ಮೂವರು ಸಿಎಂಗಳು ಹಾಗೂ ಕೇಂದ್ರ, ರಾಜ್ಯದ ಸಚಿವರು, ಸಂಸದರು, ಶಾಸಕರು ಭಾಗಿಯಾಗುವ ಕಾರಣ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಆರು ಎಸ್ಪಿಗಳು, 12 ಎಎಸ್ಪಿಗಳು, 25 ಡಿವೈಎಸ್ಪಿಗಳು, 50 ಪಿಐ ಮತ್ತು ಪಿಎಸ್ಐಗಳು, 1500 ಪೊಲೀಸರನ್ನು ನಿಯೋಜಿಸಲಾಗಿದೆ. ಕೆಎಸ್ಆರ್ಪಿ ತುಕಡಿಗಳನ್ನು ಬಳಕೆ ಮಾಡಲಾಗುತ್ತಿದೆ. ಹುಲಿಗಿ ಕ್ರಾಸ್ನಿಂದ ಮುನಿರಾಬಾದ್ ಪ್ರವೇಶಿಸುವ ಮಾರ್ಗ ಸಾರ್ವಜನಿಕರಿಗೆ ರ್ನಿಬಂಧಿಸಿದ್ದು, ಹೆದ್ದಾರಿ ಮೂಲಕವೇ ಗ್ರಾಮದ ಒಳಗೆ ಪ್ರವೇಶಿಸಬೇಕು. ವೇದಿಕೆ ಸುತ್ತಲಿನ ಭಾಗ ಹಾಗೂ ಇತರೆಡೆ 150 ಬಸ್, 450 ಇತರ ವಾಹನ ಹಾಗೂ ಬೈಕ್ಗಳಿಗೆ ಪಾರ್ಕಿಂಗ್ ಅವಕಾಶ ಕಲ್ಪಿಸಲಾಗಿದೆ.