕ್ಕೂ ಹೆಚ್ಚು ತಳಿಯ ಅಣಬೆಗಳು ಪ್ರದರ್ಶನದಲ್ಲಿದ್ದವು.
ಕೇವಲ ಹಸಿ ಅಣಬೆ ವಾತ್ರವಲ್ಲದೆ, ಅಣಬೆಯಿಂದ ತಯಾರಿಸಿದ ಬಿಸ್ಕತ್ತು, ಚಕ್ಕಲಿ, ಉಪ್ಪಿನಕಾಯಿ ಹಾಗೂ ಮಸಾಲ ಪುಡಿಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಜೇನು ವಿಭಾಗದಲ್ಲಿ 3 ಟನ್ ಜೇನುತುಪ್ಪದ ಜತೆಗೆ ಜೇನಿನ ಮೇಣದಿಂದ ತಯಾರಿಸಿದ ಲಿಪ್‌ಸ್ಟಿಕ್, ಸೋಪು ಹಾಗೂ ಬಾಮ್‌ಗಳು ಗ್ರಾಹಕರನ್ನು ಸೆಳೆದವು. ಮಶ್ರೂಮ್ ಮಂಚೂರಿ, ಪೆಪ್ಪರ್ ಡ್ರೈ ನಂತಹ ಖಾದ್ಯಗಳು ಜನರ ನಾಲಿಗೆಗೆ ರುಚಿ ನೀಡಿದವು.

ಹಣ್ಣುಗಳ ಲೋಕ

ಮೇಳದಲ್ಲಿ ಹಣ್ಣುಗಳ ವಾರಾಟ ಜೋರಾಗಿತ್ತು. ವಿಶೇಷವಾಗಿ ಹಳದಿ ಮತ್ತು ಕೆಂಪು ತಿರುಳಿನ ಕಲ್ಲಂಗಡಿ ಹಣ್ಣುಗಳಿಗೆ ಭಾರಿ ಬೇಡಿಕೆ ಕೇಳಿಬಂತು. ಮೇಳದಲ್ಲಿ ಒಟ್ಟು 30 ಟನ್ ಕಲ್ಲಂಗಡಿ, 20 ಟನ್ ಕರಬೂಜ. 5 ಟನ್ ದಾಳಿಂಬೆ ಹಾಗೂ 8 ಟನ್ ದ್ರಾಕ್ಷಿ ಸೇರಿದಂತೆ ಅಂಜೂರ, ಪೇರಲ, ಬಾಳೆ ಹಾಗೂ ಡ್ರಾಗನ್ ಫ್ರೂಟ್ಸ್ ಹೆಚ್ಚಿನ ಪ್ರವಾಣದಲ್ಲಿ ವಾರಾಟವಾದವು. ಸ್ಥಳದಲ್ಲೇ ಹಣ್ಣುಗಳನ್ನು ಕತ್ತರಿಸಿ ಸವಿಯುವ ವ್ಯವಸ್ಥೆಯೂ ಇತ್ತು. 7 ಟನ್ ಕಲ್ಲಂಗಡಿಯನ್ನು ಗ್ರಾಹಕರು ಮೇಳದಲ್ಲೇ ಸವಿದರು.

ಐದು ದಿನಗಳ ಹಣ್ಣುಗಳ ಪ್ರದರ್ಶನ-ವಾರಾಟ ಮೇಳದಲ್ಲಿ ಸಾಕಷ್ಟು ರೈತರು, ಮಹಿಳೆಯರು ಬಂದು ಹಿವಾಲಯದಲ್ಲಿ ಬೆಳೆಯುವ ವಯಾಗ್ರ ಅಣಬೆ ಕಂಡು ಆಶ್ಚರ್ಯ ಚಕಿತರಾದರು. 45 ಲಕ್ಷ ರೂ.ವಹಿವಾಟು ನಡೆದಿದೆ. 7 ಟನ್ ಕಲ್ಲಂಗಡಿ ಹಣ್ಣನ್ನು ನೋಡುಗರು ಸ್ಥಳದಲ್ಲೇ ಸವಿದ್ದಾರೆ.

ಇಲಾಖೆಯ ಸಹಾಯಧನ ಪಡೆದು ಬೆಳೆದ ನಮ್ಮ ಅಣಬೆಗೆ ಈ ಮೇಳವು ಉತ್ತಮ ವಾರುಕಟ್ಟೆ ಒದಗಿಸಿದೆ. ಗ್ರಾಹಕರಿಂದ ನೇರ ಬೇಡಿಕೆ ಬರುತ್ತಿರುವುದು ಸಂತಸ ತಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net